ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಮರಳಿ ಸೀತಾ ಮಡಿಲಿಗೆ ಬಂದಿದ್ದಾಳೆ. ಮನೆಯಲ್ಲಿ ಹಬ್ಬದ ವಾತಾವರಣವಿದೆ. ಆದ್ರೆ ನಿಟ್ಟುಸಿರು ಬಿಡುವ ಮೊದಲೇ ಧಾರಾವಾಹಿಗೆ ಹೊಸ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.
ಝೀ ಕನ್ನಡ (Zee Kannada)ದಲ್ಲಿ ಪ್ರಸಾರವಾಗ್ತಿರುವ ಸೀತಾರಾಮ ಸೀರಿಯಲ್ (Seetharama serial) ಒಂದು ಹಂತಕ್ಕೆ ಬಂದು ನಿಂತಿದೆ ಅಂದ್ಕೊಂಡಿದ್ದ ಫ್ಯಾನ್ಸ್ ಗೆ ದೊಡ್ಡ ಟ್ಟಿಸ್ಟ್ ಕಾದಿದೆ. ಸೀತಾರಾಮ ಧಾರಾವಾಹಿಗೆ ಶ್ಯಾಮ್, ಶಾಲಿನಿ (Shyam Shalini) ಎಂಟ್ರಿಯಾಗ್ತಿದ್ದಂತೆ ದೊಡ್ಡ ಹಂಗಾಮವೇ ಆಗಿತ್ತು. ಸಿಹಿ, ಸೀತಾ ಮಗುವಲ್ಲ, ಶ್ಯಾಮ್ ಮತ್ತು ಶಾಲಿನಿ ಮಗು ಎಂಬುದು ತಿಳಿದಾಗ, ಸಿಹಿ ಸಾಕಷ್ಟು ಕಹಿ ಅನುಭವಿಸಿದ್ದಳು. ತನ್ನ ಪ್ರೀತಿಯ ಅಮ್ಮ ಸೀತಾ ಹಾಗೂ ಅಪ್ಪ ರಾಮನಿಂದ ದೂರವಿರಲು ಆಕೆಗೆ ಸಾಧ್ಯವಾಗ್ತಿರಲಿಲ್ಲ. ಸೀತಾರಾಮರಿಂದ ದೂರವಾಗಿದ್ದ ಸಿಹಿಯನ್ನು ನೋಡಿ ವೀಕ್ಷಕರು ಕಣ್ಣೀರು ಹಾಕಿದ್ದರು. ಆದ್ರೀಗ ಅದಕ್ಕೆ ಸಿಹಿಯಾದ ಅಂತ್ಯ ಸಿಕ್ಕಿದೆ. ಹಾಗಂತ, ಎಲ್ಲ ಮುಗೀತು ಅಂತ ವೀಕ್ಷಕರು ನಿಟ್ಟುಸಿರು ಬಿಡುವಂತಿಲ್ಲ. ಮತ್ತೊಂದು ಟ್ವಿಸ್ಟ್ ಧಾರಾವಾಹಿಗೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಸೀತಾರಾಮ ಇಂದಿನ ಪ್ರೋಮೋ (promo) ಬಿಡುಗಡೆಯಾಗಿದೆ. ಅದ್ರಲ್ಲಿ ಸಿಹಿ ಮನೆಗೆ ಬಂದಿದ್ದು, ಬಡ್ಡಿ ಬಂಗಾರಮ್ಮ ಅಲಿಯಾಸ್ ಭಾರ್ಗವಿ (Bhargavi ) ಸಿಹಿಗೆ ಊಟ ತಿನ್ನಿಸುತ್ತಿದ್ದಾಳೆ. ಈ ಮಧ್ಯೆ ಭಾರ್ಗವಿ ಹೇಳುವ ಮಾತು ಹಾಗೂ ಸಿಹಿ ಹೇಳುವ ಮಾತು ಕೇಳಿದ್ರೆ ಸೀರಿಯಲ್ ನಲ್ಲಿ ಮತ್ತೆ ಸಿಹಿ ದೂರವಾಗುವ ಸಾಧ್ಯತೆ ಕಾಣ್ತಿದೆ. ನಿನ್ನನ್ನ ಮತ್ತೆ ದೇವರು ನಮಗೆ ನೀಡಿದ್ದಾನಲ್ಲ, ಅದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳ್ಬೇಕು. ಇನ್ನು ನಿನ್ನನ್ನು ನಮ್ಮಿಂದ ಯಾವುದೇ ಶಕ್ತಿ ದೂರ ಮಾಡಲು ಸಾಧ್ಯವಿಲ್ಲ ಅಂತ ಭಾರ್ಗವಿ ಹೇಳ್ತಾಳೆ. ಅಲ್ಲೇ ಊಟ ಮಾಡ್ತಾ ನಿಂತಿದ್ದ ಸಿಹಿ, ಬಡ್ಡಿ ಬಂಗಾರಮ್ಮ, ತಾತಾ, ಅಪ್ಪ, ಅಮ್ಮ ಎಲ್ಲರೂ ಕೇಳಿ, ನಾನು ಈ ಮನೆ ಬಿಟ್ಟು ಎಲ್ಲಿಗೂ ಹೋಗಲ್ಲ. ಇಲ್ಲೇ ಇರ್ತೇನೆ. ಬದುಕಿದ್ರೂ ಅಷ್ಟೇ, ಸತ್ರೂ ಅಷ್ಟೆ ಅಂತ ಸಿಹಿ ಹೇಳ್ತಾಳೆ. ಸಿಹಿ ಮಾತನ್ನು ಕೇಳಿ, ಸೀತಾ, ರಾಮ ಸೇರಿದಂತೆ ಮನೆಯವರೆಲ್ಲ ಶಾಕ್ ಆಗ್ತಾರೆ.
undefined
ಜಗಳದಲ್ಲಿ 'ಗುಗ್ಗು ನನ್ನ ಮಗ', 'ಸೆಡೆ' ಎಂದ ರಜತ್; ಹೊರ ಹೋಗುತ್ತೀನಿ ಎಂದು ಬಾಗಿಲು ಬಡಿದ ಗೋಲ್ಡ್ ಸುರೇಶ್!
ಈ ಪ್ರೋಮೋ ನೋಡಿದ ವೀಕ್ಷಕರು, ದಯವಿಟ್ಟು ಸಿಹಿಯನ್ನು ಸಾಯಿಸಬೇಡಿ ಎನ್ನುತ್ತಿದ್ದಾರೆ. ಕೆಲ ದಿನಗಳ ಹಿಂದೆ, ಸಿಹಿಯನ್ನು ಆಕ್ಸಿಡೆಂಟ್ನಲ್ಲಿ ಸಾಯಿಸಿದ, ನಂತ್ರ ಸಿಹಿ ಆತ್ಮ ಅಲ್ಲಿ ಇಲ್ಲಿ ಓಡಾಡುವ ಒಂದು ಪ್ರೋಮೋ ರಿಲೀಸ್ ಆಗಿತ್ತು. ಅದರಂತೆ ಆದ್ರೆ ಎನ್ನುವ ಭಯದಲ್ಲಿ ವೀಕ್ಷಕರಿದ್ದಾರೆ. ಸೀತಾರಾಮರ ಬಳಿ ಸಿಹಿ ಬಂದಿದ್ದು ನಮಗೆ ಸಂತೋಷ ನೀಡಿದೆ. ನಿಮಗೆ ಕೈಮುಗಿದು ಕೇಳಿಕೊಳ್ತೇವೆ, ಸಿಹಿ ಸಾಯಿಸ್ಬೇಡಿ. ನಮಗೆ ಸಿಹಿ ಕಥೆ ಬೇಕು, ಆತ್ಮ ಕಥೆಯಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಭಾರ್ಗವಿ ಏನೋ ಪ್ಲಾನ್ ಮಾಡ್ತಿದ್ದಾಳೆ, ಊಟದಲ್ಲಿ ವಿಷ ಹಾಕಿದ್ರೂ ಹಾಕಿರಬಹುದು ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಸಿಹಿ ಸೀತಾರಾಮನ ಮನೆಗೆ ವಾಪಸ್ ಬಂದಿದ್ದು ಎಲ್ಲ ವೀಕ್ಷಕರಿಗೆ ಇಷ್ಟವಾಗಿದೆ. ಆದ್ರೆ ಡೈರೆಕ್ಟರ್ ಸಿಹಿ ಕಥೆ ಮುಗಿಸುವ ಪ್ಲಾನ್ ನಲ್ಲಿದ್ರೆ ಅದನ್ನು ಒಪ್ಪಿಕೊಳ್ಳಲು ಪ್ರೇಕ್ಷಕರು ಸಿದ್ಧರಿಲ್ಲ.
ಸಿನಿಮಾ ಒಪ್ಪಿಕೊಳ್ಳದ್ದಕ್ಕೆ ಕಾರಣ ಕೊಟ್ಟ ಬಿಗ್ಬಾಸ್ ನಮ್ರತಾ: ಇದನ್ನು ನಂಬಬೇಕಾ ಕೇಳಿದ ನೆಟ್ಟಿಗರು!
ಇಷ್ಟು ದಿನ ಸೀತಾರಾಮ ಹಾಗೂ ಸಿಹಿ ಗೋಳನ್ನು ವೀಕ್ಷಕರು ನೋಡಿದ್ದಾರೆ. ಸಿಹಿ ಕರೆದುಕೊಂಡು ವಿದೇಶಕ್ಕೆ ಹೊರಡಲು ಸಿದ್ಧವಾಗಿದ್ದ ಶ್ಯಾಮ್ ಮತ್ತು ಶಾಲಿನಿಗೆ ಸೋಲಾಗಿದೆ. ಕೋರ್ಟ್ ನಲ್ಲಿ ಏನಾಗುತ್ತೆ ಎನ್ನುವ ಕುತೂಹಲ ವೀಕ್ಷಕರಿಗಿತ್ತು. ನಿಜವಾದ ಅಮ್ಮ ಸೀತಾ, ರಾಮ ಅಪ್ಪ ಎಂಬುದು ಸಾಭೀತಾಗಿದೆ. ಹಾಗಾಗಿಯೇ ಇವರ ಜೊತೆಗೆ ಇರ್ತೇನೆ ಅಂತ ಮಗು ಹೇಳಿದೆ. ಕೋರ್ಟ್ ಗೆ ಬಂದ ಎಲ್ಲರಿಗೂ ನ್ಯಾಯ ಸಿಗಬೇಕು. ಸಿಹಿ ಸೀತಾರಾಮರಿಗೆ ಸೇರಬೇಕು. ಇನ್ಮುಂದೆ ಮಗುವಿನ ಕಸ್ಟಡಿ ಸೀತಾ ಮತ್ತು ರಾಮನದ್ದು ಅಂತ ಕೋರ್ಟ್ ಹೇಳ್ತಿದ್ದಂತೆ ಎಲ್ಲರೂ ಖುಷಿಯಾಗಿದ್ದರು. ಆದ್ರೆ ಭಾಗರ್ವಿ ಪ್ಲಾನ್ ವರ್ಕ್ ಔಟ್ ಆಗಿಲ್ಲ.