ರಾಜಕೀಯಕ್ಕೆ ಧುಮುಕಿರುವ ಕಂಗನಾ ಸಿನಿಮಾ ನಟನೆ ಬಿಟ್ಟುಬಿಡುವರೇ? ಈ ಬಗ್ಗೆ ನಟಿ ಹೇಳಿದ್ದೇನು?

By Shriram Bhat  |  First Published May 7, 2024, 3:57 PM IST

ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಾಂದಿ ಕ್ಷೇತ್ರದಿಂದ  ನಟಿ ಕಂಗನಾ ರಣಾವತ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. 


ನಟಿ ಕಂಗನಾ ರಣಾವತ್ ಈ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಬಹುತೇಕರಿಗೆ ಗೊತ್ತಿದೆ. ಈಗ ಎದ್ದಿರುವ ಪ್ರಶ್ನೆಯೇನೆಂದರೆ, ಚುನಾವಣೆಯ ಬಳಿಕ ನಟಿ ಕಂಗನಾ, ಒಮ್ಮೆ ಗೆದ್ದರೆ, ಸಿನಿಮಾ ನಟನೆಯನ್ನು ಬಿಟ್ಟುಬಿಡುವರೇ ಎಂಬ ಚರ್ಚೆ ಶುರುವಾಗಿದೆ. ಸ್ವತಃ ನಟಿ ಕಂಗನಾ ಅವರು ತಮ್ಮ ಚುನಾವಣೆ ಭಾಷಣದಲ್ಲಿ ಈ ಬಗ್ಗೆ ಮಾತನಾಡಿದ್ದರು.

ನನ್ನ ಸಾಕಷ್ಟು ಸಿನಿಮಾಗಳು ಶೂಟಿಂಗ್ ಹಂತದಲ್ಲಿ ಇರುವುದರಿಂದ ಮತ್ತು ಸಹಿ ಹಾಕಿರುವ ಕೆಲವು ಚಿತ್ರಗಳು ಇರುವುದರಿಂದ ತಕ್ಷಣ ನಾನು ಸಿನಿಮಾ ನಟನೆ ಬಿಡುವುದು ಅಸಾಧ್ಯ ಎಂದಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಾಂದಿ ಕ್ಷೇತ್ರದಿಂದ  ನಟಿ ಕಂಗನಾ ರಣಾವತ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಂಗನಾ ಸ್ಪರ್ಧಿಸಿರುವ ಮಾಂದಿ ಕ್ಷೇತ್ರವು ಕಾಂಗ್ರೆಸ್‌ ಪಕ್ಷದ ಬಿಗಿಹಿಡಿತದಲ್ಲಿರುವ ಕ್ಷೇತ್ರವಾಗಿದೆ.

Tap to resize

Latest Videos

ಬಾಲಿವುಡ್ ಆಫರ್ ಬಂದಿದೆ, ರಿಜೆಕ್ಟ್ ಮಾಡಿದ್ದೇನೆ ಅಂದ್ರು ಸಮಂತಾ; ಸೀಕ್ರೆಟ್ ರಿವೀಲ್ ಮಾಡಿದ್ರಾ?

ಒಮ್ಮ ಈ ಕ್ಷೇತ್ರದಿಂದ ನಟಿ ಕಂಗನಾ ಚುನಾವಣೆಯಲ್ಲಿ ಗೆದ್ದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಸದ್ಯ ನಟಿ ಕಂಗನಾ ರಾಜಕೀಯ ಪಡಸಾಲೆಗೆ ಎಂಟ್ರಿ ಕೊಟ್ಟಿದ್ದು, ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಕಂಗನಾ ನಟಿಸಿರುವ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದರೂ, ಅಲ್ಲಿ 2019ರಲ್ಲಿ 4 ಕ್ಷೇತ್ರಗಳನ್ನು ಭಾರತೀಯ ಜನತಾ ಪಾರ್ಟಿ (BJP) ಗೆದ್ದುಕೊಂಡಿದೆ.

ಸ್ನೇಹ, ಸಂಬಂಧಗಳ ಬಗ್ಗೆ ಪೂಜಾ ಹೆಗಡೆ ಪಾಠ, ಅಷ್ಟೊಂದು ಅನುಭವ ಇದ್ಯಾ ಅಂತಿದಾರೆ ನೆಟ್ಟಿಗರು!

ಹೀಗಾಗಿ ಸಹಜವಾಗಿಯೇ ಕಂಗನಾ ಸ್ಪರ್ಧಿಸಿರುವ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿರುವ ಕ್ಷೇತ್ರ ಎನಿಸಿಕೊಂಡಿದೆ. ಆದರೆ, 2021ರಲ್ಲಿ ಈ ಕ್ಷೇತ್ರವನ್ನು ಬಿಜೆಪಿಯ ರಾಮ್ ಸ್ವರೂಪ್ ಶರ್ಮಾ ಅವರನ್ನು ಸೋಲಿಸಿ ಪ್ರತಿಭಾದೇವಿ ಸಿಂಗ್ ಎನ್ನುವವರು ಉಪ-ಚುನಾವಣೆಯಲ್ಲಿ ಗೆದ್ದುಕೊಂಡಿದ್ದರು. ಈಗ ಈ ಕ್ಷೇತ್ರವು ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ. ಜೂನ್ 01ರಂದು ಚುನಾವಣೆಯ ಫಲಿತಾಂಶವು ಜೂನ್ 04ರಂದು ಪ್ರಕಟವಾಗಲಿದೆ. 

ಪರಮ್-ಧನಂಜಯ್ 'ಕೋಟಿ'ಯಲ್ಲಿ ದಿನೂ ಸಾವ್ಕಾರ್; ತೆರೆ ಮೇಲೆ ರಮೇಶ್ ಇಂದಿರಾ ಘರ್ಜನೆ!

ಅಂದಹಾಗೆ, ನಟಿ ಕಂಗನಾ ರಣಾವತ್‌ ಅವರು ಮಾಮೂಲಿ ಬಾಲಿವುಡ್ ನಟಿ ಎನ್ನಲಾಗದು. ಏಕೆಂದರೆ, ಅವರು ನಟಿಯಾಗಿದ್ದಾಗಲೂ ತಮ್ಮ ಹಾಗೂ ತಂಗಿಯ ವಿರುದ್ಧ ನಡೆದಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುತ್ತಲೇ ಇದ್ದರು. ಜೊತೆಗೆ, ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ವಿರುದ್ಧದ ಅನ್ಯಾಯ ಹಾಗೂ ಪಿತೂರಿಗಳ ಬಗ್ಗೆ ನಟಿ ಕಂಗನಾ ರಣಾವತ್ ಧ್ವನಿ ಎತ್ತುತ್ತಾರೆ ಹಾಗೂ ಬಲವಾಗಿ ಖಂಡಿಸುತ್ತಾರೆ. ಈಗಾಗಲೇ ಹಲವಾರು ವರ್ಷಗಳಿಂದ ಕಂಗನಾ ರಾಜಕೀಯಕ್ಕೆ ಬರುತ್ತಾರೆ ಎಂದು ಹಲವರು ಹೇಳುತ್ತಲೇ ಇದ್ದರು. ಈಗ ಆ ಮಾತು ನಿಜವಾಗಿದೆ. 

click me!