
ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ 'ಲಕ್ಷ್ಮೀ ಬಾರಮ್ಮ' ಇತ್ತೀಚೆಗೆ ಸಖತ್ ಫೇಮಸ್ ಆಗ್ತಿದೆ. ಈ ಸೀರಿಯಲ್‌ನಲ್ಲಿ ಹಾರರ್, ಡ್ರಾಮಾ ಹೈಲೆವೆಲ್‌ನಲ್ಲಿ ನಡೆಯುತ್ತಿದೆ. ಈ ನಡುವೆ ಒಂದು ಮಜವಾದ ಪಾತ್ರಕ್ಕೆ ಒಬ್ಬ ಕಲಾವಿದೆ ಬದಲು ಮತ್ತೊಬ್ಬರು ಬಂದಿದ್ದು ಈ ಸೀರಿಯಲ್ ವೀಕ್ಷಕರು ಕಣ್ಣಲ್ಲಿ ಪ್ರಶ್ನೆ ಮೂಡುವಂತೆ ಮಾಡಿದೆ. ಕಾರಣ ಈ ಪಾತ್ರಕ್ಕೆ ಮೊದಲಿದ್ದ ನಟಿ ಸಾಕಷ್ಟು ನ್ಯಾಯ ಸಲ್ಲಿಸಿದ್ದರು. ಕಾಮಿಡಿಗೆ ಕಾಮಿಡಿ, ಎಮೋಶನ್‌ಗೆ ಎಮೋಶನ್ ಆಗಿ ಆ ಪಾತ್ರಕ್ಕೆ ಜೀವ ತುಂಬಿದ್ದರು. ಹಾಗೆ ನೋಡಿದರೆ ಈ ಗಂಗಕ್ಕ ನಾಯಕ ವೈಷ್ಣವ್ ಮನೆಯ ಮನೆ ಕೆಲಸದವಳೇ ಆದರೂ ಮನೆಯ ಸದಸ್ಯೆಯಂತೆಯೇ ಇದ್ದವಳು. ಆಕೆ ಮನೆಯ ಸಮಸ್ಯೆಯ ಬಗ್ಗೆ ಮನೆಮಂದಿ ಜೊತೆಗೆ ಅವರ ಲೆವೆಲ್‌ಗೆ ನಿಂತು ಚರ್ಚೆ ಮಾಡ್ತಾಳೆ, ಮನೆಯವರ ಜೊತೆಗೆ ಎಲ್ಲ ಹಬ್ಬ ಹರಿದಿನಗಳಲ್ಲೂ ಮನೆಯವಳಂತೆ ಭಾಗವಹಿಸುತ್ತಾಳೆ. ಹೀಗೆ ಗಂಗಕ್ಕ ಎಂಬ ಪಾತ್ರ ಕೂಡ ಮನೆಯಲ್ಲಿ ಒಬ್ಬಳಾಗಿ ಹೋಗಿದೆ. ಈ ಪಾತ್ರವನ್ನು ಇಷ್ಟು ದಿನ ನಿರ್ವಹಿಸಿದ್ದದ್ದು ಹರ್ಷಿತಾ. ಆದರೆ ಈಗ ಪಾತ್ರದ ಬದಲಾವಣೆಯಾಗಿದೆ. ಹರ್ಷಿತಾ ಪಾತ್ರಕ್ಕೆ ಮತ್ತೊಬ್ಬರು ಬಂದಿದ್ದಾರೆ. ಇದು ಸಾಕಷ್ಟು ಜನರಿಗೆ ಬೇಸರ ತರಿಸಿದೆ.
ಹಾಗೆ ನೋಡಿದರೆ ಹರ್ಷಿತಾ ಈ ಪಾತ್ರಕ್ಕೆ ಯಾಕೆ ಗುಡ್ ಬೈ ಹೇಳಿದರು ಅನ್ನೋದು ಹಲವರ ಪ್ರಶ್ನೆ. ಹರ್ಷಿತಾ ಅವರ ಸೋಷಿಯಲ್ ಮೀಡಿಯಾ ಅಕೌಂಟ್‌ಗೆ ಅನೇಕ ಮಂದಿ ಸೀರಿಯಲ್ ವೀಕ್ಷಕರು ಕಮೆಂಟ್ ಗಳು ಬರ್ತಿವೆ. ಅದರಲ್ಲಿ ನೆಗೆಟಿವ್ ಪ್ರತಿಕ್ರಿಯೆಗಳೂ ಸೇರಿಕೊಂಡಿವೆ. ಹರ್ಷಿತಾ ಗಲಾಟೆ ಮಾಡಿಕೊಂಡು ಸೀರಿಯಲ್ ಬಿಟ್ಟು ಹೋದರಾ ಎಂದೆಲ್ಲ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ನೇರವಾಗಿ ಈ ಪಾತ್ರ ನಿರ್ವಹಿಸಿದ ಹರ್ಷಿತಾ ಬೋಲ್ಡ್ ಉತ್ತರ ನೀಡಿದ್ದಾರೆ.
ಸಿನಿಮಾ ಒಪ್ಪಿಕೊಳ್ಳದ್ದಕ್ಕೆ ಕಾರಣ ಕೊಟ್ಟ ಬಿಗ್‌ಬಾಸ್ ನಮ್ರತಾ: ಇದನ್ನು ನಂಬಬೇಕಾ ಕೇಳಿದ ನೆಟ್ಟಿಗರು!
'ನೆಗೆಟಿವ್ ಕಾಮೆಂಟ್ ಯಾರು ಮಾಡಿದ್ರು ಅವರಿಗೆ ಈ ಉತ್ತರ. ಸೆಟ್‌ನಲ್ಲಿ ನಾನಾಯ್ತು, ನನ್ನ ಕೆಲಸ ಆಯ್ತು ಅಂತ ಇರುತ್ತಿದ್ದೆ. ಕೆಲವೊಮ್ಮೆ ರೀಲ್ಸ್ ಮಾಡ್ತಾ ಇದ್ದೆ ಅಷ್ಟೆ. ಇಲ್ಲಾಂದ್ರೆ ಸುಮ್ಮನೆ ಒಬ್ಬಳೇ ಕೂತುಕೊಳ್ಳುತ್ತಾ ಇದ್ದೆ. ವಿಷಯ ಗೊತ್ತಿಲ್ಲದೆ ನೆಗೆಟಿವ್ ಆಗಿ ಮಾತಾಡಬೇಡಿ. ಆ ಪಾತ್ರಕ್ಕೆ ನನ್ನನ್ನ ನಾನು ತೊಡಗಿಸಿಕೊಂಡಿದ್ದೆ. ಹರ್ಷಿತಾ ಆಗಿ ಇರುವುದೇ ಬೇರೆ. ಆದರೆ ಗಂಗಕ್ಕ ಆಗಿ ಸೆಟ್‌ಗೆ ಹೋದಾಗ ಅಲ್ಲಿ ಬದಲಾವಣೆಯೇ ಬೇರೆ ಆಗಿರ್ತಾ ಇತ್ತು. ಆ ಪಾತ್ರವನ್ನ ಜೀವಿಸ್ತಾ ಇದ್ದೆ. ದಯವಿಟ್ಟು ನೆಗೆಟಿವ್ ಕಮೆಂಟ್ ಮಾಡಬೇಡಿ. ಅಷ್ಟು ಬಿಡುವಿದ್ದರೆ ಒಂದು ಸ್ಕ್ರಿಪ್ಟ್ ಮಾಡಿಕೊಂಡು ವಿಡಿಯೋ ಮಾಡಿ' ಎಂದು ಲೈವ್‌ನಲ್ಲಿಯೇ ಉತ್ತರಿಸಿದ್ದಾರೆ.
ರಿಯಲ್‌ನಲ್ಲಿ ಹರ್ಷಿತಾ ಹೇಳುವ ಪ್ರಕಾರ ಅವರಿಗೂ ಈ ಪಾತ್ರದಿಂದ ಹೊರಬಂದಿದ್ದಕ್ಕೆ ಬೇಜಾರಿದೆ. ಅವರು ಅಷ್ಟು ಚೆನ್ನಾಗಿ ನಿರ್ವಹಿಸುತ್ತಿದ್ದ ಈ ಪಾತ್ರವನ್ನು ಬೇರೆಯವರಿಗೆ ಯಾಕೆ ಕೊಟ್ಟರು ಅನ್ನೋದು ಅವರಿಗೂ ಗೊತ್ತಿಲ್ಲ. 'ನನ್ನದಲ್ಲದ ತಪ್ಪಿನಿಂದ ಆ ಪಾತ್ರವನ್ನು ಬೇರೊಬ್ಬರಿಗೆ ಬಿಟ್ಟುಕೊಟ್ಟಿದ್ದೀನಿ. ಕಾರಣ ಏನು ಎಂಬುದನ್ನು ಕಲರ್ಸ್ ಕನ್ನಡ ಪೇಜ್ ನಲ್ಲಿಯೇ ಮೆನ್ಶನ್ ಮಾಡಿದ್ದೀನಿ. ಆದರೆ ಟೆಕ್ನಿಕಲ್ ಸಮಸ್ಯೆ ಇರಬಹುದು. ಹೀಗಾಗಿ ಅದು ಕಾಣಿಸ್ತಾ ಇಲ್ಲ. ಈ ನಡುವೆ ನಾನು ಬೇರೆ ಪ್ರಾಜೆಕ್ಟ್ ಮಾಡ್ತಾ ಇದ್ದೆ. ಹೆಚ್ಚಿನ ಸಮಯವನ್ನು ಇಲ್ಲಿಯೇ ಕೊಟ್ಟೆ. ಆದರೂ ತಂಡದಲ್ಲಿಯೇ ರಿಪ್ಲೇಸ್ ಮಾಡುವುದಕ್ಕೆ ನೋಡಿದ್ರು. ಆದರೂ ಸಹಿಸಿಕೊಂಡೆ, ಮತ್ತೆ ಮತ್ತೆ ರಿಪ್ಲೇಸ್ ಹುಡುಕ್ತಾ ಇದ್ರು. ಅದನ್ನ ಕೇಳಿದಾಗ ನನಗೆ ಬೇಸರ ಆಗ್ತಾ ಇತ್ತು.
ಕನ್ನಡಿಯೇ ನಾಚುವಂತೆ ಸಿಂಗಾರ ಮಾಡಿಕೊಂಡ ಡಿಂಪಲ್ ಕ್ವೀನ್… ಬೇಗ ಮದ್ವೆ ಆಗಮ್ಮ ಅಂತಿದ್ದಾರೆ ಫ್ಯಾನ್ಸ್!
ಶ್ರಾವಣಿ ಸುಬ್ರಮಣ್ಯ ಹಾಗೂ ರಾಧಿಕಾ ಧಾರಾವಾಹಿಯಲ್ಲಿ ಪಾತ್ರ ಮಾಡ್ತಾ ಇದ್ದರೂ ಇಲ್ಲಿಗೆ ಸಮಯ ಹೆಚ್ಚು ಕೊಟ್ಟೆ. ಆದರೂ ರಿಪ್ಲೇಸ್ ಗೆ ಹುಡುಕುತ್ತಾ ಇದ್ದರು. ನನ್ನಿಂದ ಅವರಿಗೂ ತೊಂದರೆ ಆಗುವುದು ಬೇಡ ಅಂತ ಹೇಳಿ ಪಾತ್ರದಿಂದ ಹೊರಗೆ ಬಂದೆ. ಒಂದು ಮಾತನ್ನಾದರೂ ನನಗೆ ತಲುಪಿಸಿ ರಿಪ್ಲೇಸ್ ಗೆ ಹುಡುಕಬಹುದಿತ್ತು. ಪರವಾಗಿಲ್ಲ ಆದರೂ ನನಗೆ ಪ್ರೊಡಕ್ಷನ್ ಮೇಲೆ ಬೇಸರ ಇಲ್ಲ. ಮಿಲನಾ ಪ್ರಕಾಶ್ ಸರ್ ಗೆ ಖಂಡಿತ ಈ ಸಮಯದಲ್ಲಿ ಧನ್ಯವಾದ ಹೇಳಲೇಬೇಕು' ಎಂದಿದ್ದಾರೆ.
ತುಮಕೂರಿನ ಮಧುಗಿರಿಯ ಈ ನಟಿಯ ಮಾತು ಕೇಳಿ ಈಗ ಈ ಸೀರಿಯಲ್ ಫ್ಯಾನ್ಸ್ ಸೀರಿಯಲ್ ಟೀಮ್ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಅಂಥಾ ಕಲಾವಿದೆಯನ್ನು ಯಾಕೆ ತೆಗೆದು ಹಾಕಿದ್ರಿ ಅಂತ ಕಾಮೆಂಟ್ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.