ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ರೈತರೊಬ್ಬರ ಟ್ರ್ಯಾಕ್ಟರ್ ಅನ್ನು ಬ್ಯಾಂಕ್ ಸಿಬ್ಬಂದಿ ಜಪ್ತಿ ಮಾಡಿಕೊಂಡಿದ್ದು, ಇದರಿಂದ ಆಕ್ರೋಶಗೊಂಡ ರೈತರು ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಕೇವಲ ಒಂದು ತಿಂಗಳ ಸಾಲದ ಕಂತು ಬಾಕಿ ಇದ್ದ ಕಾರಣಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಮೈಸೂರು (ನ.20): ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ರೈತರೊಬ್ಬರ ಟ್ರ್ಯಾಕ್ಟರ್ ಅನ್ನು ಬ್ಯಾಂಕ್ ಸಿಬ್ಬಂದಿ ಜಪ್ತಿ ಮಾಡಿಕೊಂಡಿದ್ದು, ಇದರಿಂದ ಆಕ್ರೋಶಗೊಂಡ ರೈತರು ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಕೇವಲ ಒಂದು ತಿಂಗಳ ಸಾಲದ ಕಂತು ಬಾಕಿ ಇದ್ದ ಕಾರಣಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಹೌದು, ಮೈಸೂರಿನ ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಹಾಕಿದ್ದಾರೆ. ಕೇವಲ ಒಂದು ತಿಂಗಳ ಸಾಲದ ಕಂತು ಕಟ್ಟಿಲ್ಲ ಎಂದು ಬ್ಯಾಂಕ್‌ನ ಸಿಬ್ಬಂದಿ ರೈತನ ಟ್ರಾಕ್ಟರ್ ಜಪ್ತಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿಗಳ ನಡೆಯನ್ನು ಖಂಡಿಸಿದ ರೈತರು ಟ್ರ್ಯಾಕ್ಟರ್ ಜಪ್ತಿ ಮಾಡಿದ ಬ್ಯಾಂಕಿಗೆ ಮುತ್ತಿಗೆ ಹಾಕಿದ್ದಾರೆ. ಅಂದರೆ, ರೈತನಿಗೆ ಟ್ರ್ಯಾಕ್ಟರ್ ತೆಗೆದುಕೊಳ್ಳಲು ಸಾಲ ಕೊಟ್ಟಿದ್ದ ಹಾಗೂ ಸಾಲ ಕಟ್ಟದಿದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರು ಮುತ್ತಿಗೆ ಹಾಕಿ ರೈತನ ವಿರುದ್ಧ ತೆಗೆದುಕೊಂಡ ಕ್ರಮವನ್ನು ವಿರೋಧಿಸಿದ್ದಾರೆ.
undefined
ಇನ್ನು ಬ್ಯಾಂಕಿನ ಮುಂದೆ ಟ್ರ್ಯಾಕ್ಟರ್ ಖರೀದಿಸಿದ ರೈತ ಮಹದೇವಯ್ಯ ಹಾಗೂ ಆತನ ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದು, ನಮಗೆ ಟ್ರ್ಯಾಕ್ಟರ್ ವಾಪಸ್ ಕೊಟ್ಟುಬಿಡಿ. ಒಂದು ತಿಂಗಳ ಕಂತು ತಡವಾಗಿದ್ದಕ್ಕೆ ಇಂತಹ ಕ್ರಮ ಸರಿಯಲ್ಲ. ಬೆಳೆ ಕಟಾವಿಗೆ ಬಂದಿರುವ ಸಮಯದಲ್ಲಿ ಟ್ರ್ಯಾಕ್ಟರ್ ದುಡಿಮೆಗೆ ಸಾಕಷ್ಟು ಅವಕಾಶಗಳಿದ್ದು, ಈಗಾಗಲೇ ಕೆಲವು ರೈತರಿಂದ ಕೆಲಸಕ್ಕೆ ಬರುವುದಾಗಿ ಹೇಳಿ ಮುಂಗಡ ಹಣವನ್ನು ಪಡೆದುಕೊಳ್ಳಲಾಗಿದೆ. ಹೀಗಾಗಿ, ನಮಗೆ ಟ್ರ್ಯಾಕ್ಟರ್ ವಾಪಸ್ ಕೊಟ್ಟುಬಿಡಿ ಎಂದು ಬ್ಯಾಂಕ್ ಸಿಬ್ಬಂದಿ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಇನ್ನು ರೈತ ಮಹದೇವಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಳುಗಲಿ ಗ್ರಾಮದ ನಿವಾಸಿ ಆಗಿದ್ದಾರೆ. ತಮ್ಮ ಹಳೆಯ ಟ್ರಾಕ್ಟರ್ ಅನ್ನು ನೀಡಿ ಬ್ಯಾಂಕ್ ಲೋನ್ ಮಾಡಿ ಹೊಸ ಟ್ರಾಕ್ಟರ್ ಖರೀದಿ ಮಾಡಿದ್ದರು. ಕಳೆದ 7 ತಿಂಗಳಿಂದಲೂ ಪ್ರತಿ ತಿಂಗಳು ಬ್ಯಾಂಕಿನ ಹಣವನ್ನ ಕಟ್ಟಿಕೊಂಡು ಬಂದಿದ್ದಾರೆ. ಆದರೆ, ಕಳೆದ ಒಂದು ತಿಂಗಳು ಮಾತ್ರ ಕಂತು ಕಟ್ಟಿಲ್ಲ. ಇನ್ನು ಕಂತಿನ ಅವಧಿ ಮೀರಿದ ನಂತರ ರೈತನ ಕುಟುಂಬಸ್ಥರು ಹಣ ಕಟ್ಟಲು ಬಂದರೂ ಅದನ್ನು ಪಾವತಿಸಿಕೊಳ್ಳದೇ ಟ್ರ್ಯಾಕ್ಟರ್ ಜಪ್ತಿ ಮಾಡಿ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ರಾಧಿಕಾ ಕರಿಯ ಅಂದ್ರೆ ಖುಷಿ, ಜಮೀರ್ ಹೇಳಿದ್ರೆ ಟೀಕೆ ಯಾಕೆ ಎಂದ ತೇಜಸ್ವಿನಿ ಗೌಡ
ಇನ್ನು ರೈತ ರೈತ ಮಹದೇವಯ್ಯ ನಾವು ಹಣ ಕಟ್ಟುತ್ತೇವೆ ಟ್ರ್ಯಾಕ್ಟರ್ ಕೊಡಿ ಎಂದರೂ ಅವರಿಂದ ಬ್ಯಾಂಕ್ ಸಿಬ್ಬಂದಿ ಹಣ ಕಟ್ಟಿಸಿಕೊಳ್ಳದೇ ನಿಮ್ಮ ಟ್ರಾಕ್ಟರ್ ಅನ್ನು ಮಾರಾಟ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತ ಮಹದೇವಯ್ಯನೊಂದಿಗೆ ವರುಣ ಕ್ಷೇತ್ರದ ಹಲವು ರೈತರು ಸೇರಿಕೊಂಡು ಟ್ರ್ಯಾಕ್ಟರ್ ಜಪ್ತಿ ಮಾಡಿದ ಕೋಟಕ್ ಮಹಿಂದ್ರಾ ಬ್ಯಾಂಕ್‌ಗೆ ಮುತ್ತಿಗೆ ಹಾಕಲಾಗಿದ್ದು, ಇದೀಗ ಬ್ಯಾಂಕಿನವರು ಕೇವಲ ಒಂದು ತಿಂಗಳ ಕಂತಿನ ಹಣವನ್ನ ಕಟ್ಟಿಸಿಕೊಳ್ಳಬೇಕು. ಜೊತೆಗೆ, ಜಪ್ತಿ ಮಾಡಿರುವ ಟ್ರಾಕ್ಟರ್ ಅನ್ನ ಕೂಡಲೇ ವಾಪಾಸ್ ನೀಡಬೇಕು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಉಡುಪಿ: ನಿಶ್ಚಿತಾರ್ಥದ ನಂತರ ಆತ್ಮಹತ್ಯೆಗೆ ಶರಣಾದ ಕೀರ್ತನಾ ಶೆಟ್ಟಿ