ಸಂಸದ ಪ್ರಜ್ವಲ್ ರೇವಣ್ಣನ ಮೊಬೈಲ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಅನ್ನು ಸ್ವತಃ ಅವರ ಕಾರು ಚಾಲಕ ಕಾರ್ತಿಕ್ ನನಗೆ ಕೊಟ್ಟಿದ್ದಾನೆ ಎಂದು ವಕೀಲ ದೇವರಾಜೇಗೌಡ ತಿಳಿಸಿದ್ದಾರೆ.
ಬೆಂಗಳೂರು (ಏ.30): ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ದೇಶದಾದ್ಯಂತ ದೊಡ್ಡ ಸಂಚಲನ ಉಂಟು ಮಾಡ್ತಿದೆ. ಆದರೆ, ಸಂಸದ ಪ್ರಜ್ವಲ್‌ನ ಮೊಬೈಲ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳು ಅವರ ಕಾರು ಚಾಲಕ ಕಾರ್ತಿಕ್ ಅವರಿಗೆ ಹೇಗೆ ಸಿಕ್ಕಿದ್ದಾವೆ. ಇದರಿಂದ ಕಾಂಗ್ರೆಸ್‌ಗೆ ಲಾಭವಾಗಿದೆ ಎಂದರೆ ಯಾರು ಕೊಟ್ಟಿರಬಹುದು ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ದೇಶದಾದ್ಯಂತ ದೊಡ್ಡ ಸಂಚಲನ ಉಂಟು ಮಾಡ್ತಿದೆ. ಕಾರ್ತಿಕ್ 14-15 ವರ್ಷದಿಂದ ಪ್ರಜ್ವಲ್ ಹತ್ರ ಕೆಲಸ ಮಾಡ್ತಿದ್ದೆ ಅಂತಾ ಆತನೇ ಹೇಳಿಕೊಂಡಿದ್ದಾನೆ. ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಸ್ಟೇ ಕೂಡ ತಗೊಂಡಿದ್ದಾರೆ. ಕಾರ್ತಿಕ್ ನನ್ನ ಹೆಂಡತಿನಾ ಕಿಡ್ನಾಪ್ ಮಾಡಿದ್ದ ಅಂತಾ ಹೇಳಿಕೊಂಡಿದ್ದ. ಕಾಂಗ್ರೆಸ್ ನವರ ಹತ್ರ ಹೋಗಿದ್ದೆ ನ್ಯಾಯ ಸಿಗಲಿಲ್ಲ ಅಂತಾ ಹೇಳಿದ್ದನು. ಜೊತೆಗೆ, ಸ್ಟೇ ತೆಗೆಸಲು ಹೇಳಿದ್ದಾಗಿ ಹೇಳಿಕೊಂಡಿದ್ದಾನೆ. ಆದರೆ, ನಾನು ವಕೀಲನಾಗಿ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಮಾಡಬೇಕು. ಹೀಗಾಗಿ ನನಗೆ ಆತ ಪೆನ್ ಡ್ರೈವ್ ಕೊಟ್ಟಿದ್ದನು ಎಂದು ಹೇಳಿಕೊಂಡಿದ್ದಾನೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಡ್ರೈವರ್ ಕಾರ್ತಿಕ್ ಸ್ಪೋಟಕ ಮಾಹಿತಿ
ನಾನು ಯಾರಿಗೂ ಕೊಡಲ್ಲ, ಕೋರ್ಟ್ ನಲ್ಲಿ ಜಡ್ಜ್ ಮುಂದೆ ಕೊಡ್ತೀನಿ ಅಂತಾ ಅಂದಿದ್ದೆ. ಅದ್ರೆ ಅಶ್ಲೀಲ ವಿಡಿಯೋ ಕಾರ್ತಿಕ್ ಕೈಗೆ ಹೇಗೆ ಬಂತು. ಡೌನ್‌ಲೋಡ್ ಮಾಡಿದವರು ಯಾರು? ಪೆನ್ ಡ್ರೈವ್ ಎಲ್ಲಿಂದ ಬಂತು. ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ ಇದ್ದ ವಿಡಿಯೋಗಳು ಕಾರ್ತಿಕ್ ಗೆ ಹೇಗೆ ಬಂದವು? ದೃಶ್ಯ ಮತ್ತು ಪ್ರಿಂಟ್ ಮೀಡಿಯಾ ಮೇಲೆ ಇಂಜೆಕ್ಷನ್ ತಂದರು. ಅದ್ರೆ., ಇದರಲ್ಲಿ ಕಾರು ಚಾಲಕ ಕಾರ್ತಿಕ್ ನನ್ನ ಅಲ್ಲಿ ಪಾರ್ಟಿ ಮಾಡಿಲ್ಲ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಅನ್ನು ಬಿಜೆಪಿಯವರು ಯಾಕ್ ಲೀಕ್ ಮಾಡ್ತಾರೆ. ಜೆಡಿಎಸ್ ನವರು ಅವರದು ಅವರೇ ಲೀಕ್ ಮಾಡ್ತಾರಾ? ಇದರಿಂದ ಕಾಂಗ್ರೆಸ್ ನವರಿಗೆ ಲಾಭವಾಗುತ್ತದೆ. ಹೀಗಾಗಿ, ಕಾರ್ತಿಕ್ ಮೊದಲೇ ಹೇಳಿದಂತೆ ಕಾಂಗ್ರೆಸ್‌ನಿಂದ ನ್ಯಾಯ ಸಿಕ್ಕಿಲ್ಲ ಅಂದಿದ್ದನು. ಕಾರ್ತಿಕ್ ಹೇಳಿದ್ದು ಎಲ್ಲಾ ಸತ್ಯ. ಅದ್ರೆ ಕೊನೆಯಲ್ಲಿ ಹೇಳಿದ್ದು, ಪೆನ್ ಡ್ರೈವ್ ಬಿಟ್ಟಿದ್ದ ವಿಚಾರ ಸುಳ್ಳು ಎಂದರು. ಹೆಣ್ಣು ಮಕ್ಕಳ ಭವಿಷ್ಯ ಇರುವ ಪೆನ್ ಡ್ರೈವ್ ಕಾರ್ತಿಕ್ ಗೆ ಹೇಗೆ ಬಂತು? ವಿಡಿಯೋಗಳು ಹೇಗೆ ಬಂತು? ನಾನು ಬಿಜೆಪಿ ಹೈಕಮಾಂಡ್‌ಗೆ ಲೆಟರ್ ಕೂಡ ಬರೆದಿದ್ದೆನು ಎಂದು ವಕೀಲ ದೇವರಾಜೇಗೌಡ ಹೇಳಿದರು.
ಕೇಂದ್ರ ಸರ್ಕಾರ ತಲುಪಿದ ಪ್ರಜ್ವಲ್ ರೇವಣ್ಣ ಕಾಮಕಾಂಡ; ಮಹಿಳೆಯರ ಅವಮಾನ ಸಹಿಸೊಲ್ಲವೆಂದ ಅಮಿತ್ ಶಾ!
ಇದು ನಮ್ಮ ಜಿಲ್ಲೆ, ರಾಜ್ಯದ ಹೆಣ್ಣು ಮಕ್ಕಳ ಮಾನ ಗೌರವದ ಪ್ರಶ್ನೆಯಾಗಿದೆ. ಅವರ ಗೌರವಕ್ಕೆ ನಾನು ದಕ್ಕೆ ತರಲ್ಲ. ಎಸ್ಐಟಿ ನನಗೆ ನೋಟಿಸ್ ಕೊಡಲಿ ಅಂತಾ ಕಾಯ್ತಾ ಇದ್ದೀನಿ. ನನ್ನತ್ರ ಕೆಲವು ದಾಖಲೆಗಳು ಇವೆ ಕೊಡ್ತೀನಿ. ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಲಿ. ಇಲ್ಲದಿದ್ದರೆ ಹೈಕೋರ್ಟ್ ನಲ್ಲಿ ರಿಟ್ ಹಾಕ್ತೀನಿ. ಸಿಬಿಐಗೆ ವಹಿಸಬೇಕು ಅಂತಾ ಕೊರುತ್ತೇನೆ ಎಂದು ವಕೀಲ ದೇವರಾಜೇಗೌಡ ಮಾಹಿತಿ ನೀಡಿದರು.