ಬಿಗ್ ಬಾಸ್ ಮನೆಯ ನಿಯಮಗಳನ್ನು ಅಲ್ಲಾಡಿಸಿದ್ದು ನನಗೆ ಇಷ್ಟವಾಗಲಿಲ್ಲ; ಮಂಜು ವಿರುದ್ಧ ತಿರುಗಿಬಿದ್ದ ಶೋಭಾ ಶೆಟ್ಟಿ

By Vaishnavi Chandrashekar  |  First Published Nov 19, 2024, 9:29 AM IST

ಶೋಭಾ ಶೆಟ್ಟಿ ಅನರ್ಹ ಎಂದ ಉಗ್ರಂ ಮಂಜು. ತಿರುಗಿಬಿದ್ದ ಸುಂದರಿಯನ್ನು ನೋಡಿ ಮನೆ ಮಂದಿ ಫುಲ್ ಶಾಕ್....


ಬಿಗ್ ಬಾಸ್ ಸೀಸನ್‌ 11 ಯಶಸ್ವಿಯಾಗಿ 51ನೇ ದಿನವನ್ನು ಪೂರೈಸಿದೆ. ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ ಮತ್ತು ರಜತ್ ಬುಜ್ಜಿ ಮನೆಯಲ್ಲಿ ಸಣ್ಣ ಕಿಡಿ ಹಚ್ಚಿದ್ದಾರೆ. ಅಲ್ಲದೆ ಈ ವಾರ ನಡೆಯಲಿರುವ ಟಾಸ್ಕ್‌ನಲ್ಲಿ ರಜತ್ ಮತ್ತು ಶೋಭಾ ಶೆಟ್ಟಿ ಗ್ಯಾಂಗ್ ಲೀಡರ್ ಆಗಲಿದ್ದಾರೆ. ಇನ್ನು ಈ ವಾರದ ನಾಮಿನೇಷನ್‌ ಕೂಡ ವಿಭಿನ್ನವಾಗಿ ನಡೆದಿದೆ...ಅದು ಕೂಡ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ನೇತೃತ್ವದಲ್ಲಿ. 

ಹೌದು! ಈ ವಾರ ನಡೆಯಲಿರುವ ಟಾಸ್ಕ್‌ಗಳಲ್ಲಿ ತಂಡ ನಾಯಕರಾಗಲು ಯಾರು ಅರ್ಹ ಮತ್ತು ಅನರ್ಹ ಎಂದು ಆರಿಸಬೇಕು. ಮನೆಯಲ್ಲಿ ಸ್ಪರ್ಧಿಗಳು ಶೋಭಾ ಶೆಟ್ಟಿ ಮತ್ತು ರಜತ್ ಬುಜ್ಜಿ ನಡುವೆ ಆಯ್ಕೆ ಮಾಡಬೇಕು...ಮನೆ ಮಂದಿ ತಮ್ಮ ಪಾಯಿಂಟ್ ಮುಂದಿಟ್ಟು ಬೋರ್ಡ್‌ ಮೇಲೆ ಫೋಟೋ ಅಂಟಿಸುತ್ತಾರೆ. ಆದರೆ ಉಗ್ರಂ ಮಂಜು ಅವಕಾಶ ಬಂದಾಗ ಶೋಭಾ ಶೆಟ್ಟಿ ಜಗಳಕ್ಕೆ ನಿಲ್ಲುತ್ತಾರೆ. ಈಗ ಬಿಗ್ ಬಾಸ್ ರಿಲೀಸ್ ಮಾಡಿರುವ ಪ್ರೋಮೋದಲ್ಲಿ ಶೋಭಾ ಶೆಟ್ಟಿ ಮತ್ತು ಉಗ್ರಂ ಮಂಜು ನಡುವೆ ನಡೆಯುವ ಜಗಳವನ್ನು ನೋಡಬಹುದು. 

Tap to resize

Latest Videos

undefined

ಪುಟ್ಟ ಹುಡುಗಿ ರೀತಿ ಹುಟ್ಟುಹಬ್ಬ ಆಚರಿಸಿಕೊಂಡ ಕಿರುತೆರೆ ನಟಿ ಸಂಜನಾ ಚಿದಾನಂದ್; ಫೋಟೋ ವೈರಲ್

'ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ನಡೆಸಿಕೊಂಡು ಬಂದಿರುವ ರೂಲ್ಸ್ ಆಂಡ್ ರೆಗ್ಯೂಲೇಷನ್‌ಗಳನ್ನು ಶೋಭಾ ಶೆಟ್ಟಿ ಅಲ್ಲಾಡಿಸಿದ್ದಾರೆ ಅದು ನನಗೆ ಇಷ್ಟವಾಗಿಲ್ಲ' ಎಂದು ಉಗ್ರಂ ಮಂಜು ತಮ್ಮ ಪಾಯಿಂಟ್ ಮುಂದೆ ಇಟ್ಟು ಅನರ್ಹ ಪಟ್ಟಿಯಲ್ಲಿ ಶೋಭಾ ಫೋಟೋವನ್ನು ಅಂಟಿಸುತ್ತಾರೆ. 'ಅಲ್ಲಾಡಿಸುವುದಕ್ಕೆ ಗಿಲ್ಲಾಡಿಸುವುದಕ್ಕೆ what? ಮಂಜುಗೆ ಕ್ಲಾರಿಟಿನೇ ಇಲ್ಲ. Nonsence ಕಾರಗಳನ್ನು ಕೊಡುತ್ತಿದ್ದೀರಿ...'ಎಂದು ಶೋಭಾ ಶೆಟ್ಟಿ ಉತ್ತರಿಸುತ್ತಾರೆ. ಇವರಿಬ್ಬರ ನಡುವೆ ವಾದ ವಿವಾದ ಹೆಚ್ಚಾಗುತ್ತಿದ್ದಂತೆ 'ಜೋರಾಗಿ ಕೂಗಾಡಬೇಡಿ ನಾನು ಇಲ್ಲೇ ಇದ್ದೀನಿ' ಎಂದು ಮಂಜು ಹೇಳುತ್ತಾರೆ. ಅಲ್ಲಿಗೆ ಸುಮ್ಮನಾದ ಶೋಭಾ 'ನಾನು ಹೇಳಿದ ಮಾತನ್ನು ಕೇಳಿಸಿಕೊಳ್ಳಿ' ಎಂದು ಕೂಗಾಡುತ್ತಾರೆ. ಇವರಿಬ್ಬರ ಜಗಳ ಮಾತುಕತೆ ನೋಡಿ ಹನುಂತು ಮತ್ತು ಧನರಾಜ್‌ ಗಾಬರಿ ಆಗುತ್ತಾರೆ..ಈಗ ಆಟ ಶುರು ಎಂದು ಮಾತನಾಡಿಕೊಳ್ಳುತ್ತಾರೆ. 

 

click me!