ಕಾಂತಾರ ಚಾಪ್ಟರ್ 1​ ಬಿಗ್ ಅಪ್​ಡೇಟ್: ಈ ದಿನ ರಿಲೀಸ್​ ಎಂದು ಗುಡ್‌‌‌ ನ್ಯೂಸ್‌ ಕೊಟ್ಟ ರಿಷಬ್‌‌ ಶೆಟ್ಟಿ!

By Govindaraj S  |  First Published Nov 17, 2024, 5:00 PM IST

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ 'ಕಾಂತಾರ ಚಾಪ್ಟರ್ 1​' ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಹೊಂಬಾಳೆ ಫಿಲ್ಮ್ಸ್​​​ ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ಮಿಸುತ್ತಿದ್ದು, ಅಭಿಮಾನಿಗಳಿಗೆ ಹೊಸ ಅಪ್ಡೇಟ್​ ನೀಡಿದೆ. 
 


ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ 'ಕಾಂತಾರ ಚಾಪ್ಟರ್ 1​' ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಹೊಂಬಾಳೆ ಫಿಲ್ಮ್ಸ್​​​ ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ಮಿಸುತ್ತಿದ್ದು, ಅಭಿಮಾನಿಗಳಿಗೆ ಹೊಸ ಅಪ್ಡೇಟ್​ ನೀಡಿದೆ. ಹೌದು! ಹೌದು, ಕಾಂತಾರ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ. ರಿಷಬ್ ಶೆಟ್ಟಿ‌ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೊಡ್ಡ ಹಿಟ್​ ನೀಡಿತ್ತು. ಈ ಸಕ್ಸಸ್​ ಬಳಿ ಕಾಂತಾರ  2 ಸಿನಿಮಾ ಮಾಡಲು ರಿಷಬ್​ ಶೆಟ್ಟಿ ಮುಂದಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. 

ಇದೀಗ ಕಾಂತಾರ ಚಾಪ್ಟರ್ 1 ತಂಡದಿಂದ ಹೊಸ ಅಪ್ಡೇಟ್​ ಸಿಕ್ಕಿದೆ. ಕಾಂತಾರ ಚಾಪ್ಟರ್ 1 ಸಿನಿಮಾದ ಮುಂದಿನ ವರ್ಷ ಅಂದರೆ ಅಕ್ಟೋಬರ್​ 2 ಗಾಂಧಿ ಜಯಂತಿಯಂದು  ಗ್ರ್ಯಾಂಡ್ ರಿಲೀಸ್​ ಆಗುತ್ತಿದೆ. ಈ ಬಗ್ಗೆ ಖುದ್ದು ನಟ ರಿಷಬ್ ಶೆಟ್ಟಿ‌ ಅವರೇ ಸೋಷಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಕೇವಲ ಕಾಂತಾರ ಚಾಪ್ಟರ್ 1 ಸಿನಿಮಾದ ಪೋಸ್ಟರ್ ನೋಡಿದ ಅಭಿಮಾನಿಗಳು ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕಾಂತಾರ ಚಾಪ್ಟರ್ 1 ಸಿನಿಮಾ ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
 

 
 
 
 
 
 
 
 
 
 
 
 
 
 
 

Tap to resize

Latest Videos

undefined

A post shared by Hombale Films (@hombalefilms)


ಸತತ 60 ದಿನಗಳ ಕಾಲ ನಿರಂತರ ಶೂಟಿಂಗ್‌: ಕುಂದಾಪುರದಲ್ಲಿರುವ ಸೆಟ್‌ನಲ್ಲಿ ಸತತ 60 ದಿನಗಳ ಕಾಲ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದೆ. ಈ ಬಾರಿ ‘ಆರ್‌ಆರ್‌ಆರ್‌’ ಖ್ಯಾತಿಯ ಆ್ಯಕ್ಷನ್‌ ಡೈರೆಕ್ಟರ್‌ ಟೊಡರ್‌ ಲ್ಯಾಜರೋವ್‌ ಕರಾವಳಿ ನೆಲದ ದಂತಕತೆಗೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಹಾಡಿನ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಬನವಾಸಿ ಕದಂಬರ ಕಾಲದ ಕಥೆ ಇರುವ ‘ಕಾಂತಾರ 1’ ಚಿತ್ರ ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ಇಂಡಿಯನ್ ಸ್ಟಾರ್‌ಗಳ ಗೆಳೆಯ ರಿಷಬ್‌ ಶೆಟ್ಟಿ: ಉಡುಪಿಗೆ ಭೇಟಿ ಕೊಡುತ್ತಿರುವ ಪ್ಯಾನ್ ಇಂಡಿಯಾ ನಟರು!

‘ಕಾಂತಾರ ಅಧ್ಯಾಯ 1’ ಚಿತ್ರದಲ್ಲಿ ವಿಎಫ್‌ಎಕ್ಸ್‌ ಕೆಲಸ ಹೆಚ್ಚಿದೆ. ಹಾಲಿವುಡ್‌ನ ‘ಲಯನ್‌ ಕಿಂಗ್’ನಂಥಾ ಸಿನಿಮಾಕ್ಕೆ ವಿಎಫ್‌ಎಕ್ಸ್‌ ವರ್ಕ್‌ ಮಾಡಿದ ದಿ ಮಿಲ್‌ ಹಾಗೂ ಎಂಪಿಸಿ ಕಂಪನಿಗಳು ಈ ಸಿನಿಮಾಕ್ಕೆ ವಿಎಫ್‌ಎಕ್ಸ್‌ ಕೆಲಸ ಮಾಡಲಿವೆ. ಪೋಸ್ಟ್‌ ಪ್ರೊಡಕ್ಷನ್‌ಗೆ ಸಾಕಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸುಮಾರು 125 ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ಪ್ಯಾನ್‌ ವರ್ಲ್ಡ್‌ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸಿದೆ.

click me!