ಗುಜರಿ ಸೇರಬೇಕಿದ್ದ ರೈಲ್ವೇ ಬೋಗಿ ಇಂದು ಹೈಟೆಕ್ ರೆಸ್ಟೋರೆಂಟ್! ಸಿಟಿಮಂದಿ ಫುಲ್ ಫಿದಾ!

May 7, 2024, 5:24 PM IST

ರೈಲ್ವೇ ಇಲಾಖೆ (Railway Department) ಆಗಾಗ್ಗೆ ವಿಶೇಷ  ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಯಾಣಿಕರಿಗೆ ಭಿನ್ನ ಅನುಭವ ನೀಡುವ ಕೆಲಸ ಮಾಡುತ್ತಲೇ ಇರುತ್ತದೆ. ಅದರಂತೆ  ರೈಲ್ವೇ ಇಲಾಖೆ ಈಗ  ಕಸವನ್ನು ರಸವಾಗಿಸುವ ಕೆಲಸ ಮಾಡಿದೆ. ರೈಲ್ವೇ ಇಲಾಖೆಯ ಈ ಅದ್ಭುತ ಪ್ಲ್ಯಾನ್‌ಗೆ ಸಿಟಿಮಂದಿ ಫುಲ್ ಫಿದಾ ಆಗಿದ್ದಾರೆ. ಅಂದರೆ ಗುಜರಿ ಸೇರಬೇಕಿದ್ದ ರೈಲ್ವೇ ಬೋಗಿ (Railway bogie) ಇಂದು ಹೈಟೆಕ್ ರೆಸ್ಟೋರೆಂಟ್ (Restaurant) ಆಗಿ ಮಾರ್ಪಟ್ಟಿದೆ. 15 ವರ್ಷದ ಹಳೆಯ ರೈಲಿನ ಬೋಗಿಯನ್ನು ರೆಸ್ಟೋರೆಂಟ್ ಆಗಿ ಬದಲಾವಣೆ ಮಾಡಲಾಗಿದ್ದು, ಮೆಜೆಸ್ಟಿಕ್ ರೈಲ್ವೇ ನಿಲ್ದಾಣ (Majestic Railway Station) ಮತ್ತು ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದಲ್ಲಿ ಜನರನ್ನು ಕೈಬೀಸಿ ಕರೆಯುತ್ತಿವೆ. 

ಈ ನಡುವೆ  ಬೋಗಿ ಬಳಕೆ ಮಾಡಿಕೊಂಡು ವಿನೂತನ ರೆಸ್ಟೋರೆಂಟ್ ಮಾಡಲು ಉಚಿತ ಬೋಗಿ ನೀಡಲು ರೈಲ್ವೇ ಇಲಾಖೆ ಸಹ ಮುಂದಾಗಿದೆ. ಈ ಕಾರಣಕ್ಕೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಈ ರೆಸ್ಟೋರೆಂಟ್‌ ಅನ್ನು ಖಾಸಗಿ ಕಂಪನಿಗೆ ವರ್ಷಕ್ಕೆ 87 ಲಕ್ಷ ರೂಪಾಯಿಗೆ ಗುತ್ತಿಗೆ ನೀಡಲಾಗಿದೆ. ಇನ್ನು ಈ ಈ ರೆಸ್ಟೋರೆಂಟ್ ನಲ್ಲಿ ಒಮ್ಮೆ 40 ಜನ ಕೂತು ಊಟ ಮಾಡಬಹುದಾಗಿದೆ . ಅಲ್ಲದೆ  ದಿನದ 24 ಗಂಟೆಗಳ ಕಾಲ ಈ ರೆಸ್ಟೋರೆಂಟ್ ಕಾರ್ಯನಿರ್ವಹಿಸಲಿದ್ದು, ರೈಲ್ವೇ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಹೈಟೆಕ್ ಫೀಲ್  ನೀಡಲಿದೆ. ಇಷ್ಟು ಮಾತ್ರವಲ್ಲದೆ ಗ್ರಾಹಕರ ಭದ್ರತೆಯ ದೃಷ್ಟಿಯಿಂದ 5 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ನಡುವೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಪ್ರತಿನಿತ್ಯ 2 ಲಕ್ಷ ಜನ ಸಂಚಾರ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ:  ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಸಿಡಿ ಕೇಸ್‌ನ ಕಥಾ ನಾಯಕ ಕಾಂಗ್ರೆಸ್‌ನ ಡಿಕೆಶಿ?