ಇಂಗ್ಲಿಷ್ ಬಾರದ ಅಮ್ಮನನ್ನು ಫ್ರೆಂಡ್ಸ್‌ಗೆ ಪರಿಚಯಿಸದ ಮಕ್ಕಳು, ಬದಲಾಯಿತು ಅಮ್ಮನ ವ್ಯಾಖ್ಯಾನ!

By Suvarna NewsFirst Published May 7, 2024, 4:53 PM IST
Highlights

ಅಮ್ಮ ಹೇಗೆ ಇರಲಿ, ಆಕೆ ತನ್ನ ತಾಯಿ ಎಂದು ಪರಿಚಯಿಸಲು ಹೆಮ್ಮೆಪಡುವ ಕಾಲವೊಂದಿತ್ತು. ಆದ್ರೀಗ ಯುವಜನತೆ ಆಲೋಚನೆ ಬದಲಾಗಿದೆ. ಅಮ್ಮನನ್ನು ಸಮಾಜಕ್ಕೆ ಪರಿಚಯಿಸುವ ಮುನ್ನ ತಮ್ಮ ಸ್ಟೇಟಸ್, ಅಮ್ಮನ ವೇಷ, ಭೂಷಣವನ್ನು ನೋಡುವ ಸ್ಥಿತಿ ಇದೆ. 
 

ಅಮ್ಮ ಅಂದ್ರೆ ದೇವರು, ಜನ್ಮಕೊಟ್ಟ ತಾಯಿ. ಆಕೆ ಹೇಗಿದ್ರೂ ಚೆಂದ, ಹೆಮ್ಮೆ ಎನ್ನುವ ಕಾಲ ಈಗಿಲ್ಲ. ಆಧುನಿಕ ಯುಗದಲ್ಲಿ ಮಕ್ಕಳ ಆಲೋಚನೆ ಕೂಡ ಬದಲಾಗಿದೆ. ಅವರು ತಾಯಿಯನ್ನು ನೋಡುವ ದೃಷ್ಟಿಯಲ್ಲಿ ಬದಲಾವಣೆ ಕಂಡು ಬರ್ತಿದೆ. ಅಮ್ಮನ್ನು ಮಕ್ಕಳು ಹೋಲಿಸಲು ಶುರು ಮಾಡಿದ್ದಾರೆ. ನಮ್ಮಮ್ಮ ಕೂಡ ಮಾಡರ್ನ್ ಆಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಎಂಬ ಆಲೋಚನೆಯಲ್ಲಿ ಮಕ್ಕಳು, ತಾಯಿಯನ್ನು ದೂರವಿಡುವ, ದ್ವೇಷಿಸುವ ಕೆಲಸ ಮಾಡ್ತಿದ್ದಾರೆ. ಸರಳವಾಗಿರುವ ತಮ್ಮ ಅಮ್ಮನನ್ನು ಸ್ನೇಹಿತರಿಗೆ ತೋರಿಸೋದು ಮಕ್ಕಳಿಗೆ ಈಗ ಮುಜುಗರ ತರಿಸುತ್ತಿದೆ. ಅಮ್ಮ ಮಾಡರ್ನ್ ಆಗಿದ್ರೆ ಆಕೆಯನ್ನು ಎಲ್ಲ ಕಡೆ ಸುತ್ತಾಡಿಸಬಹುದಿತ್ತು, ಆಕೆಯನ್ನು ಸ್ನೇಹಿತರಿಗೆ ಪರಿಚಯಿಸಬಹುದಿತ್ತು ಎಂದು ಮಕ್ಕಳು ಆಲೋಚಿಸುತ್ತಿದ್ದಾರೆ. 

ದೇಸಿ ಅಮ್ಮ (Mothers) ನಿಗೆ ಏನೂ ಗೊತ್ತಿಲ್ಲ ಎಂದು ಮಕ್ಕಳು ಭಾವಿಸುತ್ತಿದ್ದಾರೆ. ಪೊರಕೆ, ಮಾಪ್ ಮತ್ತು ಪಾತ್ರೆ ಹೊರತು ಅವಳು ಇನ್ನೇನು ಮಾಡ್ತಾಳೆ ಎಂದು ಪ್ರಶ್ನೆ ಮಾಡುವ ಮಕ್ಕಳೇ ನಮ್ಮಲ್ಲಿ ಜಾಸ್ತಿ. ಅಮ್ಮನನ್ನು ಪ್ರೀತಿಸುವ, ತಾಯಿ ಇದ್ದ ಹಾಗೆಯೇ ಆಕೆಯನ್ನು ಸ್ವೀಕರಿಸುವ, ಮನೆ ಕೆಲಸ ಮಾಡುವ, ಮಾಡರ್ನ್ (Modern) ಅಲ್ಲದ ಅಮ್ಮ ಕೂಡ ಸಾಕಷ್ಟು ಕೆಲಸ ಮಾಡ್ತಾಳೆ ಎಂಬುದನ್ನು ತಿಳಿಯುವ ಅಗತ್ಯ ಈಗ ಮಕ್ಕಳಿಗಿದೆ. 

ರಾಜಕೀಯಕ್ಕೆ ಧುಮುಕಿರುವ ಕಂಗನಾ ಸಿನಿಮಾ ನಟನೆ ಬಿಟ್ಟುಬಿಡುವರೇ? ಈ ಬಗ್ಗೆ ನಟಿ ಹೇಳಿದ್ದೇನು?

ಬದಲಾಗ್ತಿದೆ ಅಮ್ಮನ ವ್ಯಾಖ್ಯಾನ : ಎಲ್ಲ ಮಹಿಳೆ (Woman) ಯರು ಒಂದೇ ರೀತಿ ಇರಲು ಸಾಧ್ಯವಿಲ್ಲ. ಕೆಲ ಮಹಿಳೆಯರು ಮನೆ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಮತ್ತೆ ಕೆಲವರು ಮನೆ ಹಾಗೂ ಮನೆ ಹೊರಗಿನ ಕೆಲಸವನ್ನೂ ಸಂಭಾಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಎರಡೂ ಅಮ್ಮನನ್ನು ಹೋಲಿಸಿ ನೋಡುವ ಅಗತ್ಯವಿಲ್ಲ. ಮಾಡರ್ನ್ ಆಗಿರುವ ಅಮ್ಮನಿಗೆ ಎಲ್ಲವೂ ತಿಳಿದಿದೆ, ದೇಸಿ ಅಮ್ಮನಿಗೆ ಏನೂ ತಿಳಿದಿಲ್ಲ ಎಂಬುದು ನಿಮ್ಮ ತಪ್ಪು ಕಲ್ಪನೆ.

ಅನೇಕ ಮಕ್ಕಳು ತಮ್ಮ ಅಮ್ಮನಿಗೆ ಮೊಬೈಲ್ ಬಳಸಲು ಬರೋದಿಲ್ಲ ಎಂದು ಹಿಯಾಳಿಸುತ್ತಿರುತ್ತಾರೆ. ಇನ್ನು ಕೆಲ ಮಕ್ಕಳು ಅಮ್ಮನಿಗೆ ಇಂಗ್ಲೀಷ್ ಬರೋದಿಲ್ಲ ಎನ್ನುವ ಕಾರಣ ಹೇಳಿ ಆಕೆಯನ್ನು ಸ್ನೇಹಿತರಿಗೆ ಪರಿಚಯಿಸೋದಿಲ್ಲ. ಸ್ನೇಹಿತರ ಮುಂದೆಯೇ ಮಕ್ಕಳನ್ನು ಅವಮಾನ ಮಾಡುವ ಮಕ್ಕಳಿದ್ದಾರೆ. ನನ್ನ ಸ್ನೇಹಿತರ ಮುಂದೆ ಬರ್ಬೇಡ, ನಿನಗೆ ಸರಿಯಾದ ಜ್ಞಾನವಿಲ್ಲ. ಈಗಿನ ಅಮ್ಮಂದಿರು ಎಷ್ಟು ಮಾಡರ್ನ್ ಆಗಿರ್ತಾರೆ, ನಿನಗೆ ಮಾತ್ರ ಏನೂ ಬರೋದಿಲ್ಲ ಎನ್ನುತ್ತಿರುತ್ತಾರೆ.

ಕೆಲ ಮಕ್ಕಳು, ಶಾಲೆಗೆ ಬರದಂತೆ ತಾಯಿಗೆ ತಾಕೀತು ಹಾಕಿರುತ್ತಾರೆ. ಸ್ನೇಹಿತರ ಅಮ್ಮಂದಿರು ಮೇಕಪ್ ಮಾಡ್ಕೊಂಡು, ಸ್ಟೈಲಿಶ್ ಆಗಿ ಬರ್ತಿದ್ದರೆ ನೀವು ಸಿಂಪಲ್ ಆಗಿ ಶಾಲೆಗೆ ಬರ್ತೀಯಾ. ಅದು ನನಗೆ ಇಷ್ಟವಿಲ್ಲ ಎನ್ನುವ ಮಕ್ಕಳನ್ನು ನೀವು ನೋಡಬಹುದು. 

ಮನೆಯಲ್ಲಿ ಟಾಯ್ಲೆಟ್ ಇದ್ರೂ ತೋಟಕ್ಕೆ ಗೆಸ್ಟ್ ಕಳಿಸುವ ಈಕೆ ಅದಕ್ಕೂ ಹಣ ಪಡೆಯೋದ್ಯಾಕೆ?

ತಾಯಿಯನ್ನು ಅರ್ಥ ಮಾಡಿಕೊಳ್ಳಲು ಕಲಿಯಿರಿ : ನೀವೂ ನಿಮ್ಮ ತಾಯಿ ಬಗ್ಗೆ ಇಂಥ ಆಲೋಚನೆ ಮಾಡ್ತಿದ್ದರೆ ಇಂದೇ ನಿಮ್ಮ ಆಲೋಚನೆ ಬದಲಿಸಿ. ನಿಮ್ಮ ತಾಯಿಗಿಂತ ಪ್ರಾಮಾಣಿಕ ವ್ಯಕ್ತಿ ಜಗತ್ತಿನಲ್ಲಿ ಮತ್ತ್ಯಾರೂ ಇರಲು ಸಾಧ್ಯವಿಲ್ಲ. ನಿಮ್ಮನ್ನು ಎಲ್ಲರಿಗಿಂತ ಹೆಚ್ಚು ಆಕೆ ಪ್ರೀತಿ ಮಾಡ್ತಾಳೆ. ನಿಮ್ಮಿಂದ ಪದೇ ಪದೇ ಅವಮಾನವಾದ್ರೂ ಅದನ್ನು ನುಂಗಿ ಮತ್ತೆ ನಿಮ್ಮ ಏಳ್ಗೆಗೆ ಕೆಲಸ ಮಾಡ್ತಾಳೆ. ಒಂದೇ ಒಂದು ದಿನ ರಜೆ ಇಲ್ಲದೆ ಕೆಲಸ ಮಾಡುವ ಆಕೆಗೆ ಇಂಗ್ಲೀಷ್ ಬರೋದಿಲ್ಲ ಎನ್ನುವುದು ಅವಮಾನದ ವಿಷ್ಯ ಅಲ್ಲವೇ ಅಲ್ಲ. ಮಾತೃಭಾಷೆಯಲ್ಲಿ ಆಕೆ ಸ್ಪಷ್ಟವಾಗಿ ಮಾತನಾಡ್ತಿದ್ದರೆ ಇನ್ನೇನು ಬೇಕು. ಮೇಕಪ್ ಮಾಡಿಕೊಂಡು, ಸ್ಟೈಲ್ ಆಗಿ ಸ್ಮಾರ್ಟ್ಫೋನ್ ಹಿಡಿದ ಅಮ್ಮನಲ್ಲೂ ಕೆಲವೊಂದು ಸಮಸ್ಯೆ ಇರಬಹುದು. ಅದು ನಿಮಗೆ ತಿಳಿದಿರೋದಿಲ್ಲ. ದೂರದ ಬೆಟ್ಟ ಯಾವಾಗ್ಲೂ ಸುಂದರವಾಗಿ ಕಾಣುತ್ತದೆ ಎಂಬುದು ನೆನಪಿರಲಿ. ಸ್ನೇಹಿತರ ಅಮ್ಮನನ್ನು ನಿಮ್ಮಮ್ಮನ ಜೊತೆ ಹೋಲಿಕೆ ಮಾಡುವ ಮೊದಲು ಆಕೆ ಹಾಗೂ ನಿಮ್ಮಮ್ಮನ ಪರಿಸ್ಥಿತಿ ಅರಿಯಿರಿ. ಆಕೆಗೂ ಸಮಯ ನೀಡಿ. ಅಮ್ಮ ಮಾಡರ್ನ್ ಆಗಬೇಕು ಎಂಬ ಬಯಕೆ ಬಿಟ್ಟು ಶುದ್ಧ ಮನಸ್ಸಿನಿಂದ ಅಮ್ಮನನ್ನು ಪ್ರೀತಿಸಿ. 
 

click me!