ಅಯ್ಯೋ ಪ್ಯಾಂಟ್ ಎಲ್ಲಿ!! ಟಿ ಶರ್ಟ್‌ನಲ್ಲೇ ಪೋಸ್ ನೀಡಿದ 'ಸಪ್ತ ಸಾಗರದಾಚೆ ಎಲ್ಲೋ' ನಾಯಕಿ, ಫೋಟೋ ವೈರಲ್

First Published Jun 2, 2023, 11:35 AM IST

'ಸಪ್ತ ಸಾಗರದಾಚೆ ಎಲ್ಲೋ' ನಾಯಕಿ ಚೈತ್ರಾ ಆಚಾರ್ ಪ್ಯಾಂಟ್ ಲೆಸ್ ಆಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. 

ನಟಿ ಚೈತ್ರಾ ಆಚಾರ್ ಸಿಕ್ಕಾಪಟ್ಟೆ ಬೋಲ್ಡ್ ನಟಿ. ಚೈತ್ರಾ ತ್ರರಂಗದಕ್ಕೆ ಬಂದು ಒಂದಿಷ್ಟು ವರ್ಷಗಳಾದರೂ ಹೆಚ್ಚು ಖ್ಯಾತಿ ಗಳಿಸಿದ್ದು ಇನ್ನೂ ರಿಲೀಸ್ ಆಗದ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ. 

ರಕ್ಷಿತ್ ಶೆಟ್ಟಿ ನಟನೆಯ ಈ ಚಿತ್ರದಲ್ಲಿ ಚೈತ್ರಾ ಆಚಾರ್ ಎರಡನೇ ನಾಯಕಿ. ಈಗಾಗಲೇ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಪುಟ್ಟ ಟೀಸರ್ ರಿಲೀಸ್ ಆಗಿದ್ದು ಚೈತ್ರಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ. 
 

ವಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆಯುತ್ತಿರುವ ಚೈತ್ರಾ 2019ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮಹಿರಾ ಸಿನಿಮಾ ಮೂಲಕ ಸಿನಿಮಾದಲ್ಲಿ ಮಿಂಚಿದರು. ಗಿಲ್ಕಿ, ತಲೆತಂಡ ಸಿನಿಮಾಗಳಲ್ಲಿ ನಟಿಸಿರುವ ಚೈತ್ರಾ ಇದೀಗ ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಎಲ್ಲೋ ಮೂಲಕ ಅಭಿಮಾನಿಗಲ ಮುಂದೆ ಬರಲು ಸಜ್ಜಾಗಿದ್ದಾರೆ. 

ಚೈತ್ರಾ ಆಚಾರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ. ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿರುವ ನಟಿ ಚೈತ್ರಾ ಇದೀಗ ಪ್ಯಾಂಟ್ ಲೆಸ್ ಆಗಿ ಪೋಸ್ ನೀಡಿದ್ದಾರೆ. 

ಪ್ಯಾಂಟ್ ಧರಿಸದೇ ಟಿ ಶರ್ಟ್‌ನಲ್ಲೇ ಕ್ಯಾಮರಾಗೆ ಪೋಸ್ ನೀಡಿರುವ ಚೈತ್ರಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದಾ ಹಾಟ್ ಫೋಟೋಗಳನ್ನು ಹರಿಬಿಡುವ ಚೈತ್ರಾ ಈ ಬಾರಿ ಪ್ಯಾಂಟ್ ಇಲ್ಲದೆ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ. 
 

ಕೆಂಪು ಬಣ್ಣದ ಟಿ ಶರ್ಟ್‌ನಲ್ಲಿ ಚೈತ್ರಾ ಬೆಡ್ ಮೇಲೆ ಕುಳಿತು ತರಹೇವಾರಿ ಪೋಸ್ ನೀಡುತ್ತಿದ್ದಾರೆ. ಚೈತ್ರಾ ಫೋಟೋಗಳಿಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

ಪ್ರತಿಭಾವಂತ ನಟಿ ಹಾಗೂ ಗಾಯಕಿ ಕೂಡ ಹೌದು ಚೈತ್ರಾ. 'ಗರುಡ ಗಮನ ವೃಷಭ ವಾಹನ' ಸಿನಿಮಾದ  'ಮಾದೇವ ಮಾದೇವ.. ಸೋಜುಗಾದ ಸೂಜಿಮಲ್ಲಿಗೆ' ಹಾಡನ್ನು ಹಾಡಿದ್ದು ಚೈತ್ರಾ ಆಚಾರ್ ಅವರೇ. ಆ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. 

ಸದ್ಯ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್ ಮುಗಿಸಿರುವ ಚೈತ್ರಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ನಡುವೆ ಪ್ರವಾಸ ಅಂಥ ಎಂಜಾಯ್ ಮಾಡುವ ಚೈತ್ರಾ ಒಂದಿಷ್ಟು ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ಚೈತ್ರಾ ಶೇರ್ ಮಾಡಿರುವ ಹೊಸ ಫೋಟೋಗಳು ವೈರಲ್ ಆಗಿವೆ. 

ಸದ್ಯ ಚೈತ್ರಾ ಆಚಾರ್ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗ್ತಿದೆ. 'ಸ್ಟ್ರಾಬೆರಿ', 'ಬ್ಲಿಂಕ್', 'ಹ್ಯಾಪಿ ಬರ್ತ್‌ಡೇ ಟು ಮಿ', 'ಯಾರಿಗೂ ಹೇಳ್ಬೇಡಿ', 'ಅಕಟಕಟ' ಹೀಗೆ ಈಕೆ ನಟಿಸುತ್ತಿರುವ ನಾಲ್ಕೈದು ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ.
 

click me!