ನೈಸರ್ಗಿಕ ಸುಂದರ ತ್ವಚೆ ಪಡೆಯಲು ಏನೇನು ಮಾಡಬೇಕು?

First Published Jan 15, 2021, 6:14 PM IST

ನೈಸರ್ಗಿಕವಾಗಿ ಸುಂದರ ತ್ವಚೆ ಪಡೆಯಲು ಅಥವಾ  ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಅದನ್ನು ಪಡೆದುಕೊಳ್ಳುವುದು ಹೇಗೆ ಎಂಬ ಸರಿಯಾದ ವಿಧಾನದ ಬಗ್ಗೆ ತಿಳಿಯದೆ ಇರಬಹುದು. ಇಲ್ಲಿ ಉತ್ತಮ ನೈಸರ್ಗಿಕ ತ್ವಚೆ ಪಡೆಯಲು ಏನು ಮಾಡಬೇಕು? ಏನು ಮಾಡಬಾರದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ ತಿಳಿದುಕೊಳ್ಳಿ.. 

ಎಕ್ಸ್ ಫೋಲಿಯೇಟ್ ಮಾಡಿಒಳ್ಳೆಯ ನಿದ್ರೆಗಾಗಿ ಹಾಸಿಗೆಯನ್ನು ಹಿಡಿಯುವ ಮುನ್ನ ಯಾವಾಗಲೂ ಮೇಕಪ್ ತೆಗೆಯಿರಿ. ವಾರದಲ್ಲಿ ಒಂದು ಅಥವಾ ಎರಡು ಬಾರಿಯಾದರೂ ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡುವುದನ್ನು ಮರಿಯಬೇಡಿ. .
undefined
ಸೂರ್ಯ ಮತ್ತು ಚರ್ಮಯಾವಾಗಲೂ 15 SPF ಇರುವ ಸನ್ ಸ್ಕ್ರೀನ್ ಅನ್ನು ಹಚ್ಚಿ, ಅದು UVA ಮತ್ತು UVB ಕಿರಣಗಳೆರಡನ್ನೂ ನಿರ್ಬಂಧಿಸುತ್ತದೆ. ಈ ಉತ್ಪನ್ನವನ್ನು ಹೊರಗೆ ಮೋಡ ಅಥವಾ ಚಳಿಯಿರಲಿ ಬಳಸುವುದನ್ನು ಮರಿಯಬೇಡಿ.
undefined
ತಿನ್ನುವುದುತಟ್ಟೆಯಲ್ಲಿ ಏನನ್ನು ಹಾಕುತ್ತೀರಿ ಎಂಬುದನ್ನು ಗಮನಿಸಿ. ತಾಜಾ ಹಣ್ಣುಗಳು, ಸೊಪ್ಪುಗಳು, ಪ್ರೋಟೀನುಗಳು ಮತ್ತು ವಿಟಮಿನ್‌ಗಳು ಇರಲಿ. ಆದರೆ ಮಸಾಲೆ, ಹುಳಿ, ಉಪ್ಪು, ಕರಿದ ಆಹಾರಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.
undefined
ಬೆವರುಓಡಿ, ಜಾಗಿಂಗ್ ಅಥವಾ ಯೋಗ ಮಾಡಿ - ಸಕ್ರಿಯರಾಗಿರಿ. ವರ್ಕ್ ಔಟ್ ಮಾಡುವ ಮೊದಲು ಅಥವಾ ನಂತರ ಸ್ಕಿನ್ ಕೇರ್ ಬಗ್ಗೆಯೂ ಗಮನ ಇರಲಿ.
undefined
ನಿದ್ರೆಕನಿಷ್ಠ 8 ಗಂಟೆಗಳ ಕಾಲ ನಿದ್ದೆ ಮಾಡಲು ಪ್ರಯತ್ನಿಸಿ. ರಾತ್ರಿ ಮಲಗುವ ಮುನ್ನ ಮುಖವನ್ನು ಮಾಯಿಶ್ಚರೈಸ್ ಮಾಡಲು ಮರೆಯಬೇಡಿ.
undefined
ಹೈಡ್ರೇಟ್ಪ್ರತಿದಿನ ಕನಿಷ್ಠ 8 ಲೋಟನೀರು ಕುಡಿಯುತ್ತಿರಬೇಕು. ರೋಸ್ ವಾಟರ್ ಕಡೆಗಣಿಸಬೇಡಿ. ಇದು pH ಮಟ್ಟವನ್ನು ಕಾಪಾಡುತ್ತದೆ ಮತ್ತು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.
undefined
ಮೊಡವೆಗೆ ಬೈ ಹೇಳಿಬೆಚ್ಚಗಿನ ನೀರಿನಿಂದ ಮುಖವನ್ನು ದಿನಕ್ಕೆ 3 ಬಾರಿ ತೊಳೆಯಿರಿ. ಮೊಡವೆಗಳನ್ನು ಎಂದಿಗೂ ಪಾಪ್ ಮಾಡಬೇಡಿ ಏಕೆಂದರೆ ಇದು ಊತ ಮತ್ತು ಕಲೆಗಳಿಗೆ ಕಾರಣವಾಗಬಹುದು.
undefined
ಆಯುರ್ವೇದ ಉತ್ಪನ್ನ ಬಳಸಿಚರ್ಮಕ್ಕೆ ಪೋಷಣೆ ನೀಡಲು ಮತ್ತು ಉಸಿರಾಡಲು ಆಯುರ್ವೇದ ಉತ್ಪನ್ನಗಳನ್ನು ಬಳಸಿ. ಬೇಸಿಕ್ಸ್ ಅನ್ನು ನಿರ್ಲಕ್ಷಿಸಬೇಡಿ. ಸರಿಯಾದ ರೀತಿಯಲ್ಲಿ ಉಸಿರಾಡುವುದು ಮೊಡವೆ ಮತ್ತು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
undefined
ಆರೋಗ್ಯಕರ ಹವ್ಯಾಸಗಳುನಿಮಗಾಗಿ ಸಮಯವನ್ನು ತೆಗೆದುಕೊಳ್ಳಿ ಮತ್ತು ಉತ್ತಮ ಆಹಾರ, ಉತ್ತಮ ವಿಶ್ರಾಂತಿ. ಮುಖದ ಸ್ನಾಯುಗಳನ್ನು ನಿರ್ಲಕ್ಷಿಸಬೇಡಿ, ಪ್ರತಿದಿನ 5-10 ನಿಮಿಷಗಳ ಕಾಲ ವ್ಯಾಯಾಮ ಮಾಡಿ.
undefined
ಹಣ್ಣಿನ ರಸ ಸೇವಿಸಿ :ಯಥೇಚ್ಚವಾಗಿ ವಿವಿಧ ರೀತಿಯ ಹಣ್ಣುಗಳ, ತರಕಾರಿಗಳ ರಸ ಅಥವಾ ಜ್ಯೂಸ್ ಸೇವಿಸಿ. ಇದರಿಂದ ತ್ವಚೆ ಹೈಡ್ರೇಟ್ ಆಗಿರುತ್ತದೆ. ಸುಂದರವಾಗುತ್ತದೆ.
undefined
click me!