Namma Bengaluru: ನೀವು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ನಿಮ್ಮ ಭೇಟಿಗಾಗಿ ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ಬೆಂಗಳೂರಿಗೆ ಬಂದಿದ್ದು, ಯಾವ ಸ್ಥಳಕ್ಕೆ ಇವರನ್ನು ಕರೆದುಕೊಂಡು ಹೋಗೋದು ಎಂದು ನೀವು ಯೋಚನೆ ಮಾಡುತ್ತಿದ್ದರೆ, ಈ ಜಾಗಗಳಿಗೆ ಕರೆದುಕೊಂಡು ಹೋಗಿ.
ಬೆಂಗಳೂರಿನಲ್ಲಿ ನೀವು ಕೆಲಸ ಮಾಡುತ್ತಿದ್ದು, ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ಬೆಂಗಳೂರಿಗೆ ಬಂದಾಗ ಅವರನ್ನು ಯಾವ ಸುಂದರ ತಾಣಗಳನ್ನು ನೋಡಲು ಕರೆದುಕೊಂಡು ಹೋಗೋದು ಎಂದು ನೀವು ಯೋಚನೆ ಮಾಡುತ್ತಿದ್ದರೆ, ಈ ವೀಕೆಂಡ್ ಗಾಗಿ ಇಲ್ಲಿದೆ ಬೆಸ್ಟ್ ತಾಣಗಳ ಲಿಸ್ಟ್.
28
ಮಂದಾರ ಗಿರಿ ಹಿಲ್ಸ್ (62 ಕಿಮೀ)
ಮಂದಾರಗಿರಿ ಅಥವಾ ಬಸದಿ-ಬೆಟ್ಟವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಂದಾರಗಿರಿ ಬೆಟ್ಟದ ಮೇಲಿರುವ ಜೈನ ತೀರ್ಥಕ್ಷೇತ್ರವಾಗಿದೆ . ಇದು ಕುಟುಂಬದ ಜೊತೆ ಎಂಜಾಯ್ ಮಾಡಲು ಬೆಸ್ಟ್ ತಾಣವಾಗಿದೆ.
38
ರಂಗೋಲಿ ಗಾರ್ಡನ್ (14 ಕಿ. ಮೀ)
ಕರ್ನಾಟಕದ ಸಾಂಸ್ಕೃತಿಕ ವಾಸ್ತುಕಲೆಗಳನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರಗಳನ್ನು ಬೆಂಗಳೂರಿನ ರಂಗೋಲಿ ಗಾರ್ಡನ್ನಲ್ಲಿ ಕಣ್ತುಂಬಿಸಿಕೊಳ್ಳಬಹುದು. ಇದು ಸ್ನೇಹಿತರ ಜೊತೆ, ಫ್ಯಾಮಿಲಿ ಜೊತೆ ಎಂಜಾಯ್ ಮಾಡಲು ಬೆಸ್ಟ್.
ಆದಿಯೋಗಿಯಲ್ಲಿರುವ ಶಿವನ ಬೃಹತ್ ಪ್ರತಿಮೆಯು ಕುಟುಂಬದೊಂದಿಗೆ ಸಮಯ ಕಳೆಯಲು ಒಂದು ಸುಂದರವಾದ ಸ್ಥಳವಾಗಿದೆ. ಬೆಟ್ಟಗಳು ಮತ್ತು ನಿರ್ಮಲ ಪರಿಸರದಿಂದ ಸುತ್ತುವರೆದಿರುವ ಇದು ಶಾಂತ ವಾತಾವರಣವದಲ್ಲಿದೆ. ಅಕ್ಟೋಬರ್ ತಿಂಗಳಲ್ಲಿ ಸಂಜೆಯ ತಂಗಾಳಿಯನ್ನ ಎಂಜಾಯ್ ಮಾಡಬಹುದು.
58
ಅಗರ ಜಗನ್ನಾಥ ದೇವಸ್ಥಾನ (10 ಕಿ. ಮೀ)
ಅಗರ ಜಗನ್ನಾಥ ದೇವಸ್ಥಾನ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಒಂದು ಪ್ರಮುಖ ಹಿಂದೂ ದೇವಾಲಯವಾಗಿದೆ. ಇದು ಮುಖ್ಯವಾಗಿ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವತೆಗಳಿಗೆ ಸಮರ್ಪಿತವಾಗಿದೆ. ಇಲ್ಲಿಗೂ ನೀವು ಕುಟುಂಬದ ಜೊತೆ ಭೇಟಿ ನೀಡಬಹುದು.
68
ಲೇಪಾಕ್ಷಿ (122 ಕಿ. ಮೀ)
ವೀರಭದ್ರ ದೇವಸ್ಥಾನವು ಭಾರತದ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಶಿವನ ಉಗ್ರ ರೂಪವಾದ ವೀರಭದ್ರನಿಗೆ ಸಮರ್ಪಿತವಾಗಿದೆ. 16 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯದ ವಾಸ್ತುಶಿಲ್ಪದ ವೈಶಿಷ್ಟ್ಯಗಳು ವಿಜಯನಗರ ಶೈಲಿಯಲ್ಲಿದ್ದು, ದೇವಾಲಯದ ಪ್ರತಿಯೊಂದು ಮೇಲ್ಮೈ ಕೆತ್ತನೆಗಳು ಮತ್ತು ವರ್ಣಚಿತ್ರಗಳನ್ನು ಹೊಂದಿದೆ.
78
ಪಿರಾಮಿಡ್ ವ್ಯಾಲಿ (43 ಕಿ. ಮೀ)
ವಿಶಿಷ್ಟ ಧ್ಯಾನ ಕೇಂದ್ರವೆಂದು ಪರಿಗಣಿಸಲಾದ ಪಿರಮಿಡ್ ವ್ಯಾಲಿ ಮಕ್ಕಳು ಮತ್ತು ವಯಸ್ಕರಿಗೆ ಇಬ್ಬರಿಗೂ ಪ್ರಶಾಂತ ಸ್ಥಳವಾಗಿದೆ. ಈ ಭವ್ಯವಾದ ಪಿರಮಿಡ್ ರಚನೆಯನ್ನು ಧ್ಯಾನಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದರ ಸುತ್ತಲಿನ ಹಚ್ಚ ಹಸಿರಿನ ಉದ್ಯಾನಗಳು ನಡೆಯಲು ಅದ್ಭುತವಾಗಿದೆ.
88
ಬಿಳಿ ಅಮೃತಶಿಲೆ ದೇವಸ್ಥಾನ (30 ಕಿ. ಮೀ)
ಶ್ರೀ ಪಾರ್ಶ್ವ ಸುಶೀಲ ಧಾಮ ಶ್ವೇತಾಂಬರ ಜೈನ ದೇವಾಲಯ ಎಂದು ಕರೆಯಲ್ಪಡುವ ಈ ಬಿಳಿ ಅಮೃತಶಿಲೆ ದೇವಸ್ಥಾನ ಸೂರ್ಯನ ಬೆಳಕಿನಲ್ಲಿ ಸುಂದರವಾಗಿ ಕಾಣುತ್ತದೆ ಮತ್ತು ಸಂಜೆ ಹೊಳೆಯುತ್ತದೆ. ಸಂಪೂರ್ಣವಾಗಿ ಅಮೃತಶಿಲೆಯಿಂದ ನಿರ್ಮಿಸಲಾದ ಈ ದೇವಾಲಯ ದೈವೀಕ ಸಾನಿಧ್ಯವನ್ನು ನೀಡುತ್ತೆ.