ದೇವರ ಹಾಡು-ಬಟ್ಟೆಗೂ ಹೋಲಿಸಬೇಡಿ ಎಂದು ಹೊಸ ಫೋಟೋ ಶೂಟ್ ಮಾಡಿಸಿದ ಚೈತ್ರಾ ಜೆ.ಆಚಾರ್

First Published Mar 12, 2024, 2:26 PM IST

ಬೆಂಗಳೂರು (ಮಾ.12): ನಾನು ಸೋಜುಗಾದ ಸೂಜಿಮಲಲಿಗೆ ಹಾಡು ಹೇಳಿದಾಗ, ನಿಮ್ಮ ದೇವರ ಹಾಡಿದ್ದು ದೇವರ ಹಾಡು. ನೀವು ಹಾಕಿರುವ ಬಟ್ಟೆ ನಮ್ಮ  ಸಂಸ್ಕೃತಿಯಾ ಎಂದು ಕಮೆಂಟ್ ಮಾಡಿದವನಿಗೆ ಟೋಬಿ ನಟಿ ಚೈತ್ರಾ ಜೆ.ಆಚಾರ್ ಹಿಗ್ಗಾ ಮುಗ್ಗಾ ಜಾಡಿಸಿದ್ದರು. ಆದರೆ, ಈಗ ಕೆಟ್ಟದಾಗಿ ಕಮೆಂಟ್ ಮಾಡಿದವರೆಲ್ಲರೂ ಬಾಯಿಮೇಲೆ ಬೆರಳಿಟ್ಟುಕೊಳ್ಳುವಂತೆ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.

ಚೈತ್ರಾ ಜೆ.ಆಚಾರ್ ಅವರು, ಯಾವುದೇ ಸಿನಿಮಾದ ಹಿನ್ನೆಲೆ ಇಲ್ಲದಿದ್ದರೂ ಟೋಬಿ ಚಿತ್ರದ ಮೂಲಕ ರಾಜ್.ಬಿ.ಶೆಟ್ಟಿ ಅವರೊಂದಿಗೆ ಅದ್ಭುತವಾಗಿ ನಟಿಸಿ ಕನ್ನಡ ನಾಡಿನ ಜನತೆಯಿಂದ ಮೆಚ್ಚುಗೆ ಪಡೆದಿದ್ದಾರೆ.
 

ಕನ್ನಡಿಗರ ಮೆಚ್ಚಿಗೆ ಪಡೆದ ನಟಿ ಚೈತ್ರಾಗೆ, ಅವರು ಹಾಕುವ ಬಟ್ಟೆಯಿಂದಲೇ ಭಾರಿ ಕೆಟ್ಟದಾಗಿ ಕಮೆಂಟ್‌ಗಳು ಕೇಳಿಬಂದಿದ್ದವು. ಕೆಟ್ಟ ಕಮೆಂಟ್‌ಗಳು ಬಂದರೂ, ಫಾಲೋವರ್ಸ್‌ಗಳ ಸಂಖ್ಯೆ ಮಿಲಿಯನ್‌ಗಟ್ಟಲೇ ಬೆಳೆದುನಿಂತಿತು.
 

ರ್ಯಾಪಿಡ್ ರಶ್ಮಿ ಅವರ ಯ್ಯೂಟೂಬ್ ಚಾನಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಕೆಟ್ಟ ಕಮೆಂಟ್ ಮಾಡಿದ್ದ ನೆಟ್ಟಿಗರಿಗೆ ಚೈತ್ರಾ ಆಚಾರ್ ಸರಿಯಾಗಿಯೇ ಮೈ ಚಳಿ ಬಿಡಿಸಿದ್ದರು. ಮತ್ತೊಬ್ಬರಿಗೆ ಕಮೆಂಟ್ ಮಾಡುವಾಗ ಮೈಮೇಲೆ ಎಚ್ಚರಿಕೆ ಇಟ್ಟುಕೊಳ್ಳುವಂತೆ ಮಾಡಿದ್ದರು.
 

ಅವಾರ್ಡ್‌ ಕಾರ್ಯಕ್ರಮಕ್ಕೆಂದು ಗೌನ್ ಡಿಸೈನ್ ಮಾಡಿಸಿದ್ದೆನು. ಅದರಲ್ಲಿ ಕ್ಲೀವೇಜ್‌ ಕಾಣಿಸುತ್ತಿತ್ತು. ಆದರೆ, ವೇದಿಕೆಯ ಮೇಲೆ ನನಗೆ ಸೋಜುಗಾದ ಸೂಜಿಮಲ್ಲಿಗೆ ಹಾಡು ಹಾಡಬೇಕೆನಿಸಿತು, ಹಾಡಿದೆ. ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದಾಗ ಕೆಟ್ಟ ಕಮೆಂಟ್ ಮಾಡಿದ್ದಾರೆ.
 

ಅದರಲ್ಲೊಬ್ಬರು 'ನೀವು ಹಾಡಿದ್ದು ದೇವರ ಹಾಡು, ಹಾಕಿರುವ ಬಟ್ಟೆ ನಮ್ಮ ಸಂಸ್ಕೃತಿನಾ' ಎಂದು ಕಾಮೆಂಟ್ ಮಾಡಿದ್ದಾರೆ. ನನ್ನ ಸಂಸ್ಕೃತಿ ಏನು ಅಂತ ನನಗೆ ಗೊತ್ತು...ಹೀಗೆ ಕಾಮೆಂಟ್ ಮಾಡುತ್ತಿರುವ ನಿನಗೆ ನಿಮ್ಮ ಸಂಸ್ಕೃತಿ ಗೊತ್ತಿಲ್ವಾ' ಎಂದು ಚೈತ್ರಾ ಆಚಾರ್ ಸಂದರ್ಶನದಲ್ಲಿ ತಿರುಗೇಟು ಕೊಟ್ಟಿದ್ದರು.
 

ನನ್ನ ಕೆಲಸ ಮೆಚ್ಚಿಕೊಂಡವರು ಹೊಗಳಿದ್ದಾರೆ. ನನ್ನ ಆಗದೇ ಇರುವವರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ ಅಂತ ನನಗೆ ನಾನೇ ತಿಳಿದುಕೊಂಡು ಸುಮ್ಮನಾದೆ' ಎಂದಿದ್ದರು ಚೈತ್ರಾ ಆಚಾರ್. 
 

ಈ ಮೂಲಕ ನಾನು ಫಿಟ್ ಆಗಿರುವ ನನ್ನ ದೇಹದ ಬಗ್ಗೆ ಕಾಳಜಿ ವಹಿಸುತ್ತೀನಿ ಎನ್ನುತ್ತಲೇ ದೇವರ ಹಾಡಿಗೂ, ನಾವು ಹಾಕುವ ಬಟ್ಟೆಗೂ ಹೋಲಿಕೆ ಮಾಡಿ ನಮ್ಮ ಸಂಸ್ಕೃತಿ ಅಳೆಯಬೇಡಿ ಎಂದು ಚೈತ್ರಾ ತಿಳಿಸಿದ್ದರು.
 

ಈ ಘಟನೆ ನಡೆದಾಗ ನನಗೆ 13 ಸಾವಿರ ಫಾಲೋವರ್ಸ್‌ ಇದ್ದರು ... ಅಲ್ಲಿಂದ ನನ್ನ ಅಕೌಂಟ್‌ಗೆ 3.7 ಮಿಲಿಯನ್ ಜನರು ನನ್ನ ಖಾತೆ ಓಪನ್ ಮಾಡಿ ನೋಡಿದ್ದಾರೆ ಎಂಬ ಮಾಹಿತಿಯನ್ನೂ ಚೈತ್ರಾ ನೀಡಿದ್ದರು.
 

ಇದಾದ ಬೆನ್ನಲ್ಲಿಯೇ ಚೈತ್ರಾ ಜೆ. ಆಚಾರ್ ಅವರು ಹಾಟ್ ಫೋಟೋ ಶೂಟ್ ಮಾಡಿಸಿದ್ದಾರೆ. ಒಟ್ಟು 16ಕ್ಕೂ ಅಧಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
 

ಈ ಮೂಲಕ ಬಟ್ಟೆ ನಮ್ಮ ಸ್ವಂತಿಕೆಗೆ ಬಿಟ್ಟಿದ್ದು. ಇದನ್ನು ಯಾರೊಬ್ಬರು ನೋಡಿ ಏನೆಂದುಕೊಳ್ಳುತ್ತಾರೋ ಎಂಬ ಮುಜುಗರಕ್ಕೆ ಒಳಗಾಗದೇ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಮೂಲಕ ಪುರುಷ ಪ್ರಧಾನ ಸಮಾಜವಲ್ಲ ಎಂಬ ಸಂದೇಶವನ್ನೂ ಕೊಟ್ಟಂತಿದೆ.

click me!