ವಿರಾಟ್ ಕೊಹ್ಲಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ 15 ವರ್ಷದ ಯುವ ಅಭಿಮಾನಿಯೊಬ್ಬ ಕೊಹ್ಲಿ ಆಟ ನೋಡಲು 58 ಕಿಲೋಮೀಟರ್ ಸೈಕಲ್ ಸವಾರಿ ಮಾಡಿದ್ದಾನೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ರನ್ ಮಷಿನ್ ವಿರಾಟ್ ಕೊಹ್ಲಿ ಎಲ್ಲೇ ಕಾಣಿಸಿಕೊಂಡ್ರು, ಅಲ್ಲಿ ಅಭಿಮಾನಿಗಳ ದಂಡೇ ನೆರೆದಿರುತ್ತೆ. ಕೊಹ್ಲಿ ಜೊತೆ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬೀಳ್ತಾರೆ. ಇನ್ನು ತಮ್ಮ ನೆಚ್ಚಿನ ಆಟಗಾರನ ಆಟ ಕಣ್ತುಂಬಿಕೊಳ್ಳಲು ಎಷ್ಟು ದೂರ ಬೇಕಾದ್ರೂ ಹೋಗ್ತಾರೆ. ಅದಕ್ಕೆ ಈ ಹುಡುಗನೇ ಸಾಕ್ಷಿ!
ವಿರಾಟ್ ದರ್ಶನಕ್ಕಾಗಿ ಅಭಿಮಾನಿ ಮಾಡಿದ್ದೇನು ಗೊತ್ತಾ?
undefined
ಮಾಡರ್ನ್ ಡೇ ಕ್ರಿಕೆಟ್‌ನ ಬ್ಯಾಟಿಂಗ್ ಲೆಜೆಂಡ್ ವಿರಾಟ್ ಕೊಹ್ಲಿ ಫ್ಯಾನ್ ಫಾಲೋಯಿಂಗ್, ಕ್ರೇಝ್ ಬಗ್ಗೆ ಎಷ್ಟು ಹೇಳಿದ್ರು ಕಡಿಮೇನೆ. ಕ್ಲಾಸ್ ಬ್ಯಾಟಿಂಗ್, ಆಟದ ಮೇಲಿನ ಕಮಿಟ್ಮೆಂಟ್, ಆಗ್ರೆಷನ್ನಿಂದಲೇ ಕೊಹ್ಲಿ ಕೋಟ್ಯಂತರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
ಇನ್ನು ವಿರಾಟ್ ಎಲ್ಲೇ ಕಾಣಿಸಿಕೊಂಡ್ರು, ಅಲ್ಲಿ ಅಭಿಮಾನಿಗಳ ದಂಡೇ ನೆರೆದಿರುತ್ತೆ. ಕೊಹ್ಲಿ ಜೊತೆ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬೀಳ್ತಾರೆ. ಕೊಹ್ಲಿಯನ್ನ ನೋಡೋದಕ್ಕಾಗಿ ಎಷ್ಟು ದೂರ ಬೇಕಾದ್ರೂ ಹೋಗ್ತಾರೆ.
ಈ ಹುಡುಗನ ಹೆಸರು ಕಾರ್ತಿಕೇ, ಉತ್ತರಪ್ರದೇಶದ ಉನಾಓ ನಗರದವನು. 15 ವರ್ಷದ ಈತ ಕೊಹ್ಲಿಯನ್ನ ನೋಡಲು ಉನಾಓದಿಂದ ಕಾನ್ಪುರ ವರೆಗೆ 58 ಕಿಮೀ ಸೈಕಲ್ ಸವಾರಿ ಮಾಡಿದ್ದಾನೆ. ಈತನ ಅಭಿಮಾನಕ್ಕೆ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ.
A 15-year-old kid rode 58 kilometers on his bicycle just to watch Virat Kohli bat pic.twitter.com/rigqQBoCHq
— A (@_shortarmjab_)ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಾಂತ ಕೊಹ್ಲಿಗೆ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದಲ್ಲೂ ಕೊಹ್ಲಿಗೆ ಸ್ಪೆಷಲ್ ಫ್ಯಾನ್‌ಬೇಸ್ ಇದೆ. ಪಾಕಿಸ್ತಾನದ ಲೇಡಿ ಕೊಹ್ಲಿಯ ಬಿಗ್ ಫ್ಯಾನ್. ಈ ಬ್ಯೂಟಿಗೆ ಬಾಬರ್ ಅಜಮ್ಗಿಂತ ಕೊಹ್ಲಿ ಅಂದ್ರೇನೆ ಲವ್ ಜಾಸ್ತಿ. ಕಳೆದ ವರ್ಷದ ಏಷ್ಯಾಕಪ್‌ನಲ್ಲಿ ಕೇವಲ ಕೊಹ್ಲಿಗಾಗಿ ಇಂಡಿಯಾ-ಪಾಕಿಸ್ತಾನ ಪಂದ್ಯಕ್ಕೆ ಹಾಜರಾಗಿದ್ರು.
A Virat Kohli fan come from Pakistan to see Kohli's batting in Sri Lanka in Asia Cup.
King Kohli - The Face of World Cricket, He is everyone's favourite! pic.twitter.com/aUaiTmwSYn
ಮಗನ ಆಟ ನೋಡೋಕೆ ಬರದವರು, ಕೊಹ್ಲಿಗಾಗಿ ಬಂದಿದ್ರು..!
ಯೆಸ್, ಸಾಮಾನ್ಯವಾಗಿ ಯಾವುದೇ ಆಟಗಾರನ ತಾಯಿ, ತಮ್ಮ ಮಗನ ಆಟ ನೋಡೋಕೆ ಸ್ಟೇಡಿಯಂಗೆ ಆಗಮಿಸ್ತಾರೆ. ಆದ್ರೆ, ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿ ವೇಳೆ ವಿಂಡೀಸ್ ವಿಕೆಟ್ ಕೀಪರ್, ಜೋಶುವಾ ಡಿ ಸಿಲ್ವಾ ಅವ್ರ ತಾಯಿ, ಕೊಹ್ಲಿ ಆಟ ನೋಡಲು ಸ್ಟೇಡಿಯಂಗೆ ಆಗಮಿಸಿದ್ರು.
ಟೀಂ ಇಂಡಿಯಾ ಆಟಗಾರರು ತಂಡದ ಬಸ್ ಹತ್ತುವಾಗ ಕೊಹ್ಲಿಯನ್ನ ಕಂಡು ಫುಲ್ ಖುಷ್ ಆದ್ರು. ನೆಚ್ಚಿನ ಕ್ರಿಕೆಟರ್‌ನ ತಬ್ಬಿಕೊಂಡು ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿದ್ರು. ಈ ವೇಳೆ ಅವ್ರ ಕಣ್ಣಲ್ಲಿ ನೀರು ತುಂಬಿದ್ದು, ಕೊಹ್ಲಿ ಅಂದ್ರೆ ಆ ತಾಯಿಗೆ ಅದೆಷ್ಟು ಇಷ್ಟ ಅನ್ನೋದಕ್ಕೆ ಸಾಕ್ಷಿಯಾಗಿತ್ತು. ಒಟ್ಟಿನಲ್ಲಿ ಕೊಹ್ಲಿ ಕೋಟ್ಯಂತರ ಜನರ ಪಾಲಿಗೆ ಎಮೋಷನ್. ಇಂತಹ ಅಭಿಮಾನಿಗಳನ್ನ ಪಡೆದ ಕೊಹ್ಲಿ ನಿಜಕ್ಕೂ ಧನ್ಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್