ಯಾಕೆ ಈ ಕಥೆಯನ್ನು ಆಯ್ಕೆ ಮಾಡಿಕೊಂಡರು ಹರ್ಷಿಕಾ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳು ಸಿನಿಮಾ ರೂಪದಲ್ಲಿ ಬರುತ್ತಾ?
ಕನ್ನಡ ಚಿತ್ರರಂಗದ ಬಬ್ಲಿ ಹುಡುಗಿ ಹರ್ಷಿಕಾ ಪೂಣಚ್ಚ ಈಗ ನಿರ್ಮಾಪಕಿಯಾಗಿ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇಷ್ಟು ದಿನ ನಾಯಕಿಯಾಗಿ ಮಿಂಚಿದ್ದ ಹರ್ಷು ಚಿ. ಸೌಜನ್ಯಾ ಚಿತ್ರದ ಮೂಲಕ ನಿರ್ಮಾಣಕ್ಕೆ ಇಳಿದು ಸಮಾಜಕ್ಕೆ ಒಳ್ಳೆ ಸಂದೇಶ ಸಾರಲು ಮುಂದಾಗಿದ್ದಾರೆ. ತಾಯಿತನವನ್ನು ಎಂಜಾಯ್ ಮಾಡಿಕೊಂಡು ಈಗ ನೈಜ ಘಟನೆಯ ಆಧಾರಿತ ಕಥೆಯನ್ನು ಜನರ ಮುಂದೆ ಇಡಲು ಮುಂದಾಗಿದ್ದಾರೆ. ಎಲ್ಲರಿಗೂ ಕಾಡುವ ಪ್ರಶ್ನೆ ಏನೆಂದರೆ ಯಾಕೆ ಈ ಟೈಟಲ್ ಎಂದು. ಅದಕ್ಕೆ ಸ್ವತಃ ಹರ್ಷಿಕಾ ಉತ್ತರಿಸಿದ್ದಾರೆ.
'ಗಂಡ ಭುವನ್ ಮತ್ತು ನಿರ್ದೇಶಕರು ಸಪೋರ್ಟ್ ಮಾಡಿದ್ದಕ್ಕೆ ನಾನು ನಿರ್ದೇಶನ ಮಾಡಲು ಸಜ್ಜಾಗಿದ್ದೀನಿ. ನಾವೇ ಹಲವು ಸಲ ಮಾತನಾಡಿಕೊಂಡಿದ್ದೀನಿ ಅಷ್ಟೋಂದು ಕ್ರೌರವಾಗಿ ರೇ* ಮತ್ತು ಮ** ಮಾಡ್ಬೇಕಿತ್ತಾ ಪಾಪ ಆ ಹೆಣ್ಣು ಮಗು ಏನ್ ಮಾಡ್ತಿತ್ತು ಅಂತ. ಇದು ಸಿನಿಮಾನಾ ಅಥವಾ ರಾಜಕೀಯಾ ವಿಚಾರನಾ ಅಥವಾ ಮತ್ತೊಂದಾ ಅಂತ ಬರುವುದಿಲ್ಲ ಎಲ್ಲರ ಮನೆಯಲ್ಲೂ ಹೆಣ್ಣು ಮಕ್ಕಳು ಇದ್ದಾರೆ ಅವರ ನೋವಿಗೆ ನಾವು ಮಿಡಿಯುತ್ತೀವಿ ಅಷ್ಟೇ. ಕಮರ್ಷಿಯಲ್, ಲವ್ ಅಥವಾ ಹೊಡಿಬಡಿ ಸಿನಿಮಾದೊಂದಿಗೆ ನಾನು ನಿರ್ದೇಶಕಿ ಆಗಬಹುದಿತ್ತು ಆದರೆ ಸಮಾಜಕ್ಕೆ ಮೆಸೇಜ್ ಕೊಡುವ ಸಿನಿಮಾ ಮಾಡುವ ಆಸೆಯಲ್ಲಿ ಹೆಜ್ಜೆ ಇಟ್ಟಿದ್ದೀನಿ. ನನ್ನ ಮೊದಲ ಸಿನಿಮಾದಲ್ಲಿ ಕಿಶೋರ್ ನಟಿಸುತ್ತಿದ್ದಾರೆ ಅಂದ್ರೆ ನನ್ನ ಖುಷಿ ಇದು ನನ್ನ ಭಾಗ್ಯ ಯಾವುದಕ್ಕೂ ಕಷ್ಟ ಆಗುವುದಿಲ್ಲ. ಈ ವಿಚಾರವನ್ನು ಜನರ ಮನಸ್ಸಿಗೆ ನಾಟುವ ಹಾಗೆ ವಿವರಿಸಲು ಇಷ್ಟ ಪಡುತ್ತೀನಿ' ಎಂದು ಪ್ರೆಸ್‌ಮಿಟ್‌ನಲ್ಲಿ ಹರ್ಷಿಕಾ ಮಾತನಾಡಿದ್ದಾರೆ.
ಅಪ್ಪಾಜಿ ಅಮ್ಮ ರೀತಿ ನಾವು ಲೈಫ್ ಅನುಸರಿಸಲಿಲ್ಲ, ಹೆಸರು ಹಣ ಮರೆ ಮಾಚಿಬಿಡ್ತು: ಪೂರ್ಣಿಮಾ ರಾಮ್‌ಕುಮಾರ್
'ಸಮಾಜದಲ್ಲಿ ಇಬ್ರು ಮೂರು ಜನ ಬದಲಾಯಿಸಿದರೆ ನನಗೆ ಖುಷಿಯಾಗುತ್ತದೆ. ಒಂದು ವರ್ಷದಲ್ಲಿ 31 ಸಾವಿರ ಹೆಣ್ಣುಮಕ್ಕಳ ಮೇಲೆ ರೇ* ಆಗುತ್ತದೆ ಅಂದ್ರೆ ಹೇಗೆ? ವರ್ಷದಲ್ಲಿ ಅಷ್ಟು ಹೆಣ್ಣುಮಕ್ಕಳು ಹುಟ್ಟುವುದೇ ಕಡಿಮೆ. ಇಲ್ಲಿ ಒಂದು ಹೆಣ್ಣುಮಗಳ ಕಥೆ ಹೇಳುತ್ತಿಲ್ಲ ಸಾವಿರಾರು ಹೆಣ್ಣುಮಕ್ಕಳ ಕಥೆ ಹೇಳುತ್ತಿದ್ದೀವಿ. ಪ್ರಮುಖ ಪಾತ್ರಧಾರಿ ಹೆಸರು ಸೌಜನ್ಯಾ ಅಂತ ಇದನ್ನು ಯಾರಿಗೂ ರಿಲೇಟ್ ಮಾಡಿಕೊಳ್ಳಬೇಡಿ. ಅವಳಿಗೆ ನೋವು ಮಾಡುತ್ತಿರುವ ಜನರು, ಏನೂ ಆಗೇ ಇಲ್ಲ ಅಂತ ಜೀವನ ನಡೆಸುತ್ತಿರುವ ಜನರ ಬಗ್ಗೆ ಹೇಳುತ್ತಿರುವೆ. ಒಬ್ಬರ ಮೇಲೆ ಸಿನಿಮಾ ಮಾಡುತ್ತಿಲ್ಲ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಲು ಮಾಡುತ್ತಿರುವ ಸಿನಿಮಾ. ತುಂಬಾ ಸೌಜನ್ಯವಾಗಿದ್ರೆ ಹೆಣ್ಣುಮಕ್ಕಳ ಮೇಲೆ ಕ್ರೌರ್ಯತೆ ನಡೆಯುತ್ತದೆ' ಎಂದು ಹರ್ಷಿಕಾ ಹೇಳಿದ್ದಾರೆ.
ಈ ನೋವನ್ನು ಒಂದು ವಾರದಿಂದ ಅನುಭವಿಸುತ್ತಿದ್ದರು, ಚಿಕಿತ್ಸೆ ಸರಿಯಾಗಿ ನಡೆದಿದ್ರೆ...: ಗುರು ಕಿರಣ್