ರಾಯಚೂರು: ಬೀದಿ ನಾಯಿಗಳ ದಾಳಿಗೊಳಗಾಗಿ ಕೋಮಾದಲ್ಲಿದ್ದ ಯುವತಿ ಸಾವು

By Kannadaprabha News  |  First Published Dec 12, 2024, 11:44 PM IST

ರಾಯಚೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ನಗರಸಭೆ ಸಂಪೂರ್ಣ ವಾಗಿ ವಿಫಲವಾಗಿದೆ ಎಂದು ಆರೋಪಿಸಿ ಜನಾಕ್ರೋಶ ವ್ಯಕ್ತವಾಗುತ್ತಿದೆ. 


ರಾಯಚೂರು(ಡಿ.12): ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ವೇಳೆ ಕೆಳಗೆ ಬಿದ್ದ ಯುವತಿ ಕೋಮ ಕೋಮಕ್ಕೆ ಹೋಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯುವತಿ ಬುಧವಾರ ಸಾವನಪ್ಪಿರುವ ಘಟನೆ ನಗರದಲ್ಲಿ ಜರುಗಿದೆ.

ಸ್ಥಳೀಯ ನಗರದ ವಾರ್ಡ್ ನಂ 23 ಮಡ್ಡಿಪೇಟೆ ಬಡಾವಣೆಯ ನಿವಾಸಿ ಮಹಾದೇವಿ ಮುನಿಯಪ್ಪ (20) ಮೃತಪಟ್ಟ ದುರ್ದೈವಿ ಯುವತಿಯಾಗಿದ್ದಾಳೆ. ಕಳೆದ ಡಿ.7 ರಂದು ಬೆಳಗ್ಗೆ ಮನೆಯ ಮುಂದೆ ನಿಂತಾಗ ಬಿದಿ ನಾಯಿಗಳ ದಂಡು ಜಗಳ ಆಡುತ್ತಾ ಬಂದು ಯುವತಿಯ ಮೇಲೆ ದಾಳಿ ಮಾಡಿ ಕೆಳಗಡೆ ಹಾಕಿ ಎರಡು ಸಲ ಯುವತಿಯನ್ನ ನಾಯಿಗಳು ಎತ್ತಿ ಹಾಕಿವೆ ಇದರಿಂದಾಗಿ ಯುವತಿಯು ಎಚ್ಚರಿಕೆ ಇಲ್ಲದೇ ಬಿದ್ದಿದು ನಂತರ ತಂದೆ ತಾಯಿ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ತೋರಿಸಿ ಅಲ್ಲಿಂದ ರಿಮ್ಸ್ ಹಾಗೂ ಬಳ್ಳಾರಿಯ ಆಸ್ಪತ್ರೆಗಳಿಗೆ ಕರೆದುಕೋಂಡು ಹೋಗಿ ಚಿಕಿತ್ಸೆ ನೀಡಿದ್ದು, ಬಳ್ಳಾರಿ ವೈದ್ಯರು ಬೆಂಗಳೂರಿಗೆ ಹೋಗುವಂತೆ ಸೂಚಿಸಿರುವುದರ ಜೊತೆಗೆ ಹೋದಕಡೆಯಲ್ಲಾ ವೈದ್ಯರಿಂದ ಸರಿಯಾದ ರೀತಿಯಲ್ಲಿ ಸ್ಪಂದನೆ ಸಿಗದ ಕಾರಣಕ್ಕೆ ಬಡ ಪಾಲಕರು ಹೆಚ್ಚಿನ ಖರ್ಚು ಮಾಡಲಾಗದೇ ಕೊನೆಗೆ ಮತ್ತೆ ರಿಮ್ಸ್‌ ಬೋಧಕ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಾಳೆ. ಯುವತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Tap to resize

Latest Videos

ಬೆಂಗ್ಳೂರಲ್ಲಿ ನಿಲ್ಲದ ಬೀದಿ ನಾಯಿ ಹಾವಳಿ, ಶಾಲಾ ವಿದ್ಯಾರ್ಥಿ ಮೇಲೆ ದಾಳಿ: ಜನ್ರಿಗಿಲ್ಲ ಸುರಕ್ಷತೆಯ ಗ್ಯಾರಂಟಿ?

ನಗರಸಭೆ ನಿರ್ಲಕ್ಷ್ಯ ವಿರುದ್ಧ ಆಕ್ರೋಶ:

undefined

ರಾಯಚೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ನಗರಸಭೆ ಸಂಪೂರ್ಣ ವಾಗಿ ವಿಫಲವಾಗಿದೆ ಎಂದು ಆರೋಪಿಸಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ನಗರದ ಎಲ್ಲ ವಾರ್ಡ್‌, ಬಡಾವಣೆ, ಓಣಿ-ಗಲ್ಲಿಗಳಲ್ಲಿ ಹಗಲು-ರಾತ್ರಿ ಎನ್ನದೇ ಬೀದಿ ನಾಯಿಗಳ ಹಾವಳಿ ವಿಪರೀತ ಹೆಚ್ಚಾಗಿದ್ದು, ಅಲ್ಲಲ್ಲಿ ದಾಳಿಯ ಘಟನೆಗಳ ಸಂಭವಿಸುತ್ತಿದ್ದರು ಸಹ ನಗರಸಭೆ, ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸದೇ ಇರುವುದು ಜನರನ್ನು ಆತಂಕ್ಕೀಡುಮಾಡಿದೆ.

ನಗರದಲ್ಲಿ ಅನೇಕ ವರ್ಷಗಳಿಂದ ಬೀದಿ ನಾಯಿಗಳ ಹಾವಳಿ ಇದ್ದರು ಅದನ್ನು ನಿಯಂತ್ರಿಸುವಲ್ಲಿ ನಗರಸಭೆ, ಜಿಲ್ಲಾಡಳಿತವು ಪರಿಣಾಮಕಾರಿಹಾದ ಕ್ರಮ ವಹಿಸದೇ ಇರದ ಕಾರಣಕ್ಕೆ ಸಾವು-ನೋವಿನ ಘಟನೆಗಳು ಪದೇ ಪದೆ ಮರುಕಳಿಸುತ್ತಿದ್ದು ಈಗಲಾದರು ಆಡಳಿತ ವರ್ಗ ಎಚ್ಚೇತ್ತುಕೊಂಡು ಬೀದಿ ನಾಯಿಗಳ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

click me!