ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ, ಮೂಕಜ್ಜಿಯ ಕನಸು, ಮುಗಿಲು ಪೇಟೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಕಾವ್ಯಾ ಶಾ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈ ಚೆಲುವೆ ಕಲ್ಲಂಗಡಿ ಹಣ್ಣಿನ ಜೊತೆ ಮಾಡಿರುವ ಫೋಟೋಶೂಟ್ ಸಖತ್ ವೈರಲ್ ಆಗುತ್ತಿದೆ.
ಕೆಂಪು ಬಣ್ಣ ಹಾಟ್ ಮಾಡರ್ನ್ ಔಟ್ ಫಿಟ್ ಧರಿಸಿರುವ ಕಾವ್ಯಾ ಶಾ, ರಸ್ತೆ ಬದಿಯಲ್ಲಿ ಇರುವ ಕಲ್ಲಂಡಗಿ ಅಂಗಡಿಯಲ್ಲಿ ಸಖತ್ ಫೋಟೋ ಶೂಟ್ ಮಾಡಿದ್ದಾರೆ.
ಹಣ್ಣು ಹೇಗಿತ್ತೋ ಏನೋ ಗೊತ್ತಿಲ್ಲ ಆದರೆ ಕಾವ್ಯಾ ಸಖತ್ ಎಂಜಾಯ್ ಮಾಡಿ ಸವಿದಿದ್ದಾರೆ. ಇದನ್ನು ನೋಡಿ ನೆಟ್ಟಿಗರು ವಾಟರ್‌ಮೆಲನ್ ಸಖತ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಸಿನಿಮಾ ಮಾತ್ರವಲ್ಲದೆ ಸಾಕಷ್ಟು ಸೀರಿಯಲ್‌ಗಳಲ್ಲಿ ಕಾವ್ಯಾ ಶಾ ನಟಿಸಿದ್ದಾರೆ. ನಿರೂಪಕಿಯಾ ಸಖತ್ ಹೆಸರು ಮಾಡಿದ್ದಾರೆ. ಹೀಗಾಗಿ ಏನೇ ಪೋಸ್ಟ್ ಮಾಡಿದರು ವೈರಲ್ ಆಗುತ್ತದೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಪಬ್ ಓಪನಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗ ಬ್ಲ್ಯಾಕ್ ಹಾಟ್ ರೆಡ್ ಡ್ರೆಸ್ ಧರಿಸಿದ್ದರು.
ಈ ವರ್ಷ ವಾಟರ್‌ಮೆಲನ್ ರೇಟ್ ಸಿಕ್ಕಾಪಟ್ಟೆ ಜಾಸ್ತಿ ಇದೆ ಮೇಡಂ ಅದರ ಮೇಲೆ ಮಲ್ಕೊಂಡು ಕೂತ್ಕೊಂಡು ಮಾಡಿದ್ರೆ ಹೇಗೆ ಸ್ವಲ್ಪ ಹುಷಾರು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.