ಆ್ಯಕ್ಟಿಂಗ್​ ಬರಲ್ಲ ಅಂತ ರಿಜೆಕ್ಟ್​ ಮಾಡಿಬಿಟ್ರು, ನಾನ್ ಬಿಡ್ತೀನಾ? ಆ ದಿನಗಳ ನೆನಪಿಸಿಕೊಂಡ 'ಅಮೃತಧಾರೆ' ಭೂಮಿಕಾ!

By Suchethana D  |  First Published Nov 17, 2024, 5:19 PM IST

ಅಮೃತಧಾರೆಯ ಭೂಮಿಕಾಳ ಆ್ಯಕ್ಟಿಂಗ್​ಗೆ ಮನಸೋಲದವರೇ ಇಲ್ಲ. ಆದರೆ ಅಂದು ನಟಿಗೆ ಆ್ಯಕ್ಟಿಂಗ್​ ಬರಲ್ಲ ಅಂತ ರಿಜೆಕ್ಟ್​ ಮಾಡಲಾಗಿತ್ತು. ಆ ದಿನ ಹೇಗಿತ್ತು?
 


ಗಾಡ್​ಫಾದರ್​ ಇಲ್ಲದೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಇಲ್ಲಿ ಖ್ಯಾತಿ ಪಡೆಯುವುದು  ಅಷ್ಟು ಸುಲಭದ ಮಾತೇ ಅಲ್ಲ ಬಿಡಿ. ಇದಾಗಲೇ ಸೀರಿಯಲ್​ ಅಥವಾ ಸಿನಿಮಾಗಳಲ್ಲಿ ಖ್ಯಾತಿ ಪಡೆದಿರುವ ನಟ-ನಟಿಯರನ್ನು ಮಾತನಾಡಿದರೆ, ಅವರು ಪಟ್ಟಿರುವ ನೋವಿನ ದಿನಗಳು ತೆರೆದುಕೊಳ್ಳುತ್ತವೆ. ಅದೇ ರೀತಿಯಲ್ಲಿಯೇ ರಿಜೆಕ್ಟ್​ ಆಗುವ ಮೂಲಕ ಸಿನಿ ಇಂಡಸ್ಟ್ರಿಗೆ ಕಾಲಿಟ್ಟವರು ಅಮೃತಧಾರೆ ಭೂಮಿಕಾ. ಭೂಮಿಕಾ ಅಂದರೆ ಸುಲಭದಲ್ಲಿ ಎಲ್ಲರಿಗೂ ತಿಳಿಯತ್ತೆ ಬಿಡಿ, ಏಕೆಂದ್ರೆ ಈ ಸೀರಿಯಲ್​ ಮೂಲಕ ಅದ್ಭುತ ನಟನೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ನಟಿ. ಅಂದಹಾಗೆ ಇವರ ರಿಯಲ್​ ಹೆಸರು ಛಾಯಾ ಸಿಂಗ್​. 

ಭೈರತಿ ರಣಗಲ್​ ಚಿತ್ರದಲ್ಲಿಯೂ ನಟಿಸಿರುವ ಛಾಯಾ ಅವರು, ಇದೀಗ ಕಲಾ ಮಾಧ್ಯಮ ಯೂಟ್ಯೂಬ್​ ಚಾನೆಲ್​ನಲ್ಲಿ ತಾವು ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿರೋ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆರಂಭದಲ್ಲಿ ಕಾಲೇಜಿಗೆ ಹೋಗುವ ದಿನದಲ್ಲಿ ಟ್ಯೂಷನ್​ ಮಾಡೋಣ ಎಂದುಕೊಂಡು ಆ ದಿನಗಳಲ್ಲಿ ಬರುತ್ತಿದ್ದ ಯೆಲ್ಲೋ ಪೇಜಸ್​ ತಡಕಾಡುತ್ತಿದ್ದರಂತೆ. ಆಗ ಶ್ಯಾಂಪೂ ಒಂದರ ಜಾಹೀರಾತಿಗೆ ಹುಡುಗಿಯರು ಬೇಕಾಗಿದ್ದಾರೆ ಎನ್ನೋದನ್ನು ನೋಡಿ ಇವರೂ ಅರ್ಜಿ ಹಾಕಿದ್ದಾರೆ. ಇವರಿಗೆ ಕರೆಯೂ ಬಂದು ಬಿಟ್ಟಿದೆ. ಫೋಟೋಶೂಟ್​ ಅಂದ್ರೆ ಏನು ಎಂದೇ ಗೊತ್ತಿಲ್ಲದ ಛಾಯಾಗೆ ಫೋಟೋಶೂಟ್​ ಮಾಡಿಸಿಯಾಯ್ತು. ಅದರಲ್ಲಿ ಸೆಲೆಕ್ಟೂ ಆಗಿ ಬಿಟ್ಟರು. ಕೊನೆಗೆ ಅವರಿಗೆ ದೂರದರ್ಶನ ಚಂದನದಲ್ಲಿ ಬರುತ್ತಿದ್ದ  ಸಮಾಗಮ ಸೀರಿಯಲ್​ಗೆ ಆಫರ್​ ಬಂದಿತ್ತು. 

Tap to resize

Latest Videos

undefined

ಅಪ್ಪಾಜಿಯನ್ನು ನಾನು ಎಂದಿಗೂ ಅನುಕರಿಸಲ್ಲ... ಆದರೆ... ಶಿವರಾಜ್​ಕುಮಾರ್​ ಓಪನ್​ ಮಾತು

ನಿರ್ದೇಶಕ ಪಿ.ಎಚ್​.ವಿಶ್ವನಾಥ್​ ಅವರು ಛಾಯಾ ಅವರಿಗೆ ಆಫರ್​ ಕೊಟ್ಟಿದ್ದರು.  ಆಗಿನ್ನೂ ಚಿಕ್ಕವರಾಗಿದ್ದ ಛಾಯಾರಿಗೆ ನಟನೆ ಗೊತ್ತೇ ಇರಲಿಲ್ಲ. ಹಲವಾರು ಬಾರಿ ಆಡಿಷನ್​ ಮಾಡಿದ್ರೂ ಸರಿಯಾಗಿ ನಟಿಸಲೇ ಇಲ್ವಂತೆ! ಇವಳ್ಯಾಕೋ ತಮಗೆ ಸರಿ ಹೊಂದಲ್ಲ ಎಂದು ರಿಜೆಕ್ಟ್​ ಮಾಡಿ ಮನೆಗೆ ಕಳಿಸಿದ್ರಂತೆ. ಆ ದಿನಗಳನ್ನು ನೆನಪಿಸಿಕೊಂಡಿರೋ  ಛಾಯಾ, ಆಗ ನನಗೆ ತುಂಬಾ ಬೇಜಾರು ಆಗೋಯ್ತು. ನನಗೆ ಆ್ಯಕ್ಟಿಂಗ್​ ಬರಲ್ಲಾ ಅಂತ ಕಳಿಸ್ತೀರಾ, ನೋಡ್ತೇನೆ ಎಂದು ನನಗೆ ನಾನೇ ಚಾಲೆಂಜ್​ ಹಾಕಿಕೊಂಡು ಬಿಟ್ಟೆ. ಯಾಕೆ ಬರಲ್ಲ, ಆ್ಯಕ್ಟಿಂಗ್​ ಮಾಡಿ ತೋರಿಸ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. ಅಲ್ಲಿಂದ ಶುರುವಾದ ನನ್ನ ಜರ್ನಿ ಇಲ್ಲಿಯವರೆಗೆ ಬಂದು ನಿಂತಿದೆ. ಒಂದು ವೇಳೆ ಅಂದು ಪಿ.ಎಚ್​.ವಿಶ್ವನಾಥ್​ ಅವರು ನಿನಗೆ ಆ್ಯಕ್ಟಿಂಗ್​ ಬರಲ್ಲ ಎಂದು ಹೇಳದಿದ್ದರೆ, ನಿಜಕ್ಕೂ ನಾನು ನಿಂತ ನೀರಾಗಿ ಬಿಡ್ತಿದ್ನೋ ಏನೋ. ಅವರ  ಮಾತೇ ನನಗೆ ಸ್ಫೂರ್ತಿ ಆಗಿ ಆ್ಯಕ್ಟಿಂಗ್​ ಕಲಿತೆ ಎಂದಿದ್ದಾರೆ.

ಹೀಗೆ ಹಲವು ಅವಕಾಶಗಳು ಬಂದವು. ಅನಂತ್​ನಾಗ್​ ಜೊತೆ ನಟಿಸುವ ಸಮಯದಲ್ಲಿ ಫಸ್ಟ್​ ನೈಟ್​ ಸೀನ್​ನಲ್ಲಿ ನಟ ನಿನ್ನನ್ನು ಮುಟ್ಟಿದಾಗ ಭಯಪಟ್ಟು ನಡುಗಿ ಎದ್ದು ನಿಲ್ಲಬೇಕಿತ್ತು. ಆ ಆ್ಯಕ್ಟಿಂಗ್​ ನಾನು ಮಾಡಿದ್ದನ್ನು ನೋಡಿ ಖುದ್ದು ವಿಶ್ವನಾಥ್​ ಅವರೇ ಗಾಬರಿ ಬಿದ್ದು ಹೋದರು. ನಾನು ರಿಜೆಕ್ಟ್​ ಮಾಡಿದ ಹುಡುಗಿ ನಿಜಕ್ಕೂ ನೀನೇನಾ ಎಂದು ಕೇಳಿದರು. ಅವತ್ತಿನಿಂದಲೂ ಎಲ್ಲರಿಗೂ ನನ್ನದೇ ಉದಾಹರಣೆ ಕೊಟ್ಟು ಛಾಯಾಳನ್ನು ನೋಡಿ ಕಲಿಯಿರಿ ಎನ್ನುತ್ತಿದ್ದರು. ಅದು ನನಗೆ ಇನ್ನಷ್ಟು ಸ್ಫೂರ್ತಿ ತುಂಬಿತು. ನನಗೆ ಕೊನೆಗೆ ಅವರ ಚಿತ್ರಗಳಲ್ಲಿಯೂ ಹಲವು ಆಫರ್​ಗಳು ಸಿಕ್ಕವು ಎಂದಿದ್ದಾರೆ ಛಾಯಾ. ಅಂದಹಾಗೆ ಛಾಯಾ ಅವರು, ಕನ್ನಡ ಮಾತ್ರವಲ್ಲದೇ ಮಲಯಾಳು, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ, ಈಗಲೂ ನಟಿಸುತ್ತಿದ್ದಾರೆ.  ಅವರಿಗೆ ಈಗ  43 ವರ್ಷ ವಯಸ್ಸು. ಆದರೂ ಫಿಟ್​ನೆಸ್​ ಮತ್ತು ಸೌಂದರ್ಯ ಕಾಪಾಡಿಕೊಂಡಿರುವ ನಟಿ ಇನ್ನೂ ಯಂಗ್​ ಆಗಿಯೇ ಕಾಣಿಸುತ್ತಾರೆ.  ತಮಿಳಿನ 'ತುಂಟಾಟ' ಚಿತ್ರ, ಧನುಷ್‌ ಜೊತೆ 'ತಿರುಡಾ ತಿರುಡಿ' ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು.  ಮಫ್ತಿ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ತಂಗಿಯಾಗಿ ನಟಿಸಿದ್ದಾರೆ. ಕನ್ನಡದ 'ಖಾಕಿ' ಸಿನಿಮಾದಲ್ಲಿಯೂ ನಟಿಸಿದ್ದಾರೆ. ಬಂಗಾಳಿ ಭಾಷೆಯಲ್ಲಿ ಕಿ ಕೋರ್ ಬೋಝಭೋ ತೊಮಾಕೆ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ ಕೂಡ.  2012ರಲ್ಲಿ ಛಾಯಾ ತಮಿಳು ನಟ ಕೃಷ್ಣ ಅವರ ಜೊತೆ ಮದುವೆಯಾಗಿದ್ದಾರೆ.  

ನೀವ್​ ಬೇಡ, ಅವ್ಳೇ ಬೇಕು ಅಂತ ಹೊರಟೇ ಹೋದ, ಈಗ ನೋಡಿ... 'ಮುಖ್ಯಮಂತ್ರಿ' ಚಂದ್ರು ಪತ್ನಿ ಮನದ ಮಾತು...

click me!