
ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಯಾರಿಗೂ ಏನೂ ಹೇಳಬೇಕಾಗಿಯೇ ಇಲ್ಲ. ಅಷ್ಟು ದೊಡ್ಡ ಸಾಧನೆ ಅವರದ್ದು. ಅಮೋಘ ನಟನೆಗೆ ಮಾತ್ರವಲ್ಲ, ಅಪ್ರತಿಮ ಗಾಯಕರು ಆಗಿ ಕೂಡ ಅವರು ಹೆಸರುವಾಸಿಯಾದವರು. ಡಾ ರಾಜ್‌ಕುಮಾರ್ ಅವರಿಗೆ ಆ ಕಾರಣಕ್ಕಾಗಿಯೇ ಗಾನ ಗಂಧರ್ವ ಬಿರುದನ್ನು ಕೂಡ ದಯಪಾಲಿಸಲಾಗಿತ್ತು. ಅಂಥ ಡಾ ರಾಜ್‌ಕುಮಾರ್ ಅವರು ನಾಟಕರಂಗದಿಂದ ಅಂದರೆ, ರಂಗಭೂಮಿ ಹಿನ್ನೆಲೆಯಿಂದ ಬಂದ ಕಲಾವಿದರು.
ಅವರ ಅಪ್ಪ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಕೂಡ ನಾಟಕ ಕಲಾವಿದರಾಗಿದ್ದರು. ಆ ಕಾಲದಲ್ಲಿ ಸಿನಿಮಾ ಇರಲಿಲ್ಲ ಬಿಡಿ.. ಕಪ್ಪುಬಿಳುಪು ಚಿತ್ರ ಕೂಡ ಶುರುವಾಗಿದ್ದು ಡಾ ರಾಜ್‌ಕುಮಾರ್ ಕಾಲದಲ್ಲಿ ಅಷ್ಟೇ. ಹೌದು, ವೃತ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ ರಾಜ್‌ಕುಮಾರ್ ಅವರು ಅಂದು ಆಗಷ್ಟೇ ಸಿನಿಮಾ ನಟರಾಗಿ ಗುರುತಿಸಿಕೊಂಡಿದ್ದರು. ಬೇಡರ ಕಣ್ಣಪ್ಪ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಜೊತೆಗೆ, ಬಂಗಾರದ ಮನುಷ್ಯ ಹಾಗೂ ಬಬ್ರುವಾಹನ ಸೇರಿದಂತೆ ಡಾ ರಾಜ್‌ಕುಮಾರ್ ನಟನೆಯ ಹಲವಾರು ಚಿತ್ರಗಳು ಸೂಪರ್ ಹಿಟ್ ಆಗಿದ್ದವು.
ಚಿತ್ರರಂಗಕ್ಕೆ ಬಂದ ಶುರುವಿನಲ್ಲಿ ಅಣ್ಣಾವ್ರು ಅಭಿಮಾನಿಗಳಿಗೆ ಹೇಳಿದ್ದೇನು? ಬಳಿಕ ಹೇಳಿದ್ದೇನು?!..ಎರಡೂ ಇಲ್ಲಿದೆ..
ಆ ಮೂಲಕ ಕನ್ನಡ ಸಿನಿಪ್ರೇಕ್ಷಕರ ಆರಾಧ್ಯದೈವ ಆಗಿಬಿಟ್ಟಿದ್ದರು ಡಾ ರಾಜ್‌ಕುಮಾರ್. ಆಗ ಅವರೊಮ್ಮೆ ಸಾರ್ವಜನಿಕವಾಗಿ ಮಾತನಾಡುತ್ತ ಅದೇನು ಹೇಳಿದ್ದರು ಗೊತ್ತೇ? ಮುಂದೆ ನೋಡಿ.. 'ಸಾಧಿಸಬೇಕಾದದ್ದು, ಸಾಧನೆ ಮಾಡಬೇಕಾಗಿದ್ದು ಬೇಕಾದಷ್ಟಿದೆ... ಅಗಾಧವಾಗಿದೆ, ಒಂದು ಸಾಗರ ಅಂತಾರಲ್ಲ ಹಾಗೇ.. ಇದೊಂದು ಕಲಾ ಸಾಗರ.. ನಮಗೆ ಎಷ್ಟು ಶಕ್ತಿ ಕೊಟ್ಟಿರ್ತಾನೋ ಭಗವಂತ ಅಷ್ಟನ್ನು ಮಾತ್ರ ನಾವು ಅನುಭವಿಸೋಕೆ ಸಾಧ್ಯ ಹೊರತೂ ಅಷ್ಟನ್ನೂ ನಾನು ಸಾಧಿಸಬಲ್ಲೆ ಅನ್ನೋ ಶಕ್ತಿ ನಮಗೆ ಇರೋದಿಲ್ಲ.' ಎಂದಿದ್ದಾರೆ ಡಾ ರಾಜ್‌ಕುಮಾರ್. ಇದೇ ಅವರ ಸಾಧನೆಯ ಹಿಂದಿನ ರಹಸ್ಯ. ಆ ಗುಟ್ಟೀಗ ರಟ್ಟಾಗಿದೆ.
ಜೊತೆಗೆ, ಡಾ ರಾಜ್ ಅವರು ತಮ್ಮ ತಂದೆಯ ಬಗ್ಗೆ ಕೂಡ ಹೇಳಿದ್ದಾರೆ. 'ನಮ್ಮ ಅಪ್ಪಾಜಿ ಮಾಡಿದ್ದ ರಾವಣ, ಭೀಮ, ಕಂಸ, ಜಲಂಧರ ಇಂಥ ಪಾತ್ರಗಳನ್ನು ನೋಡಿದ್ದ ನನಗೆ ಮಹಿಷಾಸುರ, ರಣಧೀರ ಕಂಠೀರವ ಇವುಗಳನ್ನೆಲ್ಲಾ ಮಾಡೋದಕ್ಕೆ ಸ್ಪೂರ್ತಿ ಕೊಟ್ತು.. ಇವತ್ತಿನ ನನ್ನ ಏಳಿಗೆನಾ ಅವ್ರು ಕಣ್ತುಂಬ ನೋಡಿದ್ರೆ, ಬಹಳ ಸಂತೋಷ ಪಡ್ತಾ ಇದ್ರು..' ಎಂದಿದ್ದಾರೆ ಡಾ ರಾಜ್‌ಕುಮಾರ್. ಬಳಿಕ ಅವರು ಅದೆಷ್ಟು ಬೆಳೆದರು ಎಂಬುದು ಎಲ್ಲರಿಗೂ ಗೊತ್ತು. ತಮ್ಮ ನಟನಾ ಜೀವನದ ಶುರುವಿನಲ್ಲಿ ತಮ್ಮ ಎಲ್ಲಾ ಯಶಸ್ಸನ್ನು ಅಪ್ಪಾಜಿಗೆ ಅರ್ಪಿಸಿದ್ದ ಡಾ ರಾಜ್‌ಕುಮಾರ್ ಅವರು ಬಳಿಕ ಅಭಿಮಾನಿಗಳೇ ನನ್ನ ದೇವರು ಎಂದಿದ್ದಾರೆ.
ಟೀ ಟೈಂ ಬಿಸ್ಕೆಟ್.. ಲವ್ ಗಾಸಿಪ್ ಎಂಡ್ ವೇಳೆ ನೋಡಿ ಸಂಜನಾ ಆನಂದ್ ಮುದ್ದಾದ ಫೋಟೋಸ್..!
ಈ ಎರಡೂ ಮಾತಿನ ಅರ್ಥ ಇಷ್ಟೇ. ಡಾ ರಾಜ್‌ಕುಮಾರ್ ಯಾವತ್ತೂ ಕೂಡ ತಮಗೆ ಸಿಕ್ಕ ಯಶಸ್ಸು 'ತಮ್ಮದು' ಎಂದು ಯಾವತ್ತೂ ಹೇಳಿಕೊಂಡಿರಲೇ ಇಲ್ಲ. ತಮ್ಮ ನಟನಾಕಲೆಯ ಕ್ರೆಡಿಟ್‌ಅನ್ನು ತಮ್ಮ ಅಪ್ಪಾಜಿಗೆ ಕೊಟ್ಟು, ತಮಗೆ ಸಿಕ್ಕ ಯಶಸ್ಸನ್ನು ಕನ್ನಡ ಸಿನಿಪ್ರೇಕ್ಷಕ ಅಭಿಮಾನಿಗಳಿಗೆ ಮೀಸಲಿಟ್ಟರು. 'ಅಭಿಮಾನಿ'ಗಳನ್ನು ದೇವರು ಎಂದು ಕರೆದುಬಿಟ್ಟರು ಡಾ ರಾಜ್‌ಕುಮಾರ್. ಈಗ ಅದೊಂದು ಟ್ರೆಂಡ್ ಆಗಿಯೂ ಮುಂದುವರಿಯುತ್ತಿದೆ. ಜೊತೆಗೆ, ತಾವು ಅದೆಷ್ಟೋ ಸಾಧಿಸಿದ್ದರೂ ಇನ್ನೂ ಸಾಧಿಸಬೇಕಾಗಿದ್ದು ತುಂಬಾ ಇದೆ ಎಂಬ ಅರಿವೂ ಸಹ ಇತ್ತು ಡಾ ರಾಜ್‌ಕುಮಾರ್ ಅವರಿಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.