ಭಾರತೀಯ ರೈಲ್ವೆಯು ದೇಶದ ಜೀವನಾಡಿಯಾಗಿದ್ದು, ಕೋಟ್ಯಂತರ ಜನರಿಗೆ ಸೇವೆ ಸಲ್ಲಿಸುತ್ತದೆ. ಭೌಗೋಳಿಕ ವಿಸ್ತಾರ, ಜನಸಂಖ್ಯೆ ಮತ್ತು ಪ್ರಮುಖ ಸಾರಿಗೆ ಕಾರಿಡಾರ್ ಆಗಿರುವ ಕಾರಣದಿಂದಾಗಿ 1200ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ.
ಭಾರತೀಯ ರೈಲ್ವೆ ಭಾರತೀಯರ ಜೀವನಾಡಿಯಾಗಿದೆ. ಎಲ್ಲಾ ವರ್ಗದವರ ನೆಚ್ಚಿನ ಸಾರಿಗೆಯಾಗಿರುವ ಭಾರತೀಯ ರೈಲ್ವೆ, ದೇಶದ ಬಹುತೇಕ ಎಲ್ಲಾ ಪ್ರಮುಖ ನಗರಗಳನ್ನು ಸಂಪರ್ಕಿಸಿದ ಕೀರ್ತಿಯನ್ನು ಹೊಂದಿದೆ. ದೂರದ ಪ್ರಯಾಣಕ್ಕೆ ಹೆಚ್ಚಿನ ಜನರು ರೈಲು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲಾ ರಾಜ್ಯಗಳು ರೈಲು ಮಾರ್ಗ ವಿಸ್ತರಣೆಗೆ ಆದ್ಯತೆ ನೀಡುತ್ತವೆ. ಇದಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ ಅನುದಾನದ ಬಿಡುಗಡೆಯಾಗುತ್ತದೆ.
26
ಆ ಪ್ರಶ್ನೆಗೆ ಉತ್ತರ
ಪ್ರತಿದಿನ ಕೋಟಿಗೂ ಅಧಿಕ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಎಲ್ಲಾ ರಾಜ್ಯಗಳು ಐಷಾರಾಮಿ ರೈಲು ನಿಲ್ದಾಣಗಳನ್ನು ಹೊಂದಿದೆ. ಜಂಕ್ಷನ್, ಸೆಂಟ್ರಲ್ ನಿಲ್ದಾಣಗಳಿಂದ ಅತಿಹೆಚ್ಚು ರೈಲುಗಳು ಪ್ರಯಾಣಿಸುತ್ತವೆ. ಹಾಗಾದ್ರೆ ಭಾರತದ ಯಾವ ರಾಜ್ಯ ಅತ್ಯಧಿಕ ರೈಲು ನಿಲ್ದಾಣಗಳನ್ನು ಹೊಂದಿದೆ ಎಂಬ ವಿಷಯ ನಿಮಗೆ ತಿಳಿದಿದೆಯಾ? ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
36
ಉತ್ತರ ಪ್ರದೇಶ
ಉತ್ತರ ಪ್ರದೇಶ ಸುಮಾರು 1200ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಉತ್ತರ ಪ್ರದೇಶ ಅತ್ಯಧಿಕ ರೈಲ್ವೆ ಜಾಲವನ್ನು ಹೊಂದಿದೆ. ರಾಜ್ಯದ ರಾಜಧಾನಿಯಿಂದ ನೂರಾರು ಕಿಲೋ ಮೀಟರ್ ದೂರದಲ್ಲಿರುವ ಉತ್ತರ ಪ್ರದೇಶದ ಹಳ್ಳಿಯನ್ನು ಭಾರತೀಯ ರೈಲ್ವೆ ಸಂಪರ್ಕಿಸಿದೆ.
ಉತ್ತರ ಪ್ರದೇಶ ಭೌಗೋಳಿಕವಾಗಿ ದೊಡ್ಡ ರಾಜ್ಯವಾಗಿದೆ. ಇಲ್ಲಿಯ ಜನಸಂಖ್ಯೆಯೂ ಅಧಿಕವಾಗಿರುವ ಕಾರಣ ಹೆಚ್ಚಿನ ರೈಲು ನಿಲ್ದಾಣಗಳು ಬೇಕಾಗುತ್ತದೆ. ಈ ರಾಜ್ಯ ರೈಲು ಮಾರ್ಗದಲ್ಲಿ ದೇಶದ ನಾಲ್ಕು ದಿಕ್ಕುಗಳಿಗೆ ಕೊಂಡಿಯಾಗಿದೆ. ವಾರಣಾಸಿ, ಆಯೋಧ್ಯೆ ಮತ್ತು ಪ್ರಯಾಗ್‌ರಾಜ್‌ನಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿದ್ದು, ಪ್ರತಿದಿನ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.
56
ಉತ್ತರ ಪ್ರದೇಶ ಪ್ರಮುಖ ಕಾರಿಡಾರ್
ಉತ್ತರ ಪ್ರದೇಶದ ದೇಶದ ಪಮುಖ ಕಾರಿಡಾರ್ ಆಗಿದ್ದು, ಭಾರತೀಯ ಪ್ರಮುಖ ಮಾರ್ಗಗಳು ಈ ರಾಜ್ಯದ ಮೂಲಕ ಹೋಗುತ್ತವೆ. ದೆಹಲಿ–ಹೌರಾ, ದೆಹಲಿ–ಮುಂಬೈ, ಮತ್ತು ದೆಹಲಿ–ಕೋಲ್ಕತ್ತಾದಂತಹ ಮಾರ್ಗಗಳು ಈ ರಾಜ್ಯದ ಮುಖೇನ ಹೋಗಬೇಕಾಗುತ್ತದೆ. ಉತ್ತರ ಪ್ರದೇಶ ರಾಜ್ಯ ಸರುಕು ಸಾಗಣೆಗೂ ಪ್ರಸಿದ್ಧಿಯಾಗಿದೆ. ಭಾರತದ ವ್ಯಾಪಾರ ಮತ್ತು ಸಾಂಸ್ಕೃತಿಕ ಚಲಿಸುವ ರಾಯಭಾರಿಯಾಗಿ ರೈಲ್ವೆ ಕೆಲಸ ಮಾಡುತ್ತದೆ.