ನೀವ್​ ಬೇಡ, ಅವ್ಳೇ ಬೇಕು ಅಂತ ಹೊರಟೇ ಹೋದ, ಈಗ ನೋಡಿ... 'ಮುಖ್ಯಮಂತ್ರಿ' ಚಂದ್ರು ಪತ್ನಿ ಮನದ ಮಾತು...

By Suchethana D  |  First Published Nov 17, 2024, 4:32 PM IST

'ಮುಖ್ಯಮಂತ್ರಿ' ಚಂದ್ರು ಅವರ ಪತ್ನಿ ಪದ್ಮಾ ಅವರು ತಮ್ಮ ಮಗನ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಅವರು ಹೇಳಿದ್ದೇನು?
 


'ಮುಖ್ಯಮಂತ್ರಿ' ಚಂದ್ರು ಕನ್ನಡಿಗರಿಗೆ ಚಿರಪರಿಚಿತರು. ನೂರಾರು ಸಿನಿಮಾ, ಸೀರಿಯಲ್​ಗಳಲ್ಲಿ ನಟಿಸಿ ಮನೆಮಾತಾದವರು.  ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ನಲ್ಲಿ ದೇಸಾಯಿ ಪಾತ್ರ ಮಾಡುತ್ತಿದ್ದಾರೆ. ಆದರೆ ಇವರ ಪತ್ನಿ ಪದ್ಮಾ ಚಂದ್ರು ಅವರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದೀಗ ಪದ್ಮಾ ಅವರು ತಮ್ಮ ಜೀವನದ ಹಲವು ಘಟನೆಗಳ ಬಗ್ಗೆ ಕಲಾಮಾಧ್ಯಮ ಯೂಟ್ಯೂಬ್​ ಚಾನೆಲ್​ ಜೊತೆ ಮಾತನಾಡಿದ್ದಾರೆ. ತಮ್ಮ ಕುಟುಂಬದ ಹಲವು ವಿಷಯಗಳನ್ನು ಇಲ್ಲಿ ಅವರು ತೆರೆದಿಟ್ಟಿದ್ದಾರೆ. ಅಂದಹಾಗೆ ಈ ದಂಪತಿಗೆ ಇಬ್ಬರು ಗಂಡು ಮಕ್ಕಳು. ಆದರೆ ಕಿರಿಯ ಪುತ್ರ ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿರುವ ಬಗ್ಗೆ ನೋವು ತೋಡಿಕೊಂಡಿದ್ದಾರೆ ಪದ್ಮಾ. 

ತಮ್ಮ ಮಗ ಮತ್ತು ಸೊಸೆಯ ಬಗ್ಗೆ ಸಿಕ್ಕಾಪಟ್ಟೆ ನೋವು ಹಾಗೂ ಸಿಟ್ಟಿನಿಂದ ಪದ್ಮಾ ಅವರು ಮಾತನಾಡಿದ್ದಾರೆ. ಮಗ ಯಾವಳನ್ನೋ ಕಟ್ಟಿಕೊಂಡ. ಅವಳ ಜಾತಕ ನೋಡಿದಾಗ, ಅತ್ತೆಗೆ ಸಾವು ಎಂದು ಇತ್ತು. ಅಣ್ಣ-ತಮ್ಮಂದಿರು ಚೆನ್ನಾಗಿ ಇರಲ್ಲ ಎಂದು ಇತ್ತು. ಅದಕ್ಕಾಗಿಯೇ ಅವಳ ಜೊತೆ ಮದುವೆಯಾಗುವುದು ಬೇಡ ಎಂದೇ ಹೇಳಿದೆವು. ಆದರೆ ಆತ ಅದನ್ನು ಕೇಳಲೇ ಇಲ್ಲ. ನಾವು ಬೇಕೋ, ಅವಳು ಬೇಕೋ ಎಂದು ಕೇಳಿದಾಗ, ಅವಳೇ ಬೇಕು ಎಂದು ಅವಳ ಹಿಂದೆ ಹೋದ. ಅವಳ ಜಾತಕ ಚೆನ್ನಾಗಿದ್ರೆ ನಾವು ಮದುವೆ ಮಾಡ್ತಿದ್ವಿ. ಆದರೆ ಹಾಗೆ ಇರಲಿಲ್ಲ. ಮಗನನ್ನು 33 ವರ್ಷ ಕಷ್ಟಪಟ್ಟು ಸಾಕಿದ್ವಿ. ವರ್ಷಾನುಗಟ್ಟಲೆ ನಿದ್ದೆ ಮಾಡದೇ ಸಾಕಿದ್ದೆ. ಅದ್ಯಾವುದೂ ಉಪಯೋಗಕ್ಕೆ ಬರಲೇ ಇಲ್ಲ. ಅವಳೇ ಬೇಕು ಎಂದು ನಮ್ಮನ್ನು ಬಿಟ್ಟು ಹೋಗೇ ಬಿಟ್ಟ ಎಂದು ಪದ್ಮಾ ಅವರು ನೋವು ತೋಡಿಕೊಂಡಿದ್ದಾರೆ.

Tap to resize

Latest Videos

undefined

ಅಪ್ಪಾಜಿಯನ್ನು ನಾನು ಎಂದಿಗೂ ಅನುಕರಿಸಲ್ಲ... ಆದರೆ... ಶಿವರಾಜ್​ಕುಮಾರ್​ ಓಪನ್​ ಮಾತು

35ನೇ ವಯಸ್ಸಿಗೆ ಅವನಿಗೆ ಹಾರ್ಟ್​ ಎಟ್ಯಾಕ್​ ಆಯ್ತು. ಸ್ಟಂಟ್​ ಹಾಕಿದ್ದಾರೆ. ನೋಡಿ ನಾವು ಏನು ಮಾಡುವುದು? ಬೇಡ ಅಂದ್ರೂ ಕೇಳಲಿಲ್ಲ ಎಂದಿದ್ದಾರೆ  ಪದ್ಮಾ. ಅವನಿಗೆ ಏನು ಆಗುವುದೋ ಎನ್ನುವ ಭಯದಲ್ಲಿ ನಾವು ಕಷ್ಟಪಟ್ಟು ಸಾಕಿದ್ವಿ. ಹೋಟೆಲ್​ನಲ್ಲಿ ತಿಂದ್ರೆ ಕಷ್ಟ ಆಗುತ್ತೆ ಎಂದು ಮನೆಯಲ್ಲಿಯೇ ಅಡುಗೆ ಮಾಡಿ ಕೊಡ್ತಿದ್ದೆ. ಬೈಕ್​ನಲ್ಲಿ ಹೋದ್ರೆ ಕಷ್ಟ ಆಗುತ್ತೆ ಎಂದು ಕಾರು ಕೊಡಿಸಿದ್ವಿ. ಆದರೂ ಅವನು ಹೀಗೆ ಮಾಡಿದ. ಪ್ರಾಣಕ್ಕೆ ಅಪಾಯ ಆದ್ರೆ ಯಾರು ಗತಿ ಎಂದು ಪ್ರಶ್ನಿಸಿದ್ದಾರೆ. ಮಗನ ಪ್ರಾಣ ಉಳಿದುಕೊಂಡಿರುವುದೇ ನನ್ನಿಂದ ಎಂದು ಜ್ಯೋಯಿಸರು ಹೇಳಿದ್ದರು. ಆತನಿಗೆ ಹಾರ್ಟ್​ ಎಟ್ಯಾಕ್​ ಆದರೂ ಪ್ರಾಣಾಪಾಯದಿಂದ ಪಾರಾಗಿರುವುದಕ್ಕೆ ನಾನು ಮಾಡ್ತಿರೋ ಪೂಜೆಗಳೇ ಕಾರಣ. ಮಕ್ಕಳು ಚೆನ್ನಾಗಿ ಇರಲಿ ಎಂದು ಚಾಮುಂಡಿಬೆಟ್ಟ ಎಲ್ಲಾ ಹತ್ತಿದ್ದೆ. ಪೂಜೆ ಎಲ್ಲಾ ಮಾಡಿಸಿದ್ದೆ. ಅದೇ ಕಾರಣಕ್ಕೆ ಅವನು ಇಂದು ಚೆನ್ನಾಗಿ ಇದ್ದಾನೆ. ಆದ್ರೆ ನಮ್ಮ ಮಾತು ಕೇಳದೇ ಮದ್ವೆಯಾದುದಕ್ಕೆ ಇಷ್ಟೆಲ್ಲಾ ತೊಂದರೆ ಆಗ್ತಿದೆ ಎಂದಿದ್ದಾರೆ. 
 
 ಆದರೆ ಈ ವಿಡಿಯೋಗೆ ಸಿಕ್ಕಾಪಟ್ಟೆ  ಕಮೆಂಟ್​ಗಳು ಬಂದಿದ್ದು, ಬಹುತೇಕರು ಪದ್ಮಾ ಅವರ ಮಾತನ್ನು ವಿರೋಧಿಸಿದ್ದಾರೆ. ಇವರ ಮಾತಿಗೆ ಟೀಕಾಪ್ರಹಾರವನ್ನೇ ಹರಿಸಿದ್ದಾರೆ! ತಮ್ಮ ಸಂಬಂಧಿಕರು ಹುಡುಗಿಯೊಬ್ಬಳ ಜಾತಕದಲ್ಲಿಯೂ ಅತ್ತೆ ಸಾವು ಅಂತಿತ್ತು. ಅವರು ಇನ್ನೂ ಚೆನ್ನಾಗಿಯೇ ಇದ್ದಾರೆ. ನೀವು ಕೂಡ ಇನ್ನೂ ಚೆನ್ನಾಗಿಯೇ ಇದ್ದೀರಲ್ಲ. ಮಗ-ಸೊಸೆಯ ವಿರುದ್ಧ ಹೀಗೆ ಮಾತನಾಡುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದರೆ, ನಿಮಗೂ ಒಬ್ಬಳು ಮಗಳು ಇದ್ದು, ಅವಳೂ ಹೀಗೆ ಮಾಡಿದರೆ ಏನು ಮಾಡುತ್ತಿದ್ದೀರಿ ಎಂದು ಮತ್ತೆ ಕೆಲವರು ಪ್ರಶ್ನಿಸಿದ್ದಾರೆ. ಮಕ್ಕಳಿಗೆ ಪ್ರತಿ ತಾಯಿಗೂ ತ್ಯಾಗ ಮಾಡುತ್ತಾಳೆ. ಮಕ್ಕಳ ಶ್ರೇಯಸ್ಸಿಗೆ ಪೂಜೆ- ಪುನಸ್ಕಾರವನ್ನೂ ಮಾಡುತ್ತಾಳೆ. ಆದರೆ ಅದನ್ನು ಈ ರೀತಿಯ ವೇದಿಕೆಯಲ್ಲಿ ಹೇಳಿಕೊಂಡು ಅದರಿಂದಲೇ ತಮ್ಮ ಮಗನ ಪ್ರಾಣಕ್ಕೆ ಅಪಾಯ ಆಗಿಲ್ಲ ಎಂದು ಹೇಳುವುದನ್ನು ನೋಡಿದರೆ ನಿಮ್ಮ ಧೋರಣೆ ಸರಿಯಿದ್ದಂತೆ ಕಾಣುತ್ತಿಲ್ಲ ಎಂದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅತ್ತೆ ಎಂದರೆ ಈ ಸಮಾಜದಲ್ಲಿ ಕೆಟ್ಟ ರೀತಿಯ ಮನೋಭಾವ ಇದೆ. ಅದಕ್ಕೆ ಅನ್ವಯ ಆಗುವಂತೆ ನಿಮ್ಮ ಮಾತು ಕೇಳಿಬರುತ್ತಿದೆ ಎಂದು ಕೆಲವರು ನೇರಾನೇರವಾಗಿಯೇ ಪದ್ಮಾ ಅವರನ್ನು ವಿರೋಧಿಸಿದ್ದರೆ, ಪಾಪ ಆ ಸೊಸೆ ಬೇರೆ ಹೋಗಿದ್ದೇ ಒಳ್ಳೆಯದಾಯ್ತು ಎನ್ನುತ್ತಿದ್ದಾರೆ ಮತ್ತೆ ಹಲವರು. ಈ ರೀತಿಯ ವಿಚಿತ್ರ ಜನರ ನಡುವೆ ತನ್ನ ಹುಡುಗಿಯ ಜೊತೆ ನಿಂತಿರುವ ಆಕೆಯ ಮಗನನ್ನು ನಾನು ಅಪಾರವಾಗಿ ಪ್ರಶಂಸಿಸುತ್ತೇನೆ. ನೀವು ಅದ್ಭುತ ವ್ಯಕ್ತಿ. ದಯವಿಟ್ಟು ತುಂಬಾ ಸಂತೋಷದಿಂದ ಬದುಕಿ.  ದೇವರು ನಿಮ್ಮನ್ನು ಆಶೀರ್ವದಿಸಲಿ. 'ನಿಮ್ಮ ಹೆಂಡತಿಗೆ, ನಾನು ಹೇಳಲು ಬಯಸುತ್ತೇನೆ, ದಯವಿಟ್ಟು ಈ ರೀತಿಯ ಅಜ್ಞಾನ ಮತ್ತು ಸೊಕ್ಕಿನ ಜನರ ನಡುವೆ ಗಟ್ಟಿಯಾಗಿರಿ. ಕರ್ನಾಟಕದ ಜನತೆ ನಿಮ್ಮೊಂದಿಗಿದ್ದಾರೆ. ದೇವರು ನಿಮ್ಮೊಂದಿಗಿದ್ದಾನೆ' ಎಂದು ಕಮೆಂಟಿಗರೊಬ್ಬರು ಬರೆದಿದ್ದಾರೆ. 

ನನ್ನ ಅಕ್ಕನಿಗೆ ಬೆಂಕಿ ಹಚ್ಚಿ ಕೊಲ್ಲಲು ನೋಡಿದ್ರು: ಜಯಪ್ರದಾ ಕುಟುಂಬದ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ವಿಜಯಲಕ್ಷ್ಮಿ

click me!