ಕೇರಳದ ದೈವಿಕ ತಾಣಗಳ ಜೊತೆ ಬೀಚ್‌ಗೆ IRCTCಯ ಮೂರು ದಿನಗಳ ವಿಶೇಷ ಪ್ರವಾಸ ಪ್ಯಾಕೇಜ್

Published : Oct 26, 2025, 12:28 PM IST

IRCTCಯು 'ಉತ್ತರ ಕೇರಳ ದೇವಾಲಯ' ಹೆಸರಿನಲ್ಲಿ ವಿಶೇಷ ರೈಲು ಪ್ರವಾಸ ಪ್ಯಾಕೇಜ್ ನೀಡುತ್ತಿದೆ. ಈ ಮೂರು ದಿನಗಳ ಪ್ರವಾಸವು ಕಣ್ಣೂರು ಮತ್ತು ಕಾಸರಗೋಡಿನ ಪ್ರಮುಖ ದೇವಾಲಯಗಳು ಹಾಗೂ ಮುಳಪ್ಪಿಲಂಗಡು ಡ್ರೈವ್-ಇನ್ ಬೀಚ್‌ಗೆ ಭೇಟಿ ನೀಡುವುದನ್ನು ಒಳಗೊಂಡಿದೆ.

PREV
16
IRCTC ವಿಶೇಷ ಪ್ಯಾಕೇಜ್

ಕೇರಳದ ಸುಂದರ ದೇವಾಲಯ ಮತ್ತು ಕಡಲತೀರಗಳ ಸೌಂದರ್ಯ ಆನಂದಿಸಲು IRCTC ವಿಶೇಷ ಪ್ಯಾಕೇಜ್ ನೀಡುತ್ತಿದೆ. ಉತ್ತರ ಕೇರಳ ದೇವಾಲಯ ಹೆಸರಿನಲ್ಲಿ ರೈಲು ಪ್ರವಾಸ ನಡೆಸಲಾಗುತ್ತಿದೆ. ಪ್ರತಿ ಶುಕ್ರವಾರ ಈ ಪ್ರವಾಸ ಪ್ರಾರಂಭವಾಗುತ್ತದೆ. ಉತ್ತರ ಕೇರಳ ದೇವಾಲಯ ವಿಶೇಷ ಪ್ಯಾಕೇಜ್ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

26
ಮೂರು ದಿನದ ಪ್ರವಾಸ

ಕೇರಳದ ತಿರುವನಂತಪುರಂ, ಕೋಲಂ, ಚೆಂಗನ್ನೂರ್, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಸೊರನೂರ್, ಕೋಝಿಕ್ಕೋಡ್ ನಿಲ್ದಾಣಗಳಿಂದ ಪ್ರವಾಸ ಆರಂಭಿಸಬಹುದಾಗಿದೆ. ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿಕೊಂಡ ನಿಮ್ಮಿಷ್ಟದ ನಿಲ್ದಾಣದಿಂದ ನೀವು ಪ್ರಯಾಣ ಆರಂಭಿಸಬಹುದು. ಮೂರು ದಿನದ ಪ್ರವಾಸದಲ್ಲಿ ಏನೆಲ್ಲಾ ಇರಲಿದೆ ಗೊತ್ತಾ?

36
ಪ್ರವಾಸದ ಮೊದಲ ದಿನ

ಶುಕ್ರವಾರ ಪ್ರವಾಸ ಆರಂಭವಾಗುತ್ತದೆ. ರೈಲು ಮಧ್ಯಾಹ್ನ ಕಣ್ಣೂರು ನಿಲ್ದಾಣ ತಲುಪುತ್ತದೆ. ಹೋಟೆಲ್‌ ನಲ್ಲಿ ಚೆಕ್ ಇನ್ ಮಾಡಿ ಇಲ್ಲಿಂದ ಚಂಬರಂ ದೇವಸ್ಥಾನ ಮತ್ತು ಶ್ರೀ ರಾಜರಾಜೇಶ್ವರ ದೇವಸ್ಥಾನದಂತಹ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ಸಂಜೆ ಕಣ್ಣೂರಿನಲ್ಲಿಯೇ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿರುತ್ತದೆ. ಹೋಟೆಲ್ ವಸತಿ ಮತ್ತು ಉಪಹಾರವನ್ನು ಈ ಸೇವೆ ಒಳಗೊಂಡಿರುತ್ತದೆ.

46
ಪ್ರವಾಸದ ಎರಡನೇ ದಿನ

ಶನಿವಾರ ಉಪಹಾರ ಸೇವನೆ ಬಳಿಕ ಕಾಸರಗೋಡಿಗೆ ತೆರಳಲಾಗುತ್ತದೆ. ರೆ. ಅನಂತಪುರಂ ಸರೋವರದಲ್ಲಿರುವ ದೇವಾಲಯ ಮತ್ತು ಮಧುರೈ ಶ್ರೀ ಮದನಾಥೇಶ್ವರ ಸಿದ್ಧಿವಿನಾಯಕ ದೇವಾಲಯಕ್ಕೆ ಭೇಟಿ ನೀಡಲಾಗುವುದು. ಮಧ್ಯಾಹ್ನ, ಬಾಗಲ್ ಕೋಟೆಗೆ ಭೇಟಿ ನೀಡಿ ಸಂಜೆ ಮತ್ತೆ ಕಣ್ಣೂರಿಗೆ ಹಿಂದಿರುಗಿ ಅದೇ ಹೋಟೆಲ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗುತ್ತದೆ.

56
ಪ್ರವಾಸದ ಮೂರನೇ ದಿನ

ಭಾನುವಾರ ಬೆಳಗ್ಗೆ ಹೋಟೆಲ್‌ನಿಂದ ಚೆಕ್ಔಟ್ ಮಾಡಿಸಿ ಪರಸಿನಿಕಡವು ಶ್ರೀ ಮುತ್ತಪ್ಪನ್ ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಇಲ್ಲಿಂದ ನೇರವಾಗಿ ಮುಳಪ್ಪಿಲಂಗಡು ಡ್ರೈವ್-ಇನ್ ಬೀಚ್‌ಗೆ ಭೇಟಿ ನೀಡಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ಕಣ್ಣೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಮತ್ತು ನಿಮ್ಮ ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸಲಾಗುತ್ತದೆ. ಪ್ರವಾಸಿಗರು ಮಾರ್ಗ ಮಧ್ಯೆ ತಮ್ಮಿಷ್ಟದ ನಿಲ್ದಾಣಗಳಲ್ಲಿ ಇಳಿಯಬಹುದು.

ಇದನ್ನೂ ಓದಿ: IRCTCಯಿಂದ ಮುಂಗಾರು ಆಫರ್: ಬೆಂಗಳೂರು-ಮೈಸೂರಿಗೆ ವಿಶೇಷ ಟ್ರಿಪ್

66
ಪ್ಯಾಕೇಜ್ ಬೆಲೆ ಎಷ್ಟು?

ಈ ಪ್ರವಾಸದ ಪ್ಯಾಕೇಜ್‌ನ ಆರಂಭಿಕ ಬೆಲೆ 13,460 ರೂಪಾಯಿ ಆಗಿದೆ. ನಾಲ್ಕು ಜನರಿಗಿಂತ ಹೆಚ್ಚಿನ ಗುಂಪುಗಳಿಗೆ ವಿಶೇಷ ರಿಯಾಯಿತಿಗಳನ್ನು ಈ ಪ್ಯಾಕೇಜ್ ಒಳಗೊಂಂಡಿದೆ. ಪ್ಯಾಕೇಜ್‌ನಲ್ಲಿ ಹೋಟೆಲ್ ವಸತಿ, ರಸ್ತೆ ಸಾರಿಗೆ, ಪ್ರಯಾಣ ವಿಮೆ ಮತ್ತು ತೆರಿಗೆಗಳು ಸೇರಿವೆ. ಆಹಾರ, ವೈಯಕ್ತಿಕ ವೆಚ್ಚಗಳು ಮತ್ತು IRCTC ಪ್ರವಾಸ ಬೆಂಗಾವಲು ಸೇವೆಯನ್ನು ಸೇರಿಸಲಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಕೊಡ್ತಿದ್ದ ಬಿಳಿ ಬ್ಲಾಂಕೆಟ್‌ಗಳಿಗೆ ವಿದಾಯ; ಹೊಸದಾಗಿ ಬಂತು ಪ್ರಿಂಟೆಡ್ ಹೊದಿಕೆ!

Read more Photos on
click me!

Recommended Stories