ಹೇಳಿಕೇಳಿ ನಟಿ ಸಾಯಿ ಪಲ್ಲವಿ ಸ್ಟಾರ್ ನಟಿ ಮಾತ್ರವಲ್ಲ, ಸಂಪ್ರದಾಯ ಮೀರದ ಶಿಸ್ತುಬದ್ಧ ಜೀವನಶೈಲಿ ರೂಢಿಸಿಕೊಂಡಿರುವ ಪ್ರತಿಭಾವಂತೆ. ಸಹಜವಾಗಿಯೇ ಅವರು ಇಂಡಿಪೆಂಡೆಂಟ್ ಆಗಿ ಇರಲು, ಜೀವನಕ್ಕೆ ಯಾರದೋ ಮೇಲೆ ಅವಲಂಬನೆ ಹೊಂದದೇ ಇರಲು ಬಯಸುತ್ತಾರೆ.
ನಟಿ ಸಾಯಿಪಲ್ಲವಿ (Sai Pallavi)ಸಂದರ್ಶನವೊಂದರಲ್ಲಿ ತಮ್ಮ ರೋಲ್ ಮಾಡೆಲ್ ಹುಡುಗ ಹೇಗಿರಬೇಕು ಎಂದು ಹೇಳಿದ್ದಾರೆ. 'ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವಂಥ ಹುಡುಗ ಬೇಕು. ನನ್ನ ಇಷ್ಟ-ಕಷ್ಟಗಳನ್ನು ಹೇಳದೆಯೂ ಅರಿತುಕೊಳ್ಳಬಲ್ಲಷ್ಟು ಬುದ್ಧಿವಂಥನಿರಬೇಕು. ನಾನು ಡಾನ್ಸ್ ಮಾಡಿ ದಣಿದು ಬಂದಾಗ ಡಾಕ್ಟರ್ ಆಗಬೇಕು. ನಾನು ನಿದ್ದೆಯಿಂದ ಎದ್ದು ಬಂದಾಗ ಕಾಫಿ ಮಾಡಿ ತಂದುಕೊಟ್ಟು ಪಕ್ಕದಲ್ಲಿಯೇ ಕುಳಿತು ತಾನೂ ಕಾಫೀ ಹೀರುವಂತವನಾಗಿರಬೇಕು.
ನಾನು ಏನಾದರೂ ನನ್ನಿಷ್ಟದ ಪ್ರಕಾರ ಮಾಡುತ್ತಿದ್ದರೆ ಅದನ್ನು ತಡೆದು ಮನಸ್ಸಿಗೆ ಕಿರಿಕಿರಿ ಮಾಡುವಂಥವ ಆಗಿರಬಾರದು' ಎಂದಿದ್ದಾರೆ. ಸಾಯಿ ಪಲ್ಲವಿ ಇಷ್ಟಪಡುವಂಥ ರೋಲ್ ಮಾಡೆಲ್ ಸಿಗುತ್ತಾರಾ ಈ ಜಗತ್ತಿನಲ್ಲಿ ಎಂಬುದು ಹಲವರ ಪ್ರಶ್ನೆಯಾಗಿರಬಹುದು. ಆದರೆ, ಉತ್ತರ ಕೊಡುವುದು ಸ್ವಲ್ಪ ಕಷ್ಟವೇ. ಸಿಗಬಹುದು ಅಥವಾ ಸಿಗದೆಯೂ ಇರಬಹುದು. ಅಂಥವರು ಇರಬಹುದು ಅಥವಾ ಇರದೆಯೂ ಇರಬಹುದು.
99 ರೂಪಾಯಿಗೆ ಪ್ರಣೀತಾ-ರಿಷಿ ರೋಮ್ಯಾನ್ಸ್ ನೋಡಬಹುದು; ಶುಭ್ರ ಅಯ್ಯಪ್ಪಗೆ ಅಲ್ಲೇನು ಕೆಲಸ?
ಆದರೆ, ಸಾಯಿ ಪಲ್ಲವಿ ಅಥವಾ ಯಾರೇ ಆದರೂ ಬಯಸುವುದು ತಪ್ಪೇನಿಲ್ಲ. ಹಾಗಂತ ಅಂಥವರನ್ನು ಬಯಸಿದ ತಕ್ಷಣ ಸಿಗಬೇಕು ಅಂತಲೂ ಇಲ್ಲ. ಒಟ್ಟಿನಲ್ಲಿ, ನಟಿ ಸಾಯಿ ಪಲ್ಲವಿ ಇಷ್ಟಪಡುವಂಥ ಹುಡುಗ ಅವರಿಗೆ ಸ್ವಾತಂತ್ರ್ಯ ಕೊಡುವಂಥವನಾಗಿರಬೇಕು ಎಂಬುದಂತೂ ಸ್ಪಷ್ಟ. ಹೇಳಿಕೇಳಿ ನಟಿ ಸಾಯಿ ಪಲ್ಲವಿ ಸ್ಟಾರ್ ನಟಿ ಮಾತ್ರವಲ್ಲ, ಸಂಪ್ರದಾಯ ಮೀರದ ಶಿಸ್ತುಬದ್ಧ ಜೀವನಶೈಲಿ ರೂಢಿಸಿಕೊಂಡಿರುವ ಪ್ರತಿಭಾವಂತೆ.
ಪತ್ನಿ ಗರ್ಭಿಣಿ, ಇದೀಗ ಮದ್ವೆ ಫೋಟೋಸ್ ಡಿಲೀಟ್ ಮಾಡಿದ್ದೇಕೆ ದೀಪಿಕಾ ಪಡುಕೋಣೆ ಪತಿ ರಣವೀರ್!?
ಸಹಜವಾಗಿಯೇ ಅವರು ಇಂಡಿಪೆಂಡೆಂಟ್ ಆಗಿ ಇರಲು, ಜೀವನಕ್ಕೆ ಯಾರದೋ ಮೇಲೆ ಅವಲಂಬನೆ ಹೊಂದದೇ ಇರಲು ಬಯಸುತ್ತಾರೆ. ಅವರು ಯಾವಾಗಲೂ ಹಾಗೇ ಹೇಳುತ್ತಲೇ ಇರುತ್ತಾರೆ. 'ನನ್ನತನವನ್ನು ಗೌರವಿಸುವ ಗಂಡನ್ನು ನಾನು ಇಷ್ಟಪಡುತ್ತೇನೆ' ಎಂಬುದು ಸಾಯಿ ಪಲ್ಲವಿ ಹೇಳುವ ಮೊದಲು ಮಾತು ಎನ್ನಬಹುದು. ಇನ್ನು ರೋಲ್ ಮಾಡೆಲ್ ಎಂದರೆ ಅವರು ಪರಿಪೂರ್ಣ ವ್ಯಕ್ತಿತ್ವ ಹೊಂದಿರುವ ಹುಡುಗನನ್ನೇ ಇಷ್ಟಪಡುವುದು ಕನ್ಫರ್ಮ್ ಎನ್ನಲೇಬೇಕು.
ರಾಜಕೀಯಕ್ಕೆ ಧುಮುಕಿರುವ ಕಂಗನಾ ಸಿನಿಮಾ ನಟನೆ ಬಿಟ್ಟುಬಿಡುವರೇ? ಈ ಬಗ್ಗೆ ನಟಿ ಹೇಳಿದ್ದೇನು?
ಅಂದಹಾಗೆ, ಸದ್ಯ ನಟಿ ಸಾಯಿ ಪಲ್ಲವಿ ಅವರು ಯಶ್ (Yash) ಹಾಗು ರಣಬೀರ್ ಕಪೂರ್ (Ranbir Kapoor) ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವ 'ರಾಮಾಯಣ' ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ನಟನೆಯ, ಶೂಟಿಂಗ್ ಹಂತದಲ್ಲಿರುವ 'ಟಾಕ್ಸಿಕ್' ಸಿನಿಮಾದಲ್ಲಿ (Toxic) ಕೂಡ ನಟಿ ಸಾಯಿ ಪಲ್ಲವಿಯೇ ನಾಯಕಿ ಎನ್ನಲಾಗುತ್ತಿದೆ. ಆದರೆ, ಈ ಸುದ್ದಿ ಇನ್ನೂ ಕನ್ಫರ್ಮ್ ಆಗಿಲ್ಲ. ಒಟ್ಟಿನಲ್ಲಿ, ಸಾಯಿ ಪಲ್ಲವಿಗೆ ಶುಕ್ರದೆಸೆ ಆರಂಭವಾಗಿದೆ.
ಬಾಲಿವುಡ್ ಆಫರ್ ಬಂದಿದೆ, ರಿಜೆಕ್ಟ್ ಮಾಡಿದ್ದೇನೆ ಅಂದ್ರು ಸಮಂತಾ; ಸೀಕ್ರೆಟ್ ರಿವೀಲ್ ಮಾಡಿದ್ರಾ?