ಜಗಳದಲ್ಲಿ 'ಗುಗ್ಗು ನನ್ನ ಮಗ', 'ಸೆಡೆ' ಎಂದ ರಜತ್; ಹೊರ ಹೋಗುತ್ತೀನಿ ಎಂದು ಬಾಗಿಲು ಬಡಿದ ಗೋಲ್ಡ್‌ ಸುರೇಶ್!

By Vaishnavi Chandrashekar  |  First Published Nov 20, 2024, 10:52 AM IST

ಮೊದಲ ಟಾಸ್ಕ್‌ನಲ್ಲೇ ಜಗಳವಾಡಿಕೊಂಡ ಗೋಲ್ಡ್‌ ಸುರೇಶ್ ಮತ್ತು ರಜತ್. ಮನಸ್ಸಿಗೆ ನೋವಾಗುವ ಪದ ಬಳಸಿದ್ದಕ್ಕೆ ಮನೆ ಬಿಟ್ಟು ಹೋಗುತ್ತೀನಿ ಎಂದ ಮಾಮ. 


ಬಿಗ್ ಬಾಸ್ ಸೀಸನ್ 11ರಲ್ಲಿ ಈಗ ಉಳಿದಿರುವ ಸ್ಪರ್ಧಿಗಳು 51 ದಿನಗಳನ್ನು ಪೂರೈಸಿರುವುದಕ್ಕೆ ಬಿಬಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಲ್ಲದೆ ಇಲ್ಲಿಂದ ಅಸಲಿ ಆಟ ಶುರು ಮಾಡಬೇಕು ಎಂದು ಸ್ವತಃ ಕ್ಯಾಪ್ಟನ್ ಆಗಿರುವ ಭವ್ಯಾ ಗೌಡರನ್ನು ಒಂದು ತಂಡದ ನಾಯಕಿ ಮಾಡಿ, ಮನೆ ಮಂದಿಯ ಆಯ್ಕೆ ಮೇಲೆ ಶೋಭಾ ಶೆಟ್ಟಿಯನ್ನು ಮತ್ತೊಂದು ತಂಡದ ನಾಯಕಿ ಮಾಡಿದ್ದಾರೆ. ಇವರಿಬ್ಬರು ತಮ್ಮ ತಂಡಕ್ಕೆ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು....ಇಲ್ಲಿಗೆ ಶುರುವಾಗಿದೆ ನೋಡಿ ಮೊದಲ ಟಾಸ್ಕ್‌ನ ಮೊದಲ ಫೈಟ್....

ಹೊರಗಿನಿಂದ ಒಂದು ಮಾರ್ಗದಲ್ಲಿ ಬಿಗ್ ಬಾಸ್ ಬಾಲನ್ನು ಕಳುಹಿಸುತ್ತಾರೆ ಅದನ್ನು ಪಡೆದುಕೊಂಡು ತಮ್ಮ ತಂಡಕ್ಕೆ ಮೀಸಲಿಟ್ಟಿರುವ ಚೌಕಟ್ಟಿನಲ್ಲಿ ತಂದು ಒಂದು ಸ್ಥಾನದಲ್ಲಿ ಇಡಬೇಕು. ಬಾಲ್ ಪಡೆಯಲು ಉಗ್ರಂ ಮಂಜು ಮತ್ತು ತ್ರಿವಿಕ್ರಮ್ ಒಂದು ತಂಡವಾಗಿ ನಿಲ್ಲುತ್ತಾರೆ, ರಜತ್ ಮತ್ತು ಗೋಲ್ಡ್‌ ಸುರೇಶ್‌ ಒಂದು ತಂಡವಾಗಿ ನಿಲ್ಲುತ್ತಾರೆ. ಬಂದ ಎರಡೂ ಬಾಲ್‌ಗಳನ್ನು ತ್ರಿವಿಕ್ರಮ್ ಪಡೆದುಕೊಂಡು ಉಗ್ರಂ ಮಂಜು ಸಹಾಯದಿಂದ ಹೊರ ತಂದು ತಮ್ಮ ಸ್ಥಾನದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ರಜತ್ ಮತ್ತು ಸುರೇಶ್ ಯಾವುದೇ ಬಾಲ್ ಕಲೆಕ್ಟ್‌ ಮಾಡಿರುವುದಿಲ್ಲ. 

Tap to resize

Latest Videos

undefined

ಕಂಗನಾ 'ಎಮರ್ಜೆನ್ಸಿ'ಗೆ ಸಿಕ್ತು ಮುಕ್ತಿ; ದರ್ಶನ್ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರೀ-ರಿಲೀಸ್‌

ಇಲ್ಲಿ ಸಣ್ಣ ಮನಸ್ಥಾಪ ಶುರುವಾಗಿದೆ ಕಾಲಿನಲ್ಲಿ ಬಾಲ್ ಇಟ್ಟುಕೊಂಡರೆ ಏನಾಗುತ್ತದೆ ಹೇಗೆ ಇಟ್ಟುಕೊಳ್ಳಬೇಕು? ನೀನು ತಿಕ್ಕಲು ನನ್ನ ಮಗನ ರೀತಿ ಮಾತನಾಡುತ್ತಿದ್ದೀಯಾ ಎಂದು ರಜತ್ ಸುರೇಶ್ ವಿರುದ್ಧ ತಿರುಗಿ ಬೀಳುತ್ತಾರೆ. ಮುಚ್ಚೋ ****ಲೇ ಎಂದು ರಜತ್ ಮತ್ತೆ ಬೈಯುತ್ತಾರೆ. ಆಗ ಸುರೇಶ್ ಮತ್ತು ರಜತ್ ಎದೆಗೆ ಎದೆ ಕೊಟ್ಟು ಜಗಳಕ್ಕೆ ನಿಲ್ಲುತ್ತಾರೆ. ****ಮಗನೇ ಎಂದು ನನಗೆ ಭೈದಿದ್ದಾನೆ ಇವನು ನನ್ನ ಅಪ್ಪನಾ ಬಿಗ್ ಬಾಸ್ ನಾನು ಆಟವಾಡುವುದಿಲ್ಲ ಎಂದು ಕ್ಯಾಮೆರಾ ಮುಂದೆ ನಿಂತು ಗೋಲ್ಡ್‌ ಸುರೇಶ್ ಕೈಗಾಡಿದ್ದಾರೆ. ನಾವು ಸೆಡೆ ನನ್ನ ಮಕ್ಕಳು ಅಲ್ಲ ಬಳೆ ತೊಟ್ಟಿಕೋ ಎಂದು ಮತ್ತೆ ರಜತ್ ಕೌಂಟರ್ ಕೊಡುತ್ತಾರೆ. ಮತ್ತಷ್ಟು ಕೋಪಗೊಂಡ ಗೋಲ್ಡ್‌ ಸುರೇಶ್ ಬಿಗ್ ಬಾಸ್ ಮುಖ್ಯ ದ್ವಾರವನ್ನು ಬಿಡಿಯಲು ಪ್ರಯತ್ನಿಸುತ್ತಾರೆ.

ಪವಿತ್ರಾ ಗೌಡ ಪುತ್ರಿಯ ಹೊಸ ಫೋಟೋಶೂಟ್ ವೈರಲ್

click me!