ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರಿಗೆ ಬೆಳವಣಿಗೆ ಇಲ್ಲವೇ: ಪರಭಾಷಾ ಚಿತ್ರಗಳಲ್ಲಿ ಸಾಲು ಸಾಲು ಕನ್ನಡತಿಯರು!

ಆಶಿಕಾ ರಂಗನಾಥ್‌, ರೆಚೆಲ್‌ ಡೇವಿಡ್‌, ಸಪ್ತಮಿ ಗೌಡ, ನಭಾ ನಟೇಶ್ ಹೀಗೆ ಕನ್ನಡದ ಸಾಲು ಸಾಲು ನಟಿಯರು ಪರಭಾಷೆಗಳಲ್ಲಿ ನಟಿಸಿ ಸೈ ಅನಿಸಿಕೊಳ್ಳುತ್ತಿದ್ದಾರೆ. ಇವುಗಳ ನಡುವೆ ಸದ್ಯ ಎದ್ದಿರುವ ಪ್ರಶ್ನೆ, ‘ಹಾಗಿದ್ದರೆ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರಿಗೆ ಬೆಳವಣಿಗೆ ಇಲ್ಲವೇ?’ ಎಂಬುದು. 
 

Is there no growth for heroines in Sandalwood Row after row of Kannada women in others language films gvd

ಪ್ರಿಯಾ ಕೆರ್ವಾಶೆ

ಗೆಲುವಿಲ್ಲದೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಗುವೇ ಮರೆಯಾಗಿದೆ ಎಂದು ಇತ್ತೀಚೆಗೆ ರವಿಚಂದ್ರನ್ ಹೇಳಿದ್ದಾರೆ. ಗೆಲುವಿನ ಜೊತೆ ಪ್ರತಿಭಾವಂತ ನಾಯಕಿಯರೂ ಇಲ್ಲಿಂದ ಮರೆಯಾಗುತ್ತಿದ್ದಾರೆ ಎಂಬ ಇನ್ನೊಂದು ಮಾತೂ ಇದರ ಜೊತೆಗೆ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಕನ್ನಡದ ಸಾಲು ಸಾಲು ನಟಿಯರು ತೆಲುಗು, ತಮಿಳು, ಬಾಲಿವುಡ್‌ ಸಿನಿಮಾಗಳಲ್ಲಿ ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಮಾತಿಗೆ ದೊಡ್ಡ ಸಾಕ್ಷಿಯಾಗಿ ಕಣ್ಮುಂದೆ ಬರುವುದು ರಶ್ಮಿಕಾ ಮಂದಣ್ಣ. ಅವರು ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. 

Latest Videos

ಅವರ ನಟನೆಯ ‘ಛಾವಾ’, ‘ಪುಷ್ಪ 2’, ‘ಅನಿಮಲ್‌’ ಸಿನಿಮಾಗಳು ಬ್ಲಾಕ್‌ಬಸ್ಟರ್‌ ಹಿಟ್ ಆದ ಬಳಿಕ ‘ಅದೃಷ್ಟವಂತ ನಟಿ’ ಎಂಬ ಕಿರೀಟವೂ ರಶ್ಮಿಕಾ ತಲೆಗೇರಿದೆ. ಕನ್ನಡದ ಶ್ರೀಲೀಲಾ ಕೂಡ ತೆಲುಗು ಸಿನಿಮಾಗಳಲ್ಲಿ ಗೆಲುವಿನ ನಗೆ ಬೀರಿ ಬಾಲಿವುಡ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಮತ್ತೊಂದೆಡೆ ‘ಸಪ್ತಸಾಗರದಾಚೆ ಎಲ್ಲೋ’ ಸಕ್ಸಸ್‌ ಬಳಿಕ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್‌ ತಮಿಳು, ತೆಲುಗು ಇಂಡಸ್ಟ್ರಿಗಳಲ್ಲಿ ಉತ್ತಮ ಅವಕಾಶ ಪಡೆಯುತ್ತಿದ್ದಾರೆ. ಚೈತ್ರಾ ಆಚಾರ್‌ ಸದಭಿರುಚಿಯ ತಮಿಳು ಸಿನಿಮಾಗಳಲ್ಲಿ ನಟಿಸಿ ಪ್ಯಾನ್‌ ಇಂಡಿಯಾ ಮಟ್ಟಕ್ಕೇರುವ ಭರವಸೆ ಮೂಡಿಸಿದ್ದಾರೆ.

ನಟಿ ಸಮಂತಾ ಮೊಬೈಲ್‌ನಲ್ಲಿ 'ಲವ್' ಅಂತ ಸೇವ್ ಆಗಿರೋ ನಂಬರ್ ವೈರಲ್: ಯಾರದ್ದು ಅಂತಾ ಗೊತ್ತಾ?

ಆಶಿಕಾ ರಂಗನಾಥ್‌, ರೆಚೆಲ್‌ ಡೇವಿಡ್‌, ಸಪ್ತಮಿ ಗೌಡ, ನಭಾ ನಟೇಶ್ ಹೀಗೆ ಕನ್ನಡದ ಸಾಲು ಸಾಲು ನಟಿಯರು ಪರಭಾಷೆಗಳಲ್ಲಿ ನಟಿಸಿ ಸೈ ಅನಿಸಿಕೊಳ್ಳುತ್ತಿದ್ದಾರೆ. ಇವುಗಳ ನಡುವೆ ಸದ್ಯ ಎದ್ದಿರುವ ಪ್ರಶ್ನೆ, ‘ಹಾಗಿದ್ದರೆ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರಿಗೆ ಬೆಳವಣಿಗೆ ಇಲ್ಲವೇ?’ ಎಂಬುದು. ಇದಕ್ಕೆ ಉತ್ತರಿಸುವ ನಿರ್ದೇಶಕ ನಾಗಶೇಖರ್, ‘ಕನ್ನಡ ಇಂಡಸ್ಟ್ರಿ ಮೊದಲಿನಿಂದಲೂ ಹೀರೋ ಪ್ರಧಾನವಾಗಿ ಗುರುತಿಸಿಕೊಂಡಿದೆ. ಈಗಲೂ ಆ ಸ್ಥಿತಿ ಬದಲಾಗಿಲ್ಲ. ಇಂದಿಗೂ ಇಲ್ಲಿ ಸಿನಿಮಾ ಮಾಡ್ತೀವಿ ಅಂದಾಕ್ಷಣ ಮೊದಲು ಕೇಳೋದೇ ಹೀರೋ ಯಾರು ಅಂತ, ನಿರ್ದೇಶಕರನ್ನೂ ಇತ್ತೀಚೆಗೆ ಅಷ್ಟಾಗಿ ಮಾನ್ಯ ಮಾಡುತ್ತಿಲ್ಲ. ಹೀಗಿರುವಾಗ ನಮ್ಮ ನಾಯಕಿಯರಿಗೆ ಇಲ್ಲಿ ಸಿಗದ ಗೌರವ, ಹಣ, ಪ್ರತಿಭೆಗೆ ಮಾನ್ಯತೆ ಅಲ್ಲಿ ಸಿಗುತ್ತಿರುವುದಂತೂ ಸತ್ಯ’ ಎನ್ನುತ್ತಾರೆ.

ಅದೇ ರೀತಿ ಇನ್ನೊಬ್ಬ ನಾಯಕಿ ರೇಚೆಲ್‌ ಡೇವಿಡ್‌, ‘ಒಬ್ಬ ನಟಿ ಉತ್ತಮ ಪಾತ್ರ ಗಳಿಕೆಗಾಗಿ ಬೇರೆ ಭಾಷೆಯ ಅವಕಾಶಕ್ಕೆ ಕೈಚಾಚುವುದು ಜಾಣತನ’ ಎನ್ನುತ್ತಾರೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನಮ್ಮ ನಟಿಯರಿಗೆ ಸಿಗದ ಮಾನ್ಯತೆ ಪರಭಾಷಾ ಚಿತ್ರಗಳಲ್ಲಿ ಸಿಗುತ್ತಿದೆ. ಅಲ್ಲಿ ಸಿಗುವ ಪ್ರಾಧಾನ್ಯತೆ, ಹಣ ಇಲ್ಲೂ ಸಿಕ್ಕರೆ ನಾವು ಈ ಇಂಡಸ್ಟ್ರಿಯ ಸಿನಿಮಾಗಳಿಗೇ ಆದ್ಯತೆ ನೀಡುತ್ತೇವೆ ಎಂಬ ಮಾತನ್ನೂ ನಟಿಯರು ಹೇಳುತ್ತಾರೆ. ಸದ್ಯ ಹೊಸ ವರ್ಷದಲ್ಲಿ ಒಂದೇ ಒಂದು ಗೆಲುವಿನ ಸಿಂಚನವೂ ಸಿಗದೆ ಕಂಗಾಲಾಗಿರುವ ಸ್ಯಾಂಡಲ್‌ವುಡ್‌ ಪರಭಾಷೆಗಳ ಸಿನಿಮಾಗಳನ್ನು ನಮ್ಮ ನಾಯಕಿಯರು ಗೆಲ್ಲಿಸುವುದನ್ನು ಮೂಕಪ್ರೇಕ್ಷಕನಂತೆ ನೋಡುತ್ತಿದೆ. ಪ್ರತಿಭೆ ನೆಚ್ಚಿರುವ ಕನ್ನಡ ನಾಯಕಿಯರು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತಮ್ಮ ಸಕ್ಸಸ್‌ ಓಟ ಮುಂದುವರಿಸಿದ್ದಾರೆ.

ವಡಿವೇಲುರನ್ನ ಸಿನಿಮಾದಿಂದ ಹೊರಹಾಕಿದ ಭಾರತಿರಾಜಾ: ಅಸಲಿಗೆ ಹಾಸ್ಯನಟ ಕಣ್ಣೀರು ಹಾಕಿದ್ದು ಯಾಕೆ?

ನಾನು ಸದ್ಯ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೀನಿ. ಬೇರೆ ಭಾಷೆಗಳಲ್ಲಿ ನಟಿಸಿ ಬಂದರೆ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಮಾನ್ಯತೆ ಸಿಗುತ್ತೆ.
- ರೇಚೆಲ್‌ ಡೇವಿಡ್

vuukle one pixel image
click me!