ಕಲಿಯುಗದ ಅಂತ್ಯಕ್ಕೆ ಕಲ್ಕಿ ಅವತಾರವೆತ್ತುತ್ತಾನಂತೆ? ಯಾವಾಗ ಸಂಭವಿಸೋದು ಇದು?

First Published | Apr 30, 2024, 1:28 PM IST

'ಕಲ್ಕಿ ಅವತಾರ್' ಇನ್ನೂ ಅವತಾರವೆತ್ತಿಲ್ಲ. ಕಲ್ಕಿ ಅವತಾರದ ನಂತರ ಕಲಿಯುಗ ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ. ಈ ಅವತಾರ ಯಾವಾಗ ಸಂಭವಿಸುತ್ತದೆ, ಅದರ ರೂಪವೇನು? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
 

ಧಾರ್ಮಿಕ ಗ್ರಂಥಗಳ ಪ್ರಕಾರ, ಪ್ರಪಂಚದಾದ್ಯಂತ ಸತ್ಯ, ಶಾಂತಿ ಎಲ್ಲವೂ ಕೊನೆಗೊಂಡು ಅನೀತಿ ಹರಡಲು ಪ್ರಾರಂಭಿಸಿದಾಗ, ವಿಷ್ಣು ಎತ್ತಲಿರುವ ಹತ್ತನೇ ಅವತಾರವೇ ಕಲ್ಕಿ ಅವತಾರ. ಧರ್ಮಗ್ರಂಥಗಳಲ್ಲಿ ವಿಷ್ಣುವಿನ 24 ಅವತಾರಗಳ ವರ್ಣನೆ ಇದೆ, ಅವುಗಳಲ್ಲಿ ಶ್ರೀಹರಿಯ 'ಕಲ್ಕಿ ಅವತಾರ' (Kalki Avatar) ಇನ್ನೂ ಅವತಾರವೆತ್ತಿಲ್ಲ.
 

ಕಲ್ಕಿ ಅವತಾರವನ್ನು ವಿಷ್ಣುವಿನ (Lord Vishnu) ಭವಿಷ್ಯದ 10ನೇ ಅವತಾರವೆಂದು ಪರಿಗಣಿಸಲಾಗಿದೆ. ಕಲ್ಕಿ ಅವತಾರದ ನಂತರ ಕಲಿಯುಗ ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ. ಈ ಅವತಾರ ಯಾವಾಗ ಸಂಭವಿಸುತ್ತದೆ, ಅವುಗಳ ರೂಪವೇನು? ಕಲ್ಕಿ ಅವತಾರದ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳೋಣ-

Tap to resize

ಕಲ್ಕಿ ಅವತಾರ 
ಪುರಾಣಗಳ ಪ್ರಕಾರ, ಕಲಿಯುಗದ  (Kaliyug) ಕೊನೆಯಲ್ಲಿ, ವಿಷ್ಣುವು ಕಲ್ಕಿ ರೂಪದಲ್ಲಿ ಅವತಾರ ತಾಳುತ್ತಾನೆ. ಸನಾತನ ಧರ್ಮದ ನಂಬಿಕೆಯ ಪ್ರಕಾರ, ಈ ಅವತಾರವು ಅಧರ್ಮದ ಅಂತ್ಯವಾಗಿ ಮತ್ತು ಸತ್ಯಯುಗ ಆರಂಭವಾಗುವ ಸಮಯವಾಗಿದೆ. ಕಲ್ಕಿ ಅವತಾರವನ್ನು ತೆಗೆದುಕೊಳ್ಳುವ ಮೂಲಕ, ಶ್ರೀ ಹರಿ ಭೂಮಿಯಿಂದ ಪಾಪಿಗಳನ್ನು ನಾಶಪಡಿಸುತ್ತಾನೆ.

ಕಲ್ಕಿ ಅವತಾರ ಯಾವಾಗ ಸಂಭವಿಸುತ್ತದೆ?  
ಧಾರ್ಮಿಕ ಗ್ರಂಥಗಳ ಪ್ರಕಾರ, ಕಲಿಯುಗವು ಕ್ರಿ.ಪೂ 3102 ರಿಂದ ಪ್ರಾರಂಭವಾಯಿತು. ಶ್ರೀ ಕೃಷ್ಣನು (Shri Krishna) ಭೂಲೋಕವನ್ನು ತೊರೆದ ಕೂಡಲೇ ಕಲಿಯುಗದ ಮೊದಲ ಹಂತ ಪ್ರಾರಂಭವಾಯಿತು. ಪುರಾಣಗಳ ಪ್ರಕಾರ, ಭೂಮಿಯ ಮೇಲಿನ ಕಲಿಯುಗದ ಇತಿಹಾಸವು 4 ಲಕ್ಷ 32 ಸಾವಿರ ವರ್ಷಗಳು. 
 

ಶ್ರೀಮದ್ ಭಾಗವತ ಪುರಾಣದ 12 ನೇ ಸ್ಕಂದ 24 ನೇ ಶ್ಲೋಕದಲ್ಲಿ, ಗುರು, ಸೂರ್ಯ ಮತ್ತು ಚಂದ್ರ ಒಟ್ಟಾಗಿ ಪುಷ್ಯ ನಕ್ಷತ್ರವನ್ನು ಪ್ರವೇಶಿಸಿದಾಗ, ಕಲ್ಕಿ ದೇವರು ಅವತಾರ ತಾಳುತ್ತಾನೆ ಎಂದು ಹೇಳಲಾಗಿದೆ. ಅವರು ಕಲಿಯುಗದ ಕೊನೆಯಲ್ಲಿ ಮತ್ತು ಸತ್ಯಯುಗದ ಆರಂಭದ ಅವಧಿಯಲ್ಲಿ ಅವತರಿಸುತ್ತಾರೆ. ಪುರಾಣಗಳಲ್ಲಿ ಶ್ರೀ ಹರಿಯ ಹತ್ತನೇ ಅವತಾರದ ದಿನಾಂಕದ ಪ್ರಕಾರ, ಭಗವಂತ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಜನಿಸುತ್ತಾನೆ.

ಕಲ್ಕಿ  ಎಲ್ಲಿ ಅವತಾರವೆತ್ತುವನು?
ಕಲ್ಕಿ ಪುರಾಣದ ಪ್ರಕಾರ, ವಿಷ್ಣುವಿನ ಕಲ್ಕಿ ಅವತಾರವು ಸಂಭಾಲ್ ಗ್ರಾಮದಲ್ಲಿ ಅವತಾರವೆತ್ತುತ್ತದೆ. ಭಗವಾನ್ ವಿಷ್ಣುವಿನ 10 ನೇ ಅವತಾರವು ಉತ್ತರ ಪ್ರದೇಶದ ಮೊರಾದಾಬಾದ್ ಬಳಿಯ ಸಂಭಾಲ್ ಗ್ರಾಮದಲ್ಲಿ (Sambhaldham village) ಅವತಾರವೆತ್ತಲಿದ್ದಾರೆ ಎಂದು ನಂಬಲಾಗಿದೆ.

ಕಲ್ಕಿ ಅವತಾರದ ಸ್ವರೂಪವೇನು?
'ಅಗ್ನಿ ಪುರಾಣ'ದ ಹದಿನಾರನೇ ಅಧ್ಯಾಯದಲ್ಲಿ, ಕಲ್ಕಿ ಅವತಾರವನ್ನು ಬಿಲ್ಲು ಬಾಣಗಳನ್ನು ಹಿಡಿದಿರುವ ಕುದುರೆ ಸವಾರನಂತೆ ಚಿತ್ರಿಸಲಾಗಿದೆ. ಕಲ್ಕಿ ದೇವದತ್ತ ಎಂಬ ಬಿಳಿ ಕುದುರೆಯ (white horse) ಮೇಲೆ ಕುಳಿತು ಪಾಪಿಗಳನ್ನು ನಾಶಪಡಿಸುತ್ತಾನೆ ಎಂದು ಬಿಂಬಿಸಲಾಗಿದೆ.

ಈ ಅವತಾರವು 64 ಕಲೆಗಳನ್ನು ಸಹ ತಿಳಿದಿರುತ್ತದೆ. ಕಲಿಯ ಗುರು ಚಿರಂಜೀವಿ ಪರಶುರಾಮನಾಗಿರುತ್ತಾನೆ (Parashurama), ಅವನ ಸೂಚನೆಯ ಮೇರೆಗೆ ಕಲ್ಕಿ ಶಿವನ ಕುರಿತು ತಪಸ್ಸು ಮಾಡುತ್ತಾನೆ ಮತ್ತು ದೈವಿಕ ಶಕ್ತಿಗಳನ್ನು (Devotional Power) ಪಡೆಯುವ ಮೂಲಕ ಅನೀತಿಯನ್ನು ಕೊನೆಗೊಳಿಸುತ್ತಾನೆ.
 

Latest Videos

click me!