ಜೈನ ಸಂನ್ಯಾಸಿ ಹತ್ಯೆ To ನೇಹಾ ಮರ್ಡರ್‌: ಕರ್ನಾಟಕದಲ್ಲಿ ಕುರುಡಾಯ್ತು ಕಾನೂನು..!

First Published Apr 19, 2024, 4:36 PM IST

ಕಳೆದೊಂದು ವರ್ಷದಲ್ಲಿ ಕರ್ನಾಟಕದಲ್ಲಿ ಆಗಿರುವ ಸೆನ್ಸೇಷನ್‌ ಕ್ರೈಂ ಕೇಸ್‌ಗಳನ್ನ ನೋಡಿದ್ರೆ, ರಾಜ್ಯದಲ್ಲಿ ಕಾನೂನು ಶಾಂತಿ ಸುವ್ಯವಸ್ಥೆ ಇದ್ಯಾ? ಇಲ್ವಾ ಅನ್ನೋ ಅನುಮಾನವೇ ಮೂಡುತ್ತದೆ. ಇತ್ತೀಚಿನ ದಿನಗಳಲ್ಲಿ ನಡೆದ ಕೇಸ್‌ಗಳನ್ನ ನೋಡಿದ್ರೆ ಕರ್ನಾಟಕದಲ್ಲಿ ಕಾನೂನು ಕುರುಡಾಗಿದೆ. ಜನರ ಜೀವಕ್ಕೆ ಗ್ಯಾರಂಟಿಯೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿಯ ಚಿಕ್ಕೋಡಿಯ ಹೀರೇಕೋಡಿಯ ಜೈನಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಕೊಟ್ಟ ಹಣವನ್ನು ವಾಪಾಸ್‌ ಕೇಳಿದ್ದಕ್ಕೆ ಜೈನಮುನಿಗೆ ಕರೆಂಟ್‌ ಶಾಕ್‌ ಕೊಟ್ಟು ಕೊಲೆ ಮಾಡಿದ್ದಲ್ಲದೆ, ಮೃತದೇಹವನ್ನು ಪೀಸ್‌ ಪೀಸ್‌ ಮಾಡಲಾಗಿತ್ತು ಎನ್ನುವ ವರದಿಗಳು ಬಂದಿದ್ದವು.

ಅದಾದ ಬಳಿಕ ರಾಜ್ಯದ ಕಾನೂನು ಸುವ್ಯವಸ್ಥೆ ಮೇಲೆ ಗಂಭೀರ ಆರೋಪ ಎದುರಾಗಿದ್ದ ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ಕ್ಯಾಮೆರಾ ಇರಿಸಿದ ಪ್ರಕರಣ. ಸ್ವತಃ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಇದನ್ನು ಮಕ್ಕಳಾಟಿಕೆ ಎನ್ನುವ ಮೂಲಕ ಪ್ರಕರಣದ ಗಂಭೀರತೆಯನ್ನೇ ಲೇವಡಿ ಮಾಡಿದ್ದರು. ಇದು ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.
 

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲಾಗಿ ಮೆರವಣಿಗೆ ಮಾಡಲಾಗಿತ್ತು ಎನ್ನುವ ಸುದ್ದಿಯ ನಡುವೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲು ಮಾಡಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಲಾಗಿತ್ತು. ರಾಜ್ಯವೇ ತಲೆತಗ್ಗಿಸುವಂತ ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
 

ಶಿವಮೊಗ್ಗ ರಾಗಿಗುಡ್ಡ ಕೇಸ್‌ನಲ್ಲೂ ಇದೇ ರೀತಿಯ ಪ್ರಶ್ನೆಗಳು ಬಂದಿದ್ದವು. ಈದ್‌ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗದ ಶಾಂತಿನಗರ-ರಾಗಿಗುಡ್ಡದಲ್ಲಿ ಹಿಂದು-ಮುಸ್ಲಿಂ ಗಲಾಟೆ ನಡೆದಿತ್ತು. ರಾಗಿಗುಡ್ಡದಲ್ಲಿ ಹಿಂದುಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.
 

ಶಿವಮೊಗ್ಗದಲ್ಲಿ ಟಿಪ್ಪು ಸಾಮ್ರಾಜ್ಯ ಎನ್ನುವ ಪೋಸ್ಟ್‌ ಹಾಗೂ ಔರಂಗಜೇಬ್‌ ಕಟೌಟ್‌ ಹಾಕುವ ಮೂಲಕ ಶಾಂತಿಗೆ ಭಂಗಪಡಿಸುವ ಪ್ರಯತ್ನ ಮಾಡಲಾಗಿತ್ತು. ಕೊನೆಗೆ ಇದೇ ಸಂಗತಿ ಶಿವಮೊಗ್ಗದಲ್ಲಿ ಗಲಾಟೆಗೂ ಕಾರಣವಾಯಿತು.
 

ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಹಳ್ಳಿಕಾರ್‌ ಸಂತೋಷ್‌ನನ್ನು ಹುಲಿ ಉಗುರು ಪೆಂಡೆಂಟ್‌ ಕೇಸ್‌ನಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ ಎನ್ನುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಆದರೆ, ರಾಜಕಾರಣಿಗಳು, ಸೆಲೆಬ್ರಿಟಿಗಳು ಕೂಡ ಇದೇ ರೀತಿ ಹುಲಿ ಪೆಂಡೆಂಟ್‌ ಹೊಂದಿದ್ದಾರೆ ಎಂದು ಜನರು ಪ್ರಶ್ನೆ ಮಾಡಿದ ಬಳಿಕ ಸರ್ಕಾರ ಸುಮ್ಮನಾಗಿತ್ತು. 
 

ಮಂಡ್ಯ ಕೆರಗೋಡು ಹನುಮಧ್ವಜ ಕೇಸ್‌ನಲ್ಲೂ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಎದುರಾಗಿತ್ತು. ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದ್ದರಿಂದ ರಾಜ್ಯಮಟ್ಟದಲ್ಲಿ ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.ಮಂಡ್ಯ ಜಿಲ್ಲೆ ಕೆರಗೋಡು ಎಂಬಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು 108 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಹನುಮ ಧ್ವಜ ವನ್ನು ಹಾರಿಸಿದ್ದರು. ಈ ಧ್ವಜವನ್ನು ತೆರವುಗೊಳಿಸಿದ ಪೊಲೀಸರ ಕ್ರಮ ಟೀಕೆಗೆ ಗುರಿಯಾಗಿತ್ತು.
 

ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಬರಲಿಲ್ಲ ಎನ್ನುವ ಕಾರಣಕ್ಕೆ ಹಾಸ್ಟೆಲ್ ವಿದ್ಯಾರ್ಥಿಯೊಬ್ಬನ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕಲಬುರಗಿ ನಗರದ ಹೈಕೋಟ್೯ ಹತ್ತಿರ ಇರೋ ಬಾಲಕರ ಹಾಸ್ಟೆಲ್ ನಲ್ಲಿ ನಡೆದಿತ್ತು.
 

ಕರ್ನಾಟಕದಲ್ಲಿ ಮತ್ತೊಮ್ಮೆ ಹೆಣ್ಣು ಭ್ರೂಣ ಹತ್ಯೆ ಕೇಸ್‌ಗಳು ಹುಟ್ಟಿಕೊಳ್ಳಲು ಆರಂಭಿಸಿದ್ದವು. ಏಷ್ಯಾನೆಟ್‌ ಸುವರ್ಣನ್ಯೂಸ್‌ ಈ ಕುರಿತಾಗಿ ಸರಣಿ ವರದಿಗಳನ್ನು ಪ್ರಸಾರ ಮಾಡಿದ ಬಳಿಕ ರಾಜ್ಯಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. 

ಕಡ್ಡಾಯ ಕನ್ನಡ ನಾಮಫಲಕದ ಗಲಾಟೆ ಕೂಡ ರಾಜ್ಯದಲ್ಲಿ ಜೋರಾಗಿ ಸದ್ದು ಮಾಡಿತು. ಸುಲಭವಾಗಿ ಬಗೆಹರಿಸಬಹುದಾಗಿದ್ದ ಸಮಸ್ಯೆಯನ್ನೂ ಜಟಿಲ ಮಾಡಲಾಯಿತು. ಇದು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು.
 

ಬೆಂಗಳೂರಿನಲ್ಲಿ ಯುವತಿ ಕಾರನ್ನು ಸ್ಕೂಟರ್‌ನಲ್ಲಿ ತ್ರಿಬಲ್ ರೈಡ್ ಮೂಲಕ ಬಂದ ಪುಂಡರು ಚೇಸ್ ಮಾಡಿ ಕಿರಿಕ್ ಮಾಡಿದ್ದರು. ಚಲಿಸುತ್ತಿರುವ ಕಾರಿನ ಗಾಜು ಒಡೆಯಲು, ಡೋರ್ ತೆರೆಯಲು ಪ್ರಯತ್ನಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಕಾರು ನಿಲ್ಲಿಸಲು ಬೆದರಿಕೆ ಹಾಕಿದ ಘಟನೆ ನಡೆದಿತ್ತು. ಇದು ಬೆಂಗಳೂರಿನ ಲಾ & ಆರ್ಡರ್‌ ಬಗ್ಗೆ ಪ್ರಶ್ನೆ ಏಳಲು ಕಾರಣವಾಗಿತ್ತು.

ಬೆಂಗಳೂರಿನ ನಗರ್ತಪೇಟೆಯಲ್ಲಿ ನಡೆದ ಗಲಾಟೆ ತೀರಾ ಇತ್ತೀಚಿನದು. ಕೆಲ ಮುಸ್ಲಿಂ ಪುಂಡರು ಹಿಂದು ಯುವಕನ ಮೇಲೆ ಹಲ್ಲೆ ಮಾಡಿದ್ದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. 
 


ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ ಪೊಲೀಸ್‌ ಇಲಾಖೆಯ ವೈಫಲ್ಯವನ್ನು ಮತ್ತೆ ಎತ್ತಿ ತೋರಿಸಿತ್ತು. ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಬಳಿಕ ರಾಜ್ಯದಲ್ಲಿ ನಡೆದ ಪ್ರಮುಖ ಭಯೋತ್ಪಾದಕ ಘಟನೆ ಇದಾಗಿತ್ತು.
 

ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆಯನ್ನೂ ಕೂಗಲಾಯಿತು. ರಾಜ್ಯಸಭೆ ಸಂಸದ ನಾಸಿರ್‌ ಹುಸೇನ್‌ ಗೆಲುವಿನ ಬಳಿಕ ವಿಧಾನಸೌಧದ ಆವರಣದಲ್ಲಿಯೇ ಅವರ ಬೆಂಬಲಿಗರು ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದರಯ.
 

ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಮೆರವಣಿಗೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ತನ್ನ ಜೇಬಿನಲ್ಲಿ ಗನ್‌ ಇಟ್ಟುಕೊಂಡೇ ಸಿಎಂಗೆ ಹಾರ ಹಾಕಿದ್ದ. ಆತನಿಗೆ ಗನ್‌ ಲೈಸೆನ್ಸ್‌ ಇದ್ದರೂ, ಇದೂ ಸಿಎಂ ಭದ್ರತೆಯ ಕುರಿತಾಗಿ ಪ್ರಶ್ನೆಗಳನ್ನು ಎಬ್ಬಿಸಿದ್ದವು.
 

ಕಾಂಗ್ರೆಸ್‌ ಕಾರ್ಪೋರೇಟರ್‌ ನಿರಂಜನಯ್ಯ ಹಿರೇಮಠ್‌, ಪುತ್ರಿ ನೇಹಾಳನ್ನು ಹಾಡಹಗಲೇ ಕಾಲೇಜಿನಲ್ಲಿ ಚೂರಿ ಇರಿದು ಫಯಾಜ್‌ ಕೊಂದಿದ್ದಾನೆ. ಇದರ ಬೆನ್ನಲ್ಲಿಯೇ ರಾಜ್ಯದ ಪೊಲೀಸ್‌ ಇಲಾಖೆಯ ಸಾಲು ಸಾಲು ವೈಫಲ್ಯಗಳ ಬಗ್ಗೆ ಜನ ಪ್ರಶ್ನೆ ಮಾಡಿದ್ದಾರೆ.

click me!