ನಟಿ ಶೃತಿ ಪ್ರಕಾಶ್ ಇಷ್ಟೊಂದು ಹಾಟ್ ಅಂತಾ ಗೊತ್ತೇ ಇರಲಿಲ್ಲ! ಕಣ್ಣು ಕುಕ್ಕುವ ಸುಂದರಿ ಬಿರುದು ಕೊಟ್ಟ ಫ್ಯಾನ್ಸ್!

ನಟಿ ಶೃತಿ ಪ್ರಕಾಶ್ ಗೋವಾದಲ್ಲಿ ಸ್ನೇಹಿತರೊಂದಿಗೆ ಹೋಳಿ ಆಚರಿಸುತ್ತಿರುವ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೋಳಿ ಹಬ್ಬವನ್ನು ಆಚರಿಸುತ್ತಿರುವ ಶೃತಿ ಅವರ ಮಾದಕ ಉಡುಗೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Actress Shruti Prakash Holi festival photos viral Fans have dubbed stunning beauty sat

ಕರ್ನಾಟಕದಲ್ಲಿ ಬಹುಮುಖ ಪ್ರತಿಭೆಯನ್ನು ಹೊಂದಿನ ನಟಿಯಲ್ಲಿ ಒಬ್ಬರಾದ ಶೃತಿ ಪ್ರಕಾಶ್ ಅವರು ಇಷ್ಟೊಂದು ಮಾದಕ ಬೆಡಗಿ ಎಂಬುದು ಯಾರ ಊಹೆಗೂ ಸಿಕ್ಕಿರಲಿಲ್ಲ. ಗಾಯಕಿ ಕಂ ನಟಿ ಶೃತಿ ಅವರು ಇದೀಗ ಗೋವಾದಲ್ಲಿ ಸ್ನೇಹಿತರೊಂದಿಗೆ ಹೋಳಿ ಆಚರಣೆ ಮಾಡುವಾಗ ಮಾದಕ ಉಡುಗೆಗಳನ್ನು ಧರಿಸಿ ಫೋಟೋಗಳನ್ನು ಹಂಚಿಕೊಂಡಿದ್ದು, ನೀವೇ ನಮ್ಮ ಕಣ್ಣು ಕುಕ್ಕುವ ಸುಂದರಿ ಎಂದು ಅಭಿಮಾನಿಗಳು ಹೇಳಿದ್ದಾರೆ.

Actress Shruti Prakash Holi festival photos viral Fans have dubbed stunning beauty sat

ಗೋವಾದ ಪಾಮೋರಮಾದಲ್ಲಿ ಶ್ರುತಿ ಪ್ರಕಾಶ್ ಸ್ನೇಹಿತರೊಂದಿಗೆ ಹೋಳಿ ಆಚರಣೆಯನ್ನು ಮಾಡಿದ್ದಾರೆ. ಮತುಂಬಾ ಬಣ್ಣ, ಮುಖದಲ್ಲಿ ನಗು, ಹಬ್ಬದ ಸಂತಸದಲ್ಲಿ ಮಿಂದೆದ್ದ ಶೃತಿ ಪ್ರಕಾಶ್ ಅವರು ಹಾಡನ್ನು ಹಾಡುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋವನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.


ಹೋಳಿ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದ ಶೃತಿ ತಮ್ಮ ಸಂತೋಷ ಮತ್ತು ಉತ್ಸಾಹವನ್ನು ಪ್ರದರ್ಶಿಸಿದ್ದಾರೆ. ಆದರೆ, ಇದರಲ್ಲಿ ವರ್ಣರಂಜಿತ ತುಂಡುಡುಗೆಗಳನ್ನು ಧರಿಸಿದ್ದ ಶೃತಿ ಅವರನ್ನು ನೋಡಲು ಪಡ್ಡೆಗಳಿಗೆ ತುಸು ಹೆಚ್ಚೇ ಸಂತೋಷ ಆಗಿರುತ್ತದೆ. ಸಿನಿಮಾದಲ್ಲಿಯೂ ಇಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳದ ಶೃತಿ ನೈಸರ್ಗಿಕ ಸುಂದರಿ ಎಂದು ಅಭಿಮಾನಿಗಳು ಹೇಳಿದ್ದಾರೆ.

ನಟಿ ಶೃತಿ ಪ್ರಕಾಶ್ ಅವರು ಬೆಳಗಾವಿ ಜಿಲ್ಲೆಯವರಾಗಿದ್ದು, ಕಡಲ ತೀರದ ಭಾರ್ಗವ, ಆಡು ಆಟ ಆಡು, ಕಸ್ತೂರಿ ಮಹಲ್, ಶ್ರೀ ಭರತ ಬಾಹುಬಲಿ, ಲಂಡನ್‌ನಲ್ಲಿ ಬಾಹುಬಲಿ,  ಗ್ರೇ ಗೇಮ್ಸ್ (2024) ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ತನ್ನ ಸಿನಿಮಾಗೆ ತಾನೇ ಗಾಯಕಿಯಾದ ನಟಿ ಎಂದರೆ ಅದು ಶೃತಿ ಒಬ್ಬರೇ ಎಂದು ಹೇಳಬಹುದು.

ಕನ್ನಡದ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಶೃತಿ ಪ್ರಕಾಶ್‌ಗೆ ಕನ್ನಡದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಇನ್ನು 2017ರಲ್ಲಿ ಹಿಂದಿಯ ಸ್ಟಾರ್‌ಪ್ಲಸ್‌ನ 'ಸಾಥ್ ನಿಭಾನಾ ಸಾಥಿಯಾ' ಟೆಲಿ ಸೀರಿಯಲ್‌ನಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದರು. ಶೃತಿ ಬಾಲಿವುಡ್ ಸಿನಿಮಾದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಹೋಳಿ ಹಬ್ಬದ ಆಚರಣೆಗಾಗಿ ಶಾನ್ವಿ, ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ಹಾಗೂ ಇತರರೊಂದಿಗೆ ಗೋವಾಗೆ ತೆರಳಿದ್ದಾರೆ. ಅಲ್ಲಿ ಬೀಚ್‌ ಒಂದರ ಪಕ್ಕದಲ್ಲಿರುವ ಪಾಮೋರಮಾದಲ್ಲಿ ಮ್ಯೂಸಿಕ್ ಹೋಳಿ ಆಚರಣೆ ಮಾಡಿದ್ದಾರೆ.

Latest Videos

click me!