ಪುಟ್ಟಗೌರಿ ಪಾತ್ರ ಮಾಡಿ ಇಡೀ ಕರುನಾಡ ಜನರ ಮನಸ್ಸು ಗೆದ್ದಿದ್ದರು ನಟಿ ಸಾನ್ಯಾ ಐಯ್ಯರ್, ಇದೀಗ ನಟಿ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಸಖತ್ ಸ್ಟೈಲಿಶ್ ಫೋಟೋಗಳನ್ನು ನಟಿ ಸಾನ್ಯಾ ಇದೀಗ ಹಂಚಿಕೊಂಡಿದ್ದಾರೆ.
ಸಾನ್ಯ ಅಯ್ಯರ್ ರ್ಯಾಂಪ್ ವಾಕ್ ಮಾಡಿದ್ದಾರೆ. ಇಲ್ಲಿವರೆಗೂ ಕೇವಲ ಫೋಟೋಶೂಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಫಸ್ಟ್ ರ್ಯಾಂಪ್ ವಾಕ್ ಮಾಡಿದ್ದಾರೆ. ವಿಶೇಷ ಮತ್ತು ವಿಭಿನ್ನ ಅನಿಸೋ ವಿಚಿತ್ರ ಉಡುಗೆ ತೊಟ್ಟು ಸಖತ್ ಆಗಿಯೇ ಕ್ಯಾಟ್ ವಾಕ್ ಮಾಡಿದ್ದಾರೆ.
ಸಾನ್ಯ ಅಯ್ಯರ್ ಇಲ್ಲಿ ತುಂಬಾನೆ ಚಿಕ್ಕ ಡ್ರೆಸ್ ತೊಟ್ಟಿದ್ದಾರೆ. ಆದರೆ ಅದಕ್ಕೆ ಲಾಂಗ್ ಟೇಲ್ ರೀತಿ ಹಿಂದೆ ಭುಜದಿಂದ ಒಂದು ಬಟ್ಟೆಯನ್ನ ಅಟ್ಯಾಚ್ ಮಾಡಲಾಗಿದೆ. ಅಲ್ಲಿಗೆ ಇದು ಮತ್ತಷ್ಟು ವಿಭಿನ್ನ ಅನಿಸುತ್ತದೆ. ಹಾಗೂ ಇದಕ್ಕೆ ಒಪ್ಪುವ ರೀತಿಯಲ್ಲಿ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ.
ಇಷ್ಟು ವಿಶೇಷ ಅನಿಸೋ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ನ ಫೋಟೋಗಳನ್ನ ಸಾನ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿಯೇ ಈ ಫೋಟೋಗಳನ್ನ ಶೇರ್ ಮಾಡಿದ್ದಾರೆ.
ಸಾನ್ಯ ಅಯ್ಯರ್ ಫೋಟೋಗಳನ್ನು ನೋಡಿದ ನೆಟ್ಟಿಗರು, ಬ್ಯೂಟಿ ಕ್ವೀನ್, ನೈಸ್, ಕ್ಯೂಟ್ ಎಂದರೆ, ಇನ್ನೊಬ್ಬ ನೆಟ್ಟಿಗ ನಿಮ್ ಅಂದ ಈ ಬಟ್ಟೆಯಿಂದ ಕೆಟ್ಟಿತು ಸಾನ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಸಾನ್ಯಾ ಐಯ್ಯರ್ ಇತ್ತೀಚೆಗೆ ತುಂಬಾ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಮಾಡಲು ರೆಡಿಯಾಗಿರುವ ಈ ಬ್ಯೂಟಿ ಬಾಲಿವುಡ್ ಫೋಟೋಗ್ರಫರ್ ಜೊತೆಗೂ ಶೂಟ್ ಮಾಡಿಸಿಕೊಂಡಿದ್ದಾರೆ.
ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಇಂಡಸ್ಟ್ರಿಗೆ ಎಂಟ್ರಿ ಕೊಡೊಕೆ ಸಜ್ಜಾದ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ಗೆ ಸಾನ್ಯಾ ಜೋಡಿಯಾಗಿದ್ದಾರೆ.