ಡೈರೆಕ್ಟರ್​ಕ್ಕಿಂತ ಮೊದ್ಲೇ ನಾವು ಇದನ್ನೇ ಹೇಳಿದ್ದು ಬಿಡಿ ಅಂತಿರೋದ್ಯಾಕೆ ಫ್ಯಾನ್ಸ್​?

By Suvarna News  |  First Published May 4, 2024, 3:37 PM IST

ಶಾರ್ವರಿ ಇನ್ನೇನು ಸತ್ಯ ಹೇಳುವ ಹೊತ್ತಿಗೆ ನೆಟ್ಟಿಗರು ಏನು ಅಂದುಕೊಂಡಿದ್ರೋ ಅದೇ ಆಗಿದೆ. ಇದನ್ನು ನೋಡಿ ನೆಟ್ಟಿಗರು ಹೇಳ್ತಿರೋದೇನು?
 


ಶಾರ್ವರಿ ತನ್ನೆಲ್ಲಾ ತಪ್ಪನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಶ್ರೀರಸ್ತು ಶುಭಮಸ್ತು ಸೀರಿಯಲ್​ ನಿನ್ನೆ ತೋರಿಸಲಾಗಿತ್ತು. ಇನ್ನೇನು ಎಲ್ಲರ ಎದುರು ಕೊಲೆ ಮಾಡಿಸಿದ್ದು ತಾನೇ ಎಂದು ಹೇಳಿಬಿಟ್ಟರೆ ಅಲ್ಲಿಗೆ ಸೀರಿಯಲ್​ನಲ್ಲಿ ಇನ್ನೇನಿದೆ? ಮುಗಿದೇ ಹೋಗಿಬಿಡುತ್ತೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಯಾವುದೇ ಕಾರಣಕ್ಕೂ ಶಾರ್ವರಿ ಇಷ್ಟು ಬೇಗ ಈ ಸತ್ಯವನ್ನು ಹೇಳಲು ಸಾಧ್ಯವೇ ಇಲ್ಲ, ತಾನು ಕೊಲೆ ಮಾಡಿಸಿರುವುದನ್ನು ಹೇಳುವ ಹೊತ್ತಿಗೇ ಏನೋ ಒಂದು ಆಗುತ್ತದೆ ಎಂದು ನೆಟ್ಟಿಗರು ಸಾಕಷ್ಟು ಕಮೆಂಟ್​ ಮೂಲಕ ತಿಳಿಸಿದ್ದರು. ಕೊನೆಗೂ ಅದೇ ಆಗಿದೆ. ಶಾರ್ವರಿ ಸತ್ಯವನ್ನು ಹೇಳಲು ಹೊರಡುತ್ತಿದ್ದಂತೆಯೇ ತುಳಸಿಗೆ ಹೃದಯಾಘಾತವಾಗಿದೆ!

ಹೌದು.   ತುಳಸಿ ಪೂಜೆ ಮುಗಿಸುತ್ತಿದ್ದಂತೆಯೇ ಸಂಪೂರ್ಣ ಸತ್ಯವನ್ನು ಒಪ್ಪಿಕೊಳ್ಳುವಂತೆ ಮಹೇಶ್‌ ಪತ್ನಿಗೆ ಹೇಳಿದ್ದ. ಅದರ ಪ್ರಕಾರ ಪೂಜೆ ಮುಗಿಯುತ್ತಿದ್ದಂತೆಯೇ ಶಾರ್ವರಿ ನಾನು ಸತ್ಯವನ್ನು ಹೇಳಬೇಕಿತ್ತು. ಎಲ್ಲರ ಎದುರು ಸತ್ಯ ಹೇಳುತ್ತಿದ್ದೇನೆ ಎಂದು ಹೇಳಿದ್ದಳು. ತಾನು ಆ್ಯಕ್ಸಿಡೆಂಟ್​ ಮಾಡಿಸಿದ್ದು,  ಮಾಧವ್​ ಪತ್ನಿ ಸುಮತಿಗೆ ಮನೆಯಲ್ಲಿ ಎಲ್ಲರೂ ರಿಸ್​ಪೆಕ್ಟ್​ ಕೊಡುತ್ತಾರೆ ಎನ್ನುವ ಕಾರಣಕ್ಕೆ ಎನ್ನುವ ಸತ್ಯವದು. ಸುಮತಿ ಮುಂದೆಯೇ ತಲೆಬಾಗಿ ಎಲ್ಲರೂ ಮರ್ಯಾದೆ ಕೊಡುತ್ತಾರೆ, ನಾನೂ ಆ ಮನೆಯ ಸೊಸೆ. ಆದರೆ ನನಗೆ ಯಾರೂ ಮರ್ಯಾದೆ ಕೊಡುತ್ತಿರಲಿಲ್ಲ. ಅದಕ್ಕಾಗಿ ಕೊಲೆ ಮಾಡಿಸಿದೆ ಎಂಬ ಸತ್ಯ ಹೇಳುವಂತೆ ಮಹೇಶ್​ ಹೇಳಿದ್ದ. ಅದನ್ನು ಅವಳು ಒಪ್ಪಿಕೊಂಡಂತೆ ನಾಟಕವಾಡಿದ್ದಳು. 

Tap to resize

Latest Videos

ಬಾಲಿವುಡ್​ ನಟ ಗೋವಿಂದ ಸೊಸೆ ರಾಗಿಣಿ ಮತಾಂತರ? ಎಡವಟ್ಟಿನ ಕುರಿತು ಮೌನ ಮುರಿದ ನಟಿ...

ಇಡೀ ಸೀರಿಯಲ್​ ನಿಂತಿರುವುದೇ ಈ ಗುಟ್ಟಿನ ಬಗ್ಗೆ!  ಶಾರ್ವರಿ ನಿಜಕ್ಕೂ ಸತ್ಯ ನುಡಿದರೆ ಸೀರಿಯಲ್‌ ಮುಗಿದಂತೆಯೇ, ಅದು ಖಂಡಿತ ಸಾಧ್ಯವಿಲ್ಲ. ಅವಳು ಬೇರೆ ಏನನ್ನೋ ಹೇಳುತ್ತಾಳೆ, ಅಥವಾ ಅವರು ಹೇಳುವ ಮಧ್ಯಯಲ್ಲಿ ಇನ್ನೇನೋ ನಡೆದು ಅವಳು ಈ ವಿಷಯವನ್ನು ಹೇಳಲು ಆಗುವುದಿಲ್ಲ ಎಂದು ಫ್ಯಾನ್ಸ್‌ ಕಮೆಂಟ್​ ಮೂಲಕ ತಿಳಿಸಿದ್ದರು. ಈಗ ಆಗಿದ್ದೂ ಅದೇ.  ಇನ್ನೇನು ಹೇಳಬೇಕು ಎನ್ನುವಷ್ಟರಲ್ಲಿ, ತುಳಸಿಗೆ ಹಾರ್ಟ್​ ಎಟ್ಯಾಕ್​ ಆಗಿದೆ. ಇದರಲ್ಲಿ ಇವಳದ್ದೇ ಕೈವಾಡಗೂ ಇದ್ದರಿಲಿಕ್ಕೆ ಸಾಕು. ನಂತರ ಎಲ್ಲರೂ ಗಾಬರಿಯಿಂದ ತುಳಸಿಯ ಆರೈಕೆ ಮಾಡಿದರು. ಅದರಲ್ಲಿಯೂ ಮಹೇಶ್​ಗೆ ಸಿಕ್ಕಾಪಟ್ಟೆ ಗಾಬರಿಯಾಗಿದ್ದ. ಖುದ್ದು ಶಾರ್ವರಿಯೇ ತುಳಸಿಗೆ ತುಳಸಿ ನೀರು ಕುಡಿಸಿದಳು. ನಂತರ ಅವಳು ಹುಷಾರ್​ ಆದಳು.

ಬಳಿಕ ಶಾರ್ವರಿ ಗಂಡನ ಬಳಿ ಬಂದು, ಅತ್ತಿಗೆ ಒಂದು ಐದು ನಿಮಿಷ ಸಮಸ್ಯೆಯಿಂದ ಬಳಲಿದ್ದಕ್ಕೆ ಉಸಿರಾಟದ ತೊಂದರೆ ಆಗಿದ್ದಕ್ಕೆ ಹೀಗೆಲ್ಲಾ ಆಡಿದ್ರಿ, ಒಂದು ವೇಳೆ ಉಸಿರೇ ನಿಂತು ಹೋದ್ರೆ ಶಾಶ್ವತವಾಗಿ ಎಂದು ಕೇಳುತ್ತಾಳೆ. ಅಷ್ಟಕ್ಕೂ ಒಂದಷ್ಟು ಕೊಲೆ ಮಾಡಿಸಿದವಳಿಗೆ ಇನ್ನೊಂದು ಕೊಲೆ ಮಾಡಿಸುವುದು ಕಷ್ಟವಲ್ಲ. ಇದನ್ನು ಕೇಳಿ ಮಹೇಶ್​ ಶಾಕ್​ ಆಗಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನೆಟ್ಟಿಗರು, ನಾವು ಮೊದ್ಲೇ ಹೇಳಿದ್ವಿ ಬಿಡಿ, ನಿರ್ದೇಶಕರು ಏನು ಹೇಳೋದು ಅಂತೆಲ್ಲಾ ಹೇಳುತ್ತಿದ್ದಾರೆ. 

ಕಂಟ್ರೋಲ್​+ ಆಲ್ಟ್​+ ಡಿಲೀಟ್​ ಸೂತ್ರ ಒಪ್ಪಿಕೊಂಡ್ರೆ ನೂರು ಶಕುಂತಲಾ ಬಂದ್ರೂ ಸಂಸಾರ ಬಲು ಸುಂದರ!

click me!