ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ; ಸಹೋದರ ಪ್ರಜ್ವಲ್‌ರನ್ನು ದೂರವಿಟ್ಟ ನಿಖಿಲ್ ಕುಮಾರಸ್ವಾಮಿ

By Sathish Kumar KH  |  First Published May 4, 2024, 3:35 PM IST

ನಾನು ಹೆಚ್ಚಿಗೆ ಹಾಸನಕ್ಕೆ ಕಾಲೇ ಇಟ್ಟಿಲ್ಲ. ಹೋದರೆ ಹಾಸನಾಂಬೆ ಉತ್ಸವಕ್ಕೆ ಮಾತ್ರ ಹೋಗ್ತೇನೆ. ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ. ನನಗೂ ಅವರಿಗೂ (ಪ್ರಜ್ವಲ್ ರೇವಣ್ಣ) ಸಂಪರ್ಕವಿಲ್ಲ ಎಂದು ನಿಖುಲ್ ಕುಮಾರಸ್ವಾಮಿ ಹೇಳಿದರು.


ಬೆಂಗಳೂರು (ಮೇ 04): ದೇಶಾದ್ಯಂತ ದೊಡ್ಡ ಸುದ್ದಿಯಾಗುತ್ತಿರುವ ಕರ್ನಾಟಕದ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶಲೀಲ ವಿಡಿಯೋಗಳನ್ನು ನೋಡಿಲ್ಲ. ದೇಶದ ಪ್ರಧಾನಿ ಅವರನ್ನು ಈ ವಿಚಾರಕ್ಕೆ ಕರೆತರೋದು ಒಳ್ಳೆಯದಲ್ಲ. ಜೊತೆಗೆ, ನಾನು ಕೂಡ ಹಾಸನಕ್ಕೆ ಹೋಗುತ್ತಿರಲಿಲ್ಲ. ಹಾಸನ ಸಂಸದರಿಗೂ ನನಗೂ ಸಂಪರ್ಕವಿಲ್ಲ, ಅವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ ಎಂದು ಸಹೋದರ ಪ್ರಜ್ವಲ್ ರೇವಣ್ಣ ಹೆಸರೇಳದೇ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿ ಅವರನ್ನ ಈ ವಿಚಾರಕ್ಕೆ ಕರೆತರೋದು ಒಳ್ಳೆದಲ್ಲ. ಅದು ಸೂಕ್ತನೂ ಅಲ್ಲ. ಅಲ್ಲದೇ ಹಾಸನ ವಿಚಾರ ಆಗಲಿ. ನನಗೆ ಅದಕ್ಕೂ ಸಂಬಂಧ ಇಲ್ಲ. ನಾನು ಹೆಚ್ಚಿಗೆ ಹಾಸನಕ್ಕೆ ಕಾಲೇ ಇಟ್ಟಿಲ್ಲ. ಹೋದರೆ ಹಾಸನಾಂಬೆ ಉತ್ಸವಕ್ಕೆ ಮಾತ್ರ ಹೋಗ್ತೇನೆ. ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ. ನನಗೂ ಅವರಿಗೂ ಸಂಪರ್ಕವಿಲ್ಲ. ಜೊತೆಗೆ ನಾನು ಅವರಿಗೆ ಯಾವುದೇ ಬುದ್ಧಿ ಅಥವಾ ಸಲಹೆಗಳನ್ನು ನೀಡುವಷ್ಟು ದೊಡ್ಡವರು ನಾನಲ್ಲ ಎಂದು ಹೇಳಿದರು.

Tap to resize

Latest Videos

ಲೈಂಗಿಕ ದೌರ್ಜನ್ಯ ಪ್ರಕರಣ, ಇಬ್ಬರು ಸಂತ್ರಸ್ಥೆಯರ ಜೊತೆ ರೇವಣ್ಣ ನಿವಾಸ ಪರಿಶೀಲನೆಗೆ ಬಂದ ಎಸ್‌ಐಟಿ ತಂಡ

ನನಗೆ ನಾಲ್ಕು ದಿನಗಳಿಂದ  ವೈರಲ್ ಫಿವರ್ ಆಗಿತ್ತು. ಹಾಗಾಗಿ, ಅಜ್ಜಿ-ತಾತಗೆ ಹುಷಾರಿಲ್ಲವೆಂದು ಪೋನ್ ಅಲ್ಲಿ ಮಾತನಾಡಿದ್ದೆ. ಈಗ ಬಂದು ಅವರ ಆರೋಗ್ಯ ವಿಚಾರಿಸಿದ್ದೇನೆ. ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗೆ ಕರ್ನಾಟಕ ಸರ್ಕಾರ ಈಗಾಗಲೇ ಎಸ್ ಐಟಿ ರಚನೆ ಮಾಡಿದೆ. ತನಿಖೆ ನಡೀತಾ ಇದೆ ಕಾನೂನಿಗಿಂತ ಯಾರು ದೊಡ್ಡವರಲ್ಲ. ಅದು ಒಂದು ಪ್ರಕ್ರಿಯೆ ಅದರ ಬಗ್ಗೆ ನಾನು ಮಾತನಾಡೋಕ್ಕೆ ಹೋಗಲ್ಲ. ಈ ಒಂದು ಪ್ರಕರಣ ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಡ್ತಾ ಇದೆ. ವಿಶೇಷವಾಗಿ ದೇವೇಗೌಡ ಅವರ ಜೀವನ ತೆರೆದ ಪುಸ್ತಕವಾಗಿದ್ದು, ಅಜ್ಜಿ ಚೆನ್ನಮ್ಮ ಜೊತೆಗೆ ನಮ್ಮ ತಾತ ಯಾವ ರೀತಿ ಬದುಕಿದ್ರು ಎನ್ನುವುದು ನಮಗೆ ಸ್ಫೂರ್ತಿಯಾಗಿದೆ. ದೇವೇಗೌಡರಿಗೆ 92 ವರ್ಷ ಆಗಿದ್ದು, ಈ ಘಟನೆಯಿಂದ ಸಹಜವಾಗಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಒಬ್ಬರೇ ವಿಶ್ರಾಂತಿ ತೆಗೆದುಕೊಳ್ತಾ ಇದ್ದಾರೆ. ನಮ್ಮ ಅಜ್ಜಿ ಸಹ ಬಹಳ ನೋವಿನಲ್ಲಿದ್ದಾರೆ ಎಂದು ಹೇಳಿದರು.

ದೇಶಾದ್ಯಂತ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿವೆ ಎನ್ನುತ್ತಿದ್ದರೂ ಆ ವಿಶ್ಯುವಲ್ ಏನಿದೆ ಅದನ್ನ ನಾನು ನೋಡಕ್ಕೆ ಹೋಗಿಲ್ಲ. ನನ್ನ ಆಪ್ತ ವರ್ಗದವರು ಹೇಳಿದ ಪ್ರಕಾರ ಕನಿಷ್ಠ ಆ ವೀಡಿಯೋ ಕೂಡ ಬ್ಲರ್ ಮಾಡಿಲ್ಲವಂತೆ. ಆದ್ರೆ ಪಾಪ ಆ ಹೆಣ್ಣು ಮಕ್ಕಳನ್ನ ಓಪನ್ ಆಗಿ ತೋರಿಸ್ತಾರೆ. ಇದು ನಿಜಕ್ಕೂ ಕೂಡ ಬೇಜಾರ್ ಆಗುತ್ತದೆ. ಇದರ ಬಗ್ಗೆಯೂ ಸಹ ತನಿಖೆ ಆಗಬೇಕು. ಈ ವಿಷಯಕ್ಕೆ  ಸಂಬಂಧಿಸಿದಂತೆ ದೇವೇಗೌಡರನ್ನ ಹಾಗೂ ಕುಮಾರಸ್ವಾಮಿ ಅವರನ್ನ ತರೋದು ಸರಿಯಲ್ಲ. ಯಾರೂ ಆರೋಪಿ ಇದ್ದಾರೆ ಅವರಿಗೆ ಖಂಡಿತಾ ಶಿಕ್ಷೆ ಆಗಬೇಕು ಎಂದು ಹೇಳಿದರು.

ಹಿಂದೂ ಹುಡುಗಿಯರೇ ನಿಮಗೆ ಪ್ರಜ್ಞೆ ಇಲ್ಲವಾ? ಪ್ರಮೋದ್ ಮುತಾಲಿಕ್ ಕೆಂಡಾಮಂಡಲ

ಹಾಸನದ ಟಿಕೆಟ್ ಕೊಡೋ ವಿಚಾರದಲ್ಲಿ ಬಿಜೆಪಿ ಹೇಳಿಕೆಯ ಬಗ್ಗೆ ಪಕ್ಷದ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷರು ಅಂತಿಮ ನಿರ್ಧಾರ ಮಾಡಿದ್ದಾರೆ. ಅವರ ನಿರ್ಧಾರಕ್ಕೆ ತಲೆಬಾಗಿ ಕೆಲಸ ಮಾಡಿದ್ದೇವೆ. ಪ್ರಕರಣದಿಂದ ಪಕ್ಷದ ಕಾರ್ಯಕರ್ತರರಿಗೆ ಧೈರ್ಯ ಹೇಳುವುದಕ್ಕೆ ಹಾಸನಕ್ಕೆ ಹೋಗೊದು ಇದೆ. ಪಕ್ಷದ ನಾಯಕರು ಕಾರ್ಯಕರ್ತರ ಬಳಿ ಕುಮಾರಣ್ಣ ಹೋಗ್ತಾರೆ. ಇನ್ನು ಶಿವರಾಮೇಗೌಡರು ಬಹಳ ದೊಡ್ಡವರಿದ್ದಾರೆ. ಪಾಪ ಏನೇನೋ ಮಾತನಾಡುತ್ತಾರೆ. ಆದರೆ, ಪ್ರಕರಣದ ಕುರಿತ ತನಿಖೆಗೆ ಎಸ್ಐಟಿ ರಚನೆ ಆಗಿದ್ದು, ಸ್ವತಂತ್ರವಾಗಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

click me!