Sudeep: ಕಿಚ್ಚನ ಕೋಟೆಗೆ 'ಜೈಲರ್' ಮಾಸ್ಟರ್ ಎಂಟ್ರಿ..!ಆಕ್ಷನ್ ಮೂಡ್‌ನಲ್ಲಿ ಬಾದ್ ಷಾ ಸುದೀಪ್..!

Sudeep: ಕಿಚ್ಚನ ಕೋಟೆಗೆ 'ಜೈಲರ್' ಮಾಸ್ಟರ್ ಎಂಟ್ರಿ..!ಆಕ್ಷನ್ ಮೂಡ್‌ನಲ್ಲಿ ಬಾದ್ ಷಾ ಸುದೀಪ್..!

Published : May 04, 2024, 10:52 AM ISTUpdated : May 04, 2024, 10:53 AM IST

ಬಾದ್ ಷಾ ಕಿಚ್ಚ ಸುದೀಪ್ ಮ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಮೊನ್ನೆ ಚುನಾವಣೆಗೆ ಅಂತ ಬೆಂಗಳೂರಿಗೆ ಬಂದಿದ್ದ ಕಿಚ್ಚ ಓಟ್ ಮುಗಿಸಿಕೊಂಡು ಸೀದಾ ಚನ್ನೈ ಪ್ಲೈಟ್ ಏರಿದ್ರು. ಅದಕ್ಕೆ ಕಾರಣ ಸುದೀಪ್ ಕಟ್ಟುತ್ತಿರೋ ಮ್ಯಾಕ್ಸ್ ಕೋಟೆಗೆ ಜೈಲರ್ ಸಿನಿಮಾದ ಮಾಸ್ಟರ್ ಬಂದಿರೋದು.

ಜೈಲರ್ ಸಿನಿಮಾದಲ್ಲಿ ಸ್ಟಂಟ್ ಡೈರೆಕ್ಷನ್ ಮಾಡಿದ್ದ ಫೈಟ್ ಮಾಸ್ಟರ್ ಕೆವಿನ್( Fight master Kevin) ಈಗ ಕಿಚ್ಚ ಸುದೀಪ್‌ರ(Sudeep) ಮ್ಯಾಕ್ಸ್ ಸಿನಿಮಾದ(Max Movie) ಕ್ಲೈಮ್ಯಾಕ್ಸ್‌ಗೆ ಫೈಟ್ ಕಂಪೋಸ್ ಮಾಡುತ್ತಿದ್ದಾರೆ. ಹೀಗಾಗಿ ಸುದೀಪ್ ಫುಲ್ ಆಕ್ಷನ್ ಮೂಡ್‌ನಲ್ಲಿದ್ದಾರೆ. ಸೂಪರ್ ಸ್ಟಾರ್ ರಜಿನಿಕಾಂತ್‌ರ ಜೈಲರ್ ಸಿನಿಮಾದಲ್ಲಿ(Jailer Movie) ಆಕ್ಷನ್ ಧಮಾಕ ಹೇಗಿತ್ತು ಅಂತ ಜೈಲರ್ ನೋಡಿದವರಿಗೆ ಗೊತ್ತು. ನಟ ರಜನಿಕಾಂತ್‌ರಿಂದ ಫುಲ್ ಮಿಲ್ಸ್ ತರದ ಆಕ್ಷನ್ ಮಾಡಿಸಿದ್ರು ಇದೇ ಸ್ಟಂಟ್ ಮಾಸ್ಟರ್ ಕೆವಿನ್. ಇವರ ಆಕ್ಷನ್ ಸ್ಟೈಲ್ಅನ್ನ ರಜನಿ ಅಭಿಮಾನಿಗಳು ಕೊಂಡಾಡಿದ್ರು. ಕೆವಿನ್ ಸಧ್ಯ ಕಾಲಿವುಡ್ನ ಟ್ರೆಂಡಿ ಆಕ್ಷನ್ ಮಾಸ್ಟರ್ ಆಗಿದ್ದಾರೆ. ಕೆವಿನ್ಗೆ ಭೇಡಿಕೆ ದುಪ್ಪಟಾಗಿದ್ದು, ಈಗ ಕಿಚ್ಚನ ಮ್ಯಾಕ್ಸ್ ಸೆಟ್ಗೂ ಬಂದಿದ್ದಾರೆ. ಜೈಲರ್ ಸಿನಿಮಾದಲ್ಲಿ ನೋಡಿದ್ದ ಆಕ್ಷನ್ಗಿಂತಾ ಭರ್ಜರಿಯಾಗಿ ಮ್ಯಾಕ್ಸ್ ಸಿನಿಮಾದಲ್ಲಿ ಆ್ಯಕ್ಷನ್ ಕಂಪೋಸ್ ಮಾಡಿದ್ದಾರಂತೆ. ಮ್ಯಾಕ್ಸ್ ಆಕ್ಷನ್ ಸಿನಿಮಾ. ಹೊಸ ಟ್ಯಾಲೆಂಟ್‌ನನ್ನ ಹಂಟ್ ಮಾಡಿ ಫ್ರೆಶ್ ಟ್ರೀಟ್ ಕೊಡಬೇಕು ಅನ್ನೋದು ಸುದೀಪ್ ನಿರ್ಧಾರ. ಹೀಗಾಗಿ ರಜನಿಕಾಂತ್‌ರ ಜೈಲರ್ ಸಿನಿಮಾದಿಂದ ಸ್ಟಂಟ್ ಮಾಸ್ಟರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಕೆವಿನ್ ಗೆ ಕಿಚ್ಚ ಗಾಳ ಹಾಕಿ ತನ್ನ ಸಿನಿಮಾಗೆ ಕರೆ ತಂದಿದ್ದಾರೆ. ನಾಲ್ಕೈದು ದಿನಗಳ ಕಾಲ ಆ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆದಿದೆ. ಕನ್ನಡ ಸಿನಿಮಾಗಳಲ್ಲಿ ಇತ್ತೀಚೆಗೆ ಚೇತನ್ ಡಿಸೋಜಾ ಸ್ಟಂಟ್ಸ್ ಹೈಲೆಟ್ ಆಗುತ್ತಿದೆ. 'ಮ್ಯಾಕ್ಸ್' ಚಿತ್ರದಲ್ಲಿ ಕೆವಿನ್ ಒಂದು ಫೈಟ್ ಮಾತ್ರ ಕಂಪೋಸ್ ಮಾಡಿದ್ದಾರೆ. ಇನ್ನುಳಿದ ಆಕ್ಷನ್ ಸೀಕ್ವೆನ್ಸ್ ಚೇತನ್ ಡಿಸೋಜಾ ಮಾರ್ಗದರ್ಶನದಲ್ಲಿ ಮೂಡಿ ಬಂದಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾದ ಶೂಟಿಂಗ್ ಇನ್ನೈದು ದಿನದಲ್ಲಿ ಕೊನೆಗಳ್ಳಲಿದೆ.

ಇದನ್ನೂ ವೀಕ್ಷಿಸಿ:  'ಕಾಟೇರ'ಕ್ಕೆ ದುಡಿದ ಕಲಿಗಳಿಗೆ ಬಿಗ್‌ಸರ್ಪ್ರೈಸ್..! ಮೂವರಿಗೆ ಉಡುಗೊರೆಯಾಗಿ ಸಿಕ್ತು ಸೂಪರ್ ಕಾರು!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more