ಮನೆಗೆ ಗೆಸ್ಟ್ ಬಂದಾಗ ನಾವು ಟಾಯ್ಲೆಟ್ ಬಳಸುವ ಮೊದಲು ಅವರಿಗೆ ಅವಕಾಶ ನೀಡ್ತೇವೆ. ಆದ್ರೆ ಈ ಹುಡುಗಿ ಮನೆಯಲ್ಲಿರೋ ಟಾಯ್ಲೆಟ್ ತಾನು ಬಳಸಿ, ಅತಿಥಿಗಳನ್ನು ಬಯಲಿಗೆ ಕಳಿಸ್ತಾಳೆ. ಆಕೆ ರೂಲ್ಸ್ ವಿಚಿತ್ರವಾಗಿದೆ.
ಬಯಲು ಶೌಚಾಲಯ ನಿಯಂತ್ರಣಕ್ಕೆ ಭಾರತದಲ್ಲಿ ನಾನಾ ಪ್ರಯತ್ನ ನಡೆಯುತ್ತಿದೆ. ಕಡಿಮೆ ಬೆಲೆಗೆ ಮನೆಗೊಂದು ಶೌಚಾಲಯ ನಿರ್ಮಿಸಿಕೊಡುವ ಜವಾಬ್ದಾರಿಯನ್ನು ಸರ್ಕಾರ ಹೊತ್ತುಕೊಂಡಿದೆ. ಹಿಂದೆ ಬಯಲಿನಲ್ಲಿ ಮಲ ವಿಸರ್ಜನೆ ಮಾಡ್ತಿದ್ದ ಜನರು ಈಗ ಮನೆಯಲ್ಲಿಯೇ ಆರಾಮವಾಗಿ ತಮ್ಮ ನಿತ್ಯದ ಕೆಲಸ ಮುಗಿಸ್ತಿದ್ದಾರೆ. ಮನೆಯಲ್ಲೊಂದು ಟಾಯ್ಲೆಟ್ ಇದ್ರೆ ಮನೆಗೆ ಬರುವ ಅತಿಥಿಗಳಿಗೂ ಅನುಕೂಲ ಎಂದು ಜನರು ಆಲೋಚನೆ ಮಾಡ್ತಾರೆ. ಮನೆಗೆ ಗೆಸ್ಟ್ ಬರ್ತಾರೆ ಎನ್ನುವ ಸಮಯದಲ್ಲಿ ಮನೆಯ ಉಳಿದ ಜಾಗದ ಜೊತೆ ಟಾಯ್ಲೆಟ್ ಕ್ಲೀನ್ ಇದ್ಯಾ ಅಂತ ಎಲ್ಲರೂ ಚೆಕ್ ಮಾಡ್ತಾರೆ. ಅವರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡ್ತಾರೆ. ಆದ್ರೆ ಈ ಹುಡುಗಿ ಮನೆಗೆ ಹೋದ್ರೆ ನೀವು ಮಲ ವಿಸರ್ಜನೆ ಮಾಡೋದು ಸುಲಭ ಅಲ್ಲ. ಆಕೆ ಮನೆಯಲ್ಲಿ ಟಾಯ್ಲೆಟ್ ಇದ್ರೂ ಅಲ್ಲಿ ಗೆಸ್ಟ್ ಗಳಿಗೆ ಅವಕಾಶ ಇಲ್ಲ. ನೀವು ಆಕೆ ಮನೆ ಪಕ್ಕದಲ್ಲಿರುವ ತೋಟಕ್ಕೆ ಹೋಗ್ಬೇಕು. ಅಲ್ಲಿ ಹೊಂಡ ತೋಡಿ, ಹುಡುಗಿ ಹೇಳಿರುವ ಎಲ್ಲ ರೂಲ್ಸ್ ಫಾಲೋ ಮಾಡ್ಬೇಕು. ಅಷ್ಟೇ ಅಲ್ಲ ಆಕೆಗೆ ಟಿಪ್ಸ್ ರೂಪದಲ್ಲಿ ಹಣ ಕೂಡ ನೀಡಿ ಬರಬೇಕು. ಸಾಮಾಜಿಕ ಜಾಲತಾಣದಲ್ಲಿ ಶೌಚಾಲಯದ ರೂಲ್ಸ್ ಹಂಚಿಕೊಂಡಿರುವ ಹುಡುಗಿ ಈಗ ವೈರಲ್ ಆಗಿದ್ದಾಳೆ.
frauporkchop ಹೆಸರಿನ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಅಮೆರಿಕ (America) ದ ಅರಿಜೋನಾದ ಐವಿ ಬ್ಲೂಮ್ ಹೆಸರಿನ ಯುವತಿ ವಿಡಿಯೋವನ್ನು ನೀವು ನೋಡ್ಬಹುದು. ವಿಡಿಯೋದಲ್ಲಿ ಯುವತಿ ಗೆಸ್ಟ್ ಟಾಯ್ಲೆಟ್ (Toilet) ಬಗ್ಗೆ ಮಾಹಿತಿ ನೀಡಿದ್ದಾಳೆ. ಆಕೆ ಮೊದಲು ತೋಟವನ್ನು ತೋರಿಸ್ತಾಳೆ. ನಂತ್ರ ತನ್ನ ಮನೆ ಶೌಚಾಲಯ ತೋರಿಸ್ತಾಳೆ. ಆ ನಂತ್ರ ತೋಟದಲ್ಲಿರುವ ಬಯಲು ಟಾಯ್ಲೆಟ್ ಯೂಸ್ ಮಾಡೋದು ಹೇಗೆ ಎಂಬುದನ್ನು ಹೇಳ್ತಾಳೆ.
ಬಾಲಿವುಡ್ ಆಫರ್ ಬಂದಿದೆ, ರಿಜೆಕ್ಟ್ ಮಾಡಿದ್ದೇನೆ ಅಂದ್ರು ಸಮಂತಾ; ಸೀಕ್ರೆಟ್ ರಿವೀಲ್ ಮಾಡಿದ್ರಾ?
ಮೊದಲು ಐವಿ ಬ್ಲೂಮ್, ಅತಿಥಿಗಳಿಗೆ ಮನೆಯೊಳಗಿರುವ ಶೌಚಾಲಯವನ್ನೇ ಬಳಸಲು ನೀಡ್ತಿದ್ದಳು. ಆದ್ರೆ ಅದರಿಂದ ಶೌಚಾಲಯ ಕೊಳಕಾಗುತ್ತೆ, ಸೋಂಕು ಹರಡುತ್ತೆ ಎನ್ನುವ ಕಾರಣಕ್ಕೆ ಬಯಲು ಶೌಚಾಲಯದ ವ್ಯವಸ್ಥೆ ಮಾಡಿದ್ದಾಳೆ. ಆಕೆ ಮನೆಗೆ ಬರುವ ಅತಿಥಿಗಳು ಶೌಚಾಲಯಕ್ಕೆ ಹೋಗ್ಬೇಕು ಅಂದ್ರೆ ಸ್ವಲ್ಪ ಕಷ್ಟಪಡಬೇಕು.
ಮೊದಲು ಐವಿ ಬ್ಲೂಮ್ ಎರಡು ಕವರ್ ನೀಡ್ತಾಳೆ. ಅದನ್ನು ಬೂಟ್ ಮೇಲೆ ಹಾಕಿಕೊಳ್ಳಬೇಕು. ಅದಾದ ನಂತ್ರ ಈಗಾಗಲೇ ಬಳಸಿದ ಜಾಗಕ್ಕೆ ಮಾರ್ಕ್ ಮಾಡಲಾಗಿದೆ. ಆ ಮಾರ್ಕ್ ನಿಂದ 6 ಇಂಚು ದೂರದಲ್ಲಿ ನೀವು ಹೊಂಡ ತೆಗೆಯಬೇಕು. ಅಲ್ಲಿ ನಿಮ್ಮ ಕೆಲಸ ಮುಗಿಸಬೇಕು. ನಿಮಗೆ ಎರಡು ಟಾಯ್ಲೆಟ್ ಪೇಪರನ್ನು ಮಾತ್ರ ಐವಿ ಬ್ಲೂಮ್ ನೀಡುತ್ತಾಳೆ. ನಿಮ್ಮ ಕೆಲಸ ಮುಗಿದ ಮೇಲೆ ಟಾಯ್ಲೆಟ್ ಪೇಪರನ್ನು ಅದರ ಮೇಲೆ ಮುಚ್ಚಿ, ಅದಕ್ಕೆ ಐವಿ ಬ್ಲೂಮ್ ನೀಡುವ ಬೀಜವನ್ನು ಹಾಕಿ, ಮಣ್ಣು ಮುಚ್ಚಿ ನಂತ್ರ ಮಾರ್ಕ್ ಗೆ ಬಳಸುವ ಕೋಲನ್ನು ಊರಬೇಕು. ಇದಾದ್ಮೇಲೆ ನೀವು ಹೊರಗೆ ಬಂದು ಬೂಟ್ ಗೆ ಹಾಕಿರುವ ಕವರ್ ತೆಗೆದು ಅದನ್ನು ಸ್ವಚ್ಛಗೊಳಿಸಿ ಇಡಬೇಕು. ಈ ಕವರನ್ನು ಅಲ್ಲಿಯೇ ಇಡಬೇಕು. ಅದನ್ನು ಮತ್ತೊಬ್ಬ ವ್ಯಕ್ತಿ ಬಳಸುತ್ತಾರೆ.
165 ಕುಶಲಕರ್ಮಿಗಳು, 1905 ಗಂಟೆಗಳು.. ಮೆಟ್ ಗಾಲಾಕ್ಕಾಗಿ ಆಲಿಯಾ ಭಟ್ ಸೀರೆ ತಯಾರಾಗಿದ್ದು ಹೀಗೆ..
ಐವಿ ಬ್ಲೂಮ್, ಈ ಶೌಚಾಲಯ ಬಳಸುವ ವೇಳೆ ನಿಮಗೆ ಬೋರ್ ಆಗದಂತೆ ವ್ಯವಸ್ಥೆ ಮಾಡಿದ್ದಾಳೆ. ನಿಮಗೆ ತಿನ್ನಲು ಸ್ಕ್ಯಾಕ್ಸ್ ಹಾಗೂ ಕುಡಿಯಲು ಜ್ಯೂಸ್ ನೀಡ್ತಾಳೆ. ನಿಮಗೆ ಇಷ್ಟವಾದ್ರೆ ಐವಿ ಬ್ಲೂಮ್ ಗೆ ಟಿಪ್ಸ್ ರೂಪದಲ್ಲಿ ಹಣವನ್ನು ಕೂಡ ನೀವು ನೀಡಬಹುದು. ಹಣ ಹಾಕಲು ಡಬ್ಬವನ್ನು ಐವಿ ಬ್ಲೂಮ್ ಅಲ್ಲಿಯೇ ಇಟ್ಟಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ 7 ಸಾವಿರಕ್ಕಿಂತ ಕಡಿಮೆ ಫಾಲೋವರ್ಸ್ ಹೊಂದಿರುವ ಐವಿ ಬ್ಲೂಮ್ ಈ ವಿಡಿಯೋವನ್ನು ಕೋಟ್ಯಾಂತರ ಬಾರಿ ವೀಕ್ಷಿಸಲಾಗಿದೆ.