ಬೇರೆ ಬೇರೆ ಸೀರಿಯಲ್ಲಲ್ಲಿದ್ದರೂ ದರ್ಶಕ್ -ಶಿಲ್ಪಾ ಮೀಟ್ ಆಗಿದ್ದು ಪ್ರಶಸ್ತಿ ಸಮಾರಂಭದಲ್ಲಿ! ಈಗ ಪೋಷಕರಾಗೋ ಸಂಭ್ರಮದಲ್ಲಿ

Published : May 04, 2024, 03:35 PM IST

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಾದ ದರ್ಶಕ್ ಗೌಡ ಮತ್ತು ಶಿಲ್ಪಾ ರವಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇತ್ತೀಚೆಗೆ ಸೀಮಂತ ಕಾರ್ಯಕ್ರಮ ಸಂಭ್ರಮದಿಂದ ನಡೆದಿದೆ.   

PREV
17
ಬೇರೆ ಬೇರೆ ಸೀರಿಯಲ್ಲಲ್ಲಿದ್ದರೂ ದರ್ಶಕ್ -ಶಿಲ್ಪಾ ಮೀಟ್ ಆಗಿದ್ದು ಪ್ರಶಸ್ತಿ ಸಮಾರಂಭದಲ್ಲಿ! ಈಗ ಪೋಷಕರಾಗೋ ಸಂಭ್ರಮದಲ್ಲಿ

ಕನ್ನಡ ಕಿರುತೆರೆಯ ಸೆಲೆಬ್ರಿಟಿ ಕಪಲ್ ಗಳಾದ ನಟ ದರ್ಶಕ್ ಗೌಡ (Darshak Gowda) ಮತ್ತು ನಟಿ ಶಿಲ್ಪಾ ರವಿ (Shilpa Ravi) ಪೋಷಕರಾಗುವ ಸಂಭ್ರಮದಲ್ಲಿದ್ದಾರೆ. ಸೀಮಂತೋತ್ಸವದ ಫೋಟೋ, ವಿಡೀಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. 
 

27

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ದರ್ಶಕ್ ಗೌಡ ತಮ್ಮ ಸೀಮಂತದಂದು ಪತ್ನಿ ಜೊತೆ ತಮಾಷೆಯಾಗಿ ವಿಡಿಯೋ ಮಾಡಿದ್ದು, ಆ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ. 
 

37

ಸೀಮಂತ ಸಂಭ್ರಮದಂದು ಶಿಲ್ಪಾ ರವಿ ಹಸಿರು ಸೀರೆಯ ಬದಲಾಗಿ ಪಿಂಕ್ ಬಣ್ಣದ ಬಾರ್ಡರ್ ಇರುವ ಆಫ್ ವೈಟ್ ಬಣ್ಣದ ಸೀರೆಗೆ ಮತ್ತು ಪಿಂಕ್ ಬಣ್ಣದ ಬ್ಲೌಸ್ ಧರಿಸಿದ್ರೆ, ದರ್ಶಕ್ ಪಿಂಕ್ ಬಣ್ಣದ ಶರ್ಟ್ ಮತ್ತು ಪಂಚೆ ಧರಿಸಿದ್ದರು. 
 

47

ಪ್ರೀತಿಸುತ್ತಿದ್ದ ಈ ಜೋಡಿ 2020, ನವೆಂಬರ್ 25ರಂದು ಬೆಂಗಳೂರಿನಲ್ಲಿ ಈ ಮದುವೆ ಆಗಿದ್ದರು. ಇವರಿಬ್ಬರು ಪ್ರೀತಿಸಿ, ಮದುವೆ ಆಗಿದ್ದಾರೆ. ಆತ್ಮೀಯರು, ಕುಟುಂಬಸ್ಥರ ಸಮ್ಮುಖದಲ್ಲಿ ಕೊರೋನಾ ಸಮಯದಲ್ಲಿ  ಹಸೆಮಣೆ ಏರಿತ್ತು ಈ ಜೋಡಿ.
 

57

ದರ್ಶಕ್ ಗೌಡ ಮತ್ತು ಶಿಲ್ಪಾ ಅವರು ಒಂದೇ ವಾಹಿನಿಯ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಪ್ರಶಸ್ತಿ ಸಮಾರಂಭವೊಂದರಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ನಂತರ ಸ್ನೇಹ ಬೆಳೆದಿತ್ತು. ಒಂದು ವರ್ಷದ ಬಳಿಕ ದರ್ಶಕ್ ನೇರವಾಗಿ ಮದುವೆ ಪ್ರಸ್ತಾಪ ಮಾಡಿದ್ದರು. 
 

67

ಶಿಲ್ಪಾ ಬೇಗನೆ ಒಪ್ಪಿಕೊಂಡರು, ನಂತರ ಇಬ್ಬರ ಪೋಷಕರನ್ನು ಒಪ್ಪಿಸಿ, 2020 ರಲ್ಲಿ ಈ ಜೋಡಿ ಸಪ್ತಪದಿ ತುಳಿದಿತ್ತು. ಈ ಮುದ್ದಾದ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಜೊತೆಯಾಗಿರೋ ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಆ ಮೂಲಕ ಜನರ ನೆಚ್ಚಿನ ಆಫ್ ಸ್ಕ್ರೀನ್ ಕಪಲ್ ಆಗಿಯೂ ಫೇಮಸ್ ಆಗಿದ್ದರು. 
 

77

ದರ್ಶಕ್ ಗೌಡ 'ಕಾವ್ಯಾಂಜಲಿ', ‘ಬೆಟ್ಟದ ಹೂ’ ಅಲ್ಲದೇ ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಶಿಲ್ಪಾ ರವಿ ಅವರು 'ಜೀವ ಹೂವಾಗಿದೆ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
 

click me!

Recommended Stories