Explained: ನೀರಿನ ಟ್ಯಾಂಕ್ ಯಾಕೆ ಸಿಲಿಂಡರ್ ಆಕೃತಿಯಲ್ಲೇ ಇರುತ್ತದೆ?

First Published Apr 16, 2023, 12:02 PM IST

ನೀರಿನ ಟ್ಯಾಂಕ್‌ಗಳು ಯಾಕೆ ಒಂದೇ ಆಕಾರ ಮತ್ತು ಬಣ್ಣವನ್ನು ಹೊಂದಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಾವು ನೋಡುವ ಹೆಚ್ಚಿನ ನೀರಿನ ಟ್ಯಾಂಕ್‌ಗಳು ಸಿಲಿಂಡರಾಕಾರದ ವಿನ್ಯಾಸ, ಕಪ್ಪು ಬಣ್ಣ ಮತ್ತು ಅವುಗಳ ಮೇಲೆ ಪಟ್ಟೆಗಳನ್ನು ಹೊಂದಿರುತ್ತವೆ. ಅದರ ಹಿಂದಿರುವ ಕಾರಣವೇನು?

ಬಾವಿ, ಕೊಳ, ಕೆರೆ, ನದಿ ಎಲ್ಲವನ್ನೂ ಬಿಟ್ಟು ನೀರಿನ ಮೂಲವೇನೆಂದು ಕೇಳಿದರೆ ಟ್ಯಾಂಕ್‌ ಎಂಬಂತಿದೆ ಇವತ್ತಿನ ದಿನಗಳು. ಎಲ್ಲರ ಮನೆಯಲ್ಲೂ ತಪ್ಪದೇ ನೀರಿನ ಟ್ಯಾಂಕ್ ಇಟ್ಟಿರುವುದನ್ನು ನೀವು ನೋಡಿರಬಹುದು. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆಗಳ ಮೇಲ್ಛಾವಣಿಯ ಮೇಲೆ ಸಿಮೆಂಟ್ ಟ್ಯಾಂಕ್‌ಗಳನ್ನು ಕಟ್ಟಿಕೊಳ್ಳುತ್ತಾರೆ. ಅಥವಾ ಪ್ಲಾಸ್ಟಿಕ್ ಟ್ಯಾಂಕ್‌ಗಳನ್ನು ತಂದಿಟ್ಟುಕೊಳ್ಳುತ್ತಾರೆ. 

ಆದರೆ ಎಲ್ಲಾ ನೀರಿನ ಟ್ಯಾಂಕ್‌ಗಳು ಯಾಕೆ ಒಂದೇ ಆಕಾರ ಮತ್ತು ಬಣ್ಣವನ್ನು ಹೊಂದಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಾವು ನೋಡುವ ಹೆಚ್ಚಿನ ನೀರಿನ ಟ್ಯಾಂಕ್‌ಗಳು ಸಿಲಿಂಡರಾಕಾರದ ವಿನ್ಯಾಸ, ಕಪ್ಪು ಬಣ್ಣ ಮತ್ತು ಅವುಗಳ ಮೇಲೆ ಪಟ್ಟೆಗಳನ್ನು ಹೊಂದಿರುತ್ತವೆ. ಆದರೆ ಅದು ಏಕೆ? ಅದರ ಆಕಾರ, ಬಣ್ಣ ಮತ್ತು ರಚನೆಯ ಹಿಂದಿನ ಕಾರಣವೇನು ತಿಳಿದುಕೊಳ್ಳೋಣ.

Latest Videos


ನೀರಿನ ಟ್ಯಾಂಕ್‌ಗಳು ಏಕೆ ಸಿಲಿಂಡರಾಕಾರದಲ್ಲಿರುತ್ತವೆ?
ಟ್ಯಾಂಕ್‌ಗಳು ಸಿಲಿಂಡರಾಕಾರದಲ್ಲಿ ಇರುವುದಕ್ಕೆ ನೀರಿನ ಒತ್ತಡವೇ ಮುಖ್ಯ ಕಾರಣ. ಗೋಳಾಕಾರದ ಅಥವಾ ಸಿಲಿಂಡರಾಕಾರದ ತೊಟ್ಟಿಯು ಒತ್ತಡವನ್ನು ಟ್ಯಾಂಕ್‌ನಾದ್ಯಂತ ಸಮವಾಗಿ ವಿತರಿಸಲು ಅನುವು ಮಾಡಿಕೊಡುತ್ತದೆ. ಸಿಲಿಂಡರ್ ಆಕಾರದ ಟ್ಯಾಂಕ್‌ ನಿರ್ಮಾಣಕ್ಕೆ ಕಡಿಮೆ ವೆಚ್ಚದ ಉತ್ಪಾದನೆಯ ಅಗತ್ಯವಿರುತ್ತದೆ.

ಟ್ಯಾಂಕ್‌ಗಳನ್ನು ತಯಾರಿಸಲು ಬಳಸುವ PVC ಸಿಲಿಂಡರಾಕಾರದ ಆಕಾರವನ್ನು ನೀಡಿದಾಗ ಅವುಗಳನ್ನು ಒಡೆಯುವುದನ್ನು ತಡೆಯುತ್ತದೆ, ಆದರೆ ಚೌಕಾಕಾರದ ವಿನ್ಯಾಸವು ಅವುಗಳನ್ನು ಬಿರುಕುಗೊಳಿಸಬಹುದು.

ನೀರಿನ ತೊಟ್ಟಿಗಳು ಏಕೆ ಕಪ್ಪು ಬಣ್ಣದಲ್ಲಿವೆ?
ನೀರಿನ ತೊಟ್ಟಿಯ ಇತರ ಬಣ್ಣಗಳೂ ಇವೆ. ಆದರೆ ಬಹುತೇಕ ಟ್ಯಾಂಕ್‌ಗಳು ಕಪ್ಪುಬಣ್ಣದಲ್ಲಿರುತ್ತವೆ. ಯಾಕೆಂದರೆ ಕಪ್ಪು ಬಣ್ಣವು ಸೂರ್ಯನ ಕಿರಣಗಳನ್ನು ಹೀರಿಕೊಳ್ಳುತ್ತದೆ, ಇದು ಇತರ ವರ್ಣಗಳ ತೊಟ್ಟಿಗಳಿಗೆ ಹೋಲಿಸಿದರೆ ಪಾಚಿಯ ಘನೀಕರಣವನ್ನು ನಿಧಾನಗೊಳಿಸುತ್ತದೆ.

ಕಪ್ಪು ಬಣ್ಣಕ್ಕೆ ಕಾರಣ ತಿಳಿದುಕೊಂಡಾಯ್ತು, ಸಿಲಿಂಡರ್‌ ರಚನೆಗೂ ಕಾರಣ ಗೊತ್ತಾಯ್ತು. ಹಾಗಾದರೆ ಟ್ಯಾಂಕ್‌ಗಳನ್ನು ಸುಮ್ಮನೇ ಸಮತಟ್ಟಾಗಿ ಮಾಡಬಹುದಲ್ವಾ? ಯಾಕೆ ಸುಮ್ಮನೆ ಆ ಪಟ್ಟಿಗಳನ್ನು ರಚಿಸಲಾಗಿದೆ ಎಂದು ಕೊಳ್ಳುತ್ತಿದ್ದೀರಾ? ಅದಕ್ಕೂ ಇದೆ ನೋಡಿ ಒಂದು ಕಾರಣ.

ನೀರಿನ ಟ್ಯಾಂಕ್‌ಗಳ ಮೇಲೆ ಏಕೆ ಪಟ್ಟಿಗಳು ಇರುತ್ತವೆ?
ನೀರಿನ ಟ್ಯಾಂಕ್​ಗಳು ಸಾಮಾನ್ಯವಾಗಿ ಹೊರಭಾಗದಲ್ಲಿ ಸ್ಟ್ರೈಪ್‌ಗಳಿಂದ ರಚಿತವಾಗಿದೆ. ಹೀಗೆ ರಚಿಸಲು ಕಾರಣ ಈ ಪಟ್ಟಿಗಳು ಮಿತಿಮೀರಿದ ಅಥವಾ ನೀರಿನ ಒತ್ತಡದಿಂದ ಟ್ಯಾಂಕ್‌ ಮುರಿಯುವುದನ್ನು ತಡೆಯುತ್ತದೆ. ಇದೇ ಉದ್ದೇಶಕ್ಕೆ ಅವುಗಳನ್ನು ನಿರ್ಮಿಸಲಾಗಿದೆ.

click me!