'ಕಾಟೇರ'ಕ್ಕೆ ದುಡಿದ ಕಲಿಗಳಿಗೆ ಬಿಗ್‌ಸರ್ಪ್ರೈಸ್..! ಮೂವರಿಗೆ ಉಡುಗೊರೆಯಾಗಿ ಸಿಕ್ತು ಸೂಪರ್ ಕಾರು!

'ಕಾಟೇರ'ಕ್ಕೆ ದುಡಿದ ಕಲಿಗಳಿಗೆ ಬಿಗ್‌ಸರ್ಪ್ರೈಸ್..! ಮೂವರಿಗೆ ಉಡುಗೊರೆಯಾಗಿ ಸಿಕ್ತು ಸೂಪರ್ ಕಾರು!

Published : May 04, 2024, 10:36 AM IST

ನಟ ದರ್ಶನ್ ಲಾಂಗ್ ಗ್ಯಾಪ್‌ನ ನಂತರ ಸೂಪರ್ ಡೂಪರ್ ಬಿಗ್‌ಹಿಟ್ ಕೊಟ್ಟ ಸಿನಿಮಾ ಕಾಟೇರ. 2011ರಲ್ಲಿ ಬಂದ ಸಾರಥಿ ಸಿನಿಮಾ ಯಾವ ಮಟ್ಟಕ್ಕೆ ಸಕ್ಸಸ್ ಆಗಿತ್ತೋ ಅದೇ ರೇಂಜ್‌ನಲ್ಲಿ ಕಾಟೇರ ಗೆದ್ದು ಬೀಗಿದೆ. ಈ ಗೆಲುವು ಕಾಟೇರಕ್ಕಾಗಿ ದುಡಿದ ಕಲಿಗಳಿಗೆ ಬಿಗ್ ಸರ್ಪ್ರೈಸ್ ಸಿಗೋ ಹಾಗೆ ಮಾಡಿದೆ. ಕಾಟೇರದ ಹಿಂದಿನ ಶಕ್ತಿಯಾಗಿದ್ದ ಮೂರು ಜನ ಕಾಟೇರ ಕಲಿಗೆಳಿಗೆ ಕಾರುಗಳು ಗಿಫ್ಟ್ ಆಗಿ ಸಿಕ್ಕಿವೆ.

ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರೋ ರಾಕ್‌ಲೈನ್‌ ವೆಂಕಟೇಶ್(Rockline Venkatesh) ನಿರ್ಮಾಣದ ಕಾಟೇರ ಸಿನಿಮಾ(Kaatera Movie) 100 ದಿನ ಪೂರೈಸಿದೆ. ಈ ಖುಷಿಯಲ್ಲಿ ಸಿನಿಮಾ ಗೆಲುವಿನ ಹಿಂದೆ ಇದ್ದ ತಂತ್ರಜ್ನರಿಗೆ ನಿರ್ಮಾಪಕ ರಾಕ್‌ಲೈನ್ ಕಾರು ಗಿಫ್ಟ್(Car Gift) ಕೊಟ್ಟಿದ್ದಾರೆ. ಡೈಲಾಗ್ ರೈಟರ್ ಮಾಸ್ತಿ, ಕಥೆಗಾರ ಜಡೇಶ್ ಹಂಪಿ ಹಾಗು ನಟ ಸೂರಜ್‌ಗೆ ನಟ ದರ್ಶನ್ರಿಂದ(Darshan) ಕಾರು ಹಸ್ತಾಂತರ ಮಾಡಲಾಯ್ತು. ಈ ಮೂಲಕ ಕಾಟೇರ ಪರದೆ ಹಿಂದೆ ಕೆಲಸ ಮಾಡಿದ ತಂತ್ರಜ್ಞರ ಬೆನ್ನುತಟ್ಟುವ ಕೆಲಸ ಮಾಡಿದ್ದಾರೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್. ಈಗ ಪಾರ್ಟ್2 ಸಿನಿಮಾಗಳ ಜಮಾನ. ಸ್ಟಾರ್ ಸಿನಿಮಾಗಳು ಎರಡೆರಡು ಪಾರ್ಟ್ಗಳಲ್ಲಿ ಬರುತ್ತಿವೆ. ಕಾಟೇರ ಸಿನಿಮಾ ಕೂಡ ಗೆದ್ದಿದೆ. ಈ ಸಿನಿಮಾ ಮತ್ತೊಂದು ಪಾರ್ಟ್ ಬರಲಿ ಅನ್ನೋ ಆಸೆ ದರ್ಶನ್ ಹಿಂಬಾಲಕರಲ್ಲಿತ್ತು. ಆದ್ರೆ ಆ ಆಸೆಗೆ ಈಗ ತಣ್ಣೀರು ಬಿದ್ದಿದೆ. ಕಾಟೇರ ಗೆದ್ದಿದೆ. ಹಾಗಂತ ನಾನು ಗೆದ್ದೆತ್ತಿನ ಬಾಲ ಹಿಡಿಯಲ್ಲ. ಕಾಟೇರ ಪಾರ್ಟ್2 ಸಿನಿಮಾ ಮಾಡಲ್ಲ ಎಂದಿದ್ದಾರೆ. ನಟ ದರ್ಶನ್ ಸಧ್ಯ ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಡೆವಿಲ್ ಎಂದು ಹೆಸರಿಟ್ಟಿದ್ದು, ಇದೇ ವರ್ಷ ಅಕ್ಟೋಬರ್ ಅಥವ ನವೆಂಬರ್ನಲ್ಲಿ ಡೆವಿಲ್ ತೆರೆಗೆ ಬರಲಿದೆ. ಈಗ ಕಾಟೇರ ಸಿನಿಮಾ ಬಿಗ್ ಹಿಟ್ ಸಂಭ್ರಮ ಮಾಡಿರೋ ಕಾಟೇರ ಚಿತ್ರತಂಡ ಈ ಚಿತ್ರಕ್ಕೆ ಶ್ರಮಿಸಿದ ಟ್ಯಾಲೆಂಟ್ಗಳನ್ನ ಗುರುತಿಸಿ ಕಾರು ಉಡುಗೊರೆ ನೀಡಿದ್ದಾರೆ. ಈ ಮೂಲಕ ಬಾಲಿವುಡ್ ಟಾಲಿವುಡ್, ಕಾಲಿವುಡ್ನಲ್ಲಿದ್ದ ಸಂಪ್ರದಾಯವನ್ನ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕನ್ನಡಕ್ಕೂ ಪರಿಚಯಿಸಿದ್ದು ಬರಹಗಾರರನ್ನ ಗುರುತಿಸೋ ಕೆಲಸ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  Basavaraj Bommai: ಲೋಕಸಭೆಗೆ ಸ್ಪರ್ಧಿಸಿದ್ದೇಕೆ ಮಾಜಿ ಸಿಎಂ..? ಬಿಜೆಪಿ-ಜೆಡಿಎಸ್ ಮೈತ್ರಿ ರಹಸ್ಯ ಬಿಚ್ಚಿಟ್ಟ ಬೊಮ್ಮಾಯಿ..!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more