ಸಂಪೂರ್ಣ ಚಿನ್ನದಿಂದಲೇ ನಿರ್ಮಾಣವಾದ ವಿಶ್ವದ ಅತೀ ದುಬಾರಿ ಬ್ಯಾಗ್ : ಬೆಲೆ ಕೋಟಿಗೂ ಹೆಚ್ಚು

By Anusha KbFirst Published Sep 27, 2024, 7:44 PM IST
Highlights

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್  ಫ್ಯಾಷನ್ ವೀಕ್‌ನಲ್ಲಿ ಸಂಪೂರ್ಣ ಚಿನ್ನದಿಂದಲೇ ನಿರ್ಮಿಸಿದ ವಿಶ್ವದ ಅತೀ ದುಬಾರಿ ಬ್ಯಾಗನ್ನು ತೊಟ್ಟು ಮಾಡೆಲ್ ಒಬ್ಬರು ಕ್ಯಾಟ್‌ ವಾಕ್ ಮಾಡಿದ್ದಾರೆ.  

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್  ಫ್ಯಾಷನ್ ವೀಕ್‌ನಲ್ಲಿ ಸಂಪೂರ್ಣ ಚಿನ್ನದಿಂದಲೇ ನಿರ್ಮಿಸಿದ ವಿಶ್ವದ ಅತೀ ದುಬಾರಿ ಬ್ಯಾಗನ್ನು ತೊಟ್ಟು ಮಾಡೆಲ್ ಒಬ್ಬರು ಕ್ಯಾಟ್‌ ವಾಕ್ ಮಾಡಿದ್ದಾರೆ.  ಸಂಪೂರ್ಣ ಚಿನ್ನದಿಂದಲೇ ತಯಾರಾದ ಈ ದುಬಾರಿ ಬ್ಯಾಗ್‌ನ ಸುದ್ದಿ ಈಗ ಸಂಚಲನ ಸೃಷ್ಟಿಸಿದೆ.  

ಫ್ರೆಂಚ್‌ ಬ್ರಾಂಡ್ ರಬನ್ನೆ ಈ ವಿಶ್ವದ ಅತ್ಯಂತ ದುಬಾರಿ ಬ್ಯಾಗನ್ನು ಚಿನ್ನದಿಂದಲೇ ನಿರ್ಮಿಸಿದೆ. 18 ಕ್ಯಾರೆಟ್‌ನ 157 ಚಿನ್ನದ ಪದಕಗಳಿಂದ ಈ ಬ್ಯಾಗನ್ನು ನಿರ್ಮಿಸಲಾಗಿದೆ. ಫ್ರೆಂಚ್‌ ಆಭರಣ ತಯಾರಕ ಅರ್ಥುಸ್‌ ಬೆರ್ಟ್ರೆಂಡ್‌ ಅವರ ಸಹಯೋಗದಲ್ಲಿ ಈ ಬ್ಯಾಗನ್ನು ನಿರ್ಮಿಸಿದ್ದು, 1969ರ ಸಮಯದ ಮಾಡೆಲ್‌ನ ಬ್ಯಾಗ್ ಇದಾಗಿದೆ.  1969 ಗೋಲ್ಡನ್ ಬ್ಯಾಗ್ ಎಂದು ಕರೆಯಲ್ಪಡುವ ಈ ವಿಭಿನ್ನವಾದ ಸಂಪೂರ್ಣವಾದ ಚಿನ್ನದಿಂದ ನಿರ್ಮಾಣವಾದ ಪರ್ಸನ್ನು ತೊಟ್ಟು ಮಾಡೆಲ್ ಒಬ್ಬರು ಸ್ಟೇಜ್ ಮೇಲೆ ಕ್ಯಾಟ್ ವಾಕ್ ಮಾಡಿದ್ದಾರೆ.  

Latest Videos

ರಿಂಗ್ ತೋರಿಸಿ ಕಣ್ಣು ಹೊಡೆದ ಐಶ್, ಟ್ರೋಲ್ ಆಯ್ತು ಹೇರ್ ಸ್ಟೈಲ್

ಈ ಬ್ಯಾಗನ್ನು ನಿರ್ಮಿಸಲು ಸುಮಾರು 100 ಗಂಟೆಯನ್ನು ತೆಗೆದುಕೊಳ್ಳಲಾಗಿದೆ.  ಇದರ ಬೆಲೆ 2,80,000 ಡಾಲರ್ ಎಂದರೆ ಭಾರತೀಯ ರೂಪಾಯಿಗಳಲ್ಲಿ 2,34,29,924 ಕೋಟಿ ರೂಪಾಯಿ. ಸ್ಪ್ರಿಂಗ್ ಸಮ್ಮರ್ 2025 ಕೆಲಕ್ಷನ್ ಹೆಸರಿನ ಭಾಗವಾಗಿ ಈ ಬಂಗಾರದ ಬ್ಯಾಗನ್ನು ಪ್ರದರ್ಶಿಸಲಾಗಿದೆ.  ಈ ವರ್ಷದ ಆರಂಭದಲ್ಲಿ ನಿಧನರಾದ ಫ್ರೆಂಚ್ ಗಾಯಕಿ ಫ್ರಾಂಕೋಯಿಸ್ ಹಾರ್ಡಿಗಾಗಿ 1968 ರಲ್ಲಿ ರಚಿಸಲಾದ ಫ್ಯಾಶನ್ ಹೌಸ್‌ನ ಅತ್ಯಂತ ದುಬಾರಿ ಉಡುಗೆಗೆ ಮ್ಯಾಚ್ ಆಗುವಂತೆ ಈ ಬ್ಯಾಗ್‌ ಇದ್ದು, ಅವರ ಗೌರವಾರ್ಥ ವಿನ್ಯಾಸಗೊಳಿಸಿದ ಉಡುಗೆ ಇದಾಗಿತ್ತು. 1968 ರಲ್ಲಿ, ಅವರು 1,000 ಚಿನ್ನದ ಪದಕಗಳ  ಹಾಗೂ 300 ಕ್ಯಾರೆಟ್ ವಜ್ರಗಳಿಂದ ತಯಾರಿಸಲಾದ ಭಾರೀ ಪದಕದ ಗೌನ್ ಅನ್ನು ಧರಿಸಿದ್ದರು.

ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಮಾಡೆಲ್ ಜಲ್ವಾ... ಬೆನ್ನಿಗೆ ಬೆಂಕಿ ಹತ್ತಿಸಿಕೊಂಡು ಕ್ಯಾಟ್ವಾಕ್

 

 

click me!