
ಸ್ಯಾಂಡಲ್ವುಡ್ನಲ್ಲಿ ಬಹುದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ ಚಿತ್ರವೆಂದರೆ ಅದು ಕೆಜಿಎಫ್ ಮತ್ತು ಕೆಜಿಎಫ್-2. ಇದೀಗ ಯಶ್ ಅಭಿಮಾನಿಗಳು ಕೆಜಿಎಫ್-3 ನಿರೀಕ್ಷೆಯಲ್ಲಿದ್ದಾರೆ. 2018 ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ವಿಶ್ವಾದ್ಯಂತ 250 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, 2022ರಲ್ಲಿ ಬಿಡುಗಡೆಯಾದ ಚಾಪ್ಟರ್-2 1500 ಕೋಟಿ ರೂಪಾಯಿ ಗಳಿಸಿದೆ. ಎರಡು ವರ್ಷಗಳ ಅಂತರದಲ್ಲಿ ಚಾಪ್ಟರ್-2 ಬಂದಿದೆ. ಆದ್ದರಿಂದ ಇದಾಗಲೇ ಮತ್ತೆರಡು ವರ್ಷ ಆಗಿರುವ ಹಿನ್ನೆಲೆಯಲ್ಲಿ ಚಾಪ್ಟರ್-3 ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಅಷ್ಟಕ್ಕೂ ಕೆಜಿಎಫ್-3 ಸಿನಿಮಾದ ಘೋಷಣೆ ಬಹಳ ಹಿಂದೆಯೇ ನಡೆದಿದೆ. ಸಿಂಪಲ್ ಪೂಜೆಯೊಂದಿಗೆ ಸ್ಕ್ರಿಪ್ಟ್ ಕೆಲಸ ಕೂಡ ಶುರು ಆಗಿದೆ. 2025 ರಲ್ಲಿ ಇದರ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷೆ ಇದ್ದರೂ, ದಿನಾಂಕವಿನ್ನೂ ಫಿಕ್ಸ್ ಆಗಲಿಲ್ಲ.
ಆದರೆ, ಯಶ್ ಅವರು ಇದರ ಬಗ್ಗೆ ಸಸ್ಪೆನ್ಸ್ ಆಗಿಯೇ ಇಟ್ಟಿದ್ದಾರೆ. ಮಾಧ್ಯಮದವರ ಬಳಿಯೂ ಈ ವಿಷಯವನ್ನು ಯಶ್ ಹೇಳುತ್ತಿಲ್ಲ. ಶಿವರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ್ದ ಸಮಯದಲ್ಲಿ ಕೂಡ ಪತ್ರಕರ್ತರು ಮಾತನಾಡಿಸಲು ಪ್ರಯತ್ನಿಸಿದ್ದಾಗ, ಯಶ್ ಏನೂ ಹೇಳದೇ ನಗುತ್ತಲೇ ಕಾರು ಏರಿ ಹೊರಟುಬಿಟ್ಟಿದ್ದರು. ಇದೀಗ ಯಶ್ ಅವರು ಮೌನವಾಗಿಯೇ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದ ಅದೀಗ ವೈರಲ್ ಆಗಿದೆ. ಇದರಲ್ಲಿ ಆ್ಯಂಕರ್ ಒಂದೊಂದೇ ಪ್ರಶ್ನೆ ಕೇಳಿದಾಗ, ಯಶ್ ಅವರು ಸೈಲೆಂಟ್ ಆಗಿಯೇ ಆ್ಯಕ್ಷನ್ ಮಾಡುವ ಮೂಲಕ ತೋರಿಸಿದ್ದಾರೆ. ಆರಂಭದಲ್ಲಿ ಅವರು 'ಮೊಗ್ಗಿನ ಮನಸ್ಸು' ಎಂಬ ಶಬ್ದ ಹೇಳಿದಾಗ, ಅದು ನಾನೇ ಎನ್ನುವಂತೆ ಯಶ್ ತೋರಿಸಿದ್ದಾರೆ. ಅದು ತಮ್ಮ ಚಿತ್ರ ಎಂದು ಕೆಲವರು ಅರ್ಥ ಮಾಡಿಕೊಂಡಿದ್ದರೆ, ಮತ್ತೆ ಕೆಲವರು ತಮ್ಮದು ಮೊಗ್ಗಿನಂಥ ಮನಸ್ಸು ಎಂದು ಯಶ್ ಹೇಳಿರುವುದಾಗಿ ಅರ್ಥೈಸಿಕೊಂಡಿದ್ದಾರೆ. ಇನ್ನು, ಎರಡನೆಯದಾಗಿ ರಾಗಿ ಮುದ್ದೆ ಬಸ್ಸಾರು ಎನ್ನುತ್ತಿದ್ದಂತೆ ಕೈಯಲ್ಲಿ ಮುದ್ದೆ ಎಂದು ತೋರಿಸಿದ್ದಾರೆ ಯಶ್. ಸಿನಿಮಾ ಎಂಬ ಶಬ್ದಕ್ಕೆ ಮೇಲೆ ತೋರಿಸಿ, ಸಿನಿಮಾ ಎಂದರೆ ದೇವರು ಎನ್ನುವ ಅರ್ಥದಲ್ಲಿ ಹೇಳಿದರು ನಟ.
ಚಹಾ ಮಾರುತ್ತಿದ್ದ ಯಶ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ನಟನ ರೋಚಕ ಸ್ಟೋರಿ ಇದು...
ಕೆಜಿಎಫ್ ಎಂದಾಕ್ಷಣ ತಮ್ಮ ಗಡ್ಡ ತೋರಿಸಿದರು. ಅಣ್ಣಾವ್ರು ಎಂಬ ಶಬ್ದಕ್ಕೆ ರಾಜ್‌ಕುಮಾರ್ ಅವರ ಸಿಗ್ನೇಚರ್ ಸ್ಟೈಲ್ ತೋರಿಸಿದರು. ಮದುವೆ ಎಂದು ಹೇಳಿದಾಗ ಸೂಪರ್ ಎನ್ನುವಂತೆ ಆ್ಯಕ್ಷನ್ ಮಾಡಿದ್ರು. ಇದರ ನಡುವೆಯೇ ಸನ್ನಿ ಲಿಯೋನ್ ಎಂಬ ಮಾತು ಆ್ಯಂಕರ್ನಿಂದ ಕೇಳಿಬಂತು. ಇದಕ್ಕೆ ಅರೆ ಕ್ಷಣ ಯಶ್ ಕಕ್ಕಾಬಿಕ್ಕಿಯಾದಂತೆ ಕಂಡು, ಏನ್ ಪ್ರಶ್ನೆ ಇದು ಎನ್ನುವ ರೀತಿಯಲ್ಲಿ ಸೈಲೆಂಟ್ ಆಗಿಬಿಟ್ಟರು! ಇದರ ವಿಡಿಯೋ ವೈರಲ್ ಆಗಿದೆ. ಸನ್ನಿ ಲಿಯೋನ್ ಅವರ ಹೆಸರಿಗೆ ಯಶ್ ಮಾಡಿದ್ದ ಆ್ಯಕ್ಟಿಂಗ್ ಮಾತ್ರ ಸಕತ್ ಎಲ್ಲರೂ ಇಷ್ಟಪಡುತ್ತಿದ್ದಾರೆ. ಅಂದಹಾಗೆ ಮಾಜಿ ನೀಲಿತಾರೆ ಸನ್ನಿಲಿಯೋನ್ ಕನ್ನಡದಲ್ಲಿಯೂ ನಟಿಸಿದ್ದಾರೆ. ಚಾಂಪಿಯನ್ ಸಿನಿಮಾದಲ್ಲಿಯೂ ನಟಿಸಿದ್ದದಾರೆ. ಈ ಸಮಯದಲ್ಲಿ ಅವರಿಗೆ ಯಶ್ ಅವರ ಫೋಟೋ ತೋರಿಸಲಾಗಿತ್ತು. ಕೆಜಿಎಫ್ ಸಿನಿಮಾದ ಝಲಕ್ ಇದಾಗಿತ್ತು. ಇವರು ಗೊತ್ತಾ ಎಂದಾಗ ಸನ್ನಿ ಅವರು, ಗೊತ್ತು, ರಾಕಿಭಾಯ್ ಎಂದಿದ್ದರು. ಭಾಯ್ ಎಂದರೆ ನನ್ನ ಸಹೋದರ ಅಲ್ಲ ಮತ್ತೆ ಎಂದು ತಮಾಷೆ ಮಾಡಿದ್ದರು.
ಇನ್ನು ಯಶ್ ಕುರಿತು ಹೇಳುವುದಾದರೆ, ಇದು ರಾಕಿಂಗ್ ಸ್ಟಾರ್ ಕನ್ನಡ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲಿಯೂ ಬೆಳೆದು ನಿಂತಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಸಿನಿಮಾ ಮಾರುಕಟ್ಟೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಿದ ಯಶ್, ನ್ಯಾಷನಲ್ ಸ್ಟಾರ್ ಆಗಿ ಹೊಮ್ಮಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆದು ನಿಂತಿರುವ ನಟ ಯಶ್, ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಏರುವುದು ಸುಲಭದ ಮಾತಲ್ಲ. ಅದರಲ್ಲಿಯೂ ಯಾವುದೇ ಗಾಡ್ ಫಾದರ್ ಇಲ್ಲದೇ ಇಂಥದ್ದೊಂದು ಯಶಸ್ಸು ಗಳಿಸುವುದು ಹಲವರಿಗೆ ಕನಸಿನ ಮಾತೇ. ನುರಿತ ಕೌಶಲ, ಅದ್ಭುತ ಅಭಿನಯದ ಪ್ರತಿಭೆ ಏನೇ ಇದ್ದರೂ ಎಷ್ಟೋ ಮಂದಿಗೆ ಚಿತ್ರರಂಗಕ್ಕೆ ಎಂಟ್ರಿ ಸಿಗುವುದೇ ಕಷ್ಟ. ಒಂದೇ ಗಾಡ್ ಫಾದರ್ ಇರಬೇಕು ಇಲ್ಲವೇ ಸ್ಟಾರ್ ಕಿಡ್ ಆಗಿರಬೇಕು ಎನ್ನುವ ಸ್ಥಿತಿ ಇದೆ. ಆದರೆ ನಟ ಯಶ್ ಅವರು ಕಷ್ಟದಿಂದ ಹಂತಹಂತವಾಗಿ ಮೇಲೆ ಬಂದವರು.
ಕೆಜಿಎಫ್-3 ಬಿಗ್ ಅಪ್ಡೇಟ್! ಯಶ್ ಫ್ಯಾನ್ಸ್ ಕುಣಿದು ಕುಪ್ಪಳಿಸೋ ಸುದ್ದಿ ಕೊಟ್ಟ ಮಾಳವಿಕಾ ಅವಿನಾಶ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.