ಮೆಟರ್ನಿಟಿ ಫೋಟೊ ಶೂಟಲ್ಲಿ ಶಾಕುಂತಲೆಯಾದ ನೇಹಾ ಗೌಡ, ಹುಟ್ಟೋದು ಭರತನಾ? ಮುದ್ದು ಗೊಂಬೆನಾ?

Published : Sep 28, 2024, 01:36 PM ISTUpdated : Sep 28, 2024, 02:14 PM IST

ಕನ್ನದ ಕಿರುತೆರೆಯ ಜನಪ್ರಿಯ ನಟಿ ಗೊಂಬೆ ಖ್ಯಾತಿಯ ನೇಹಾ ಗೌಡ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದು, ಇದೀಗ ಹೊಸದಾಗಿ ಮಾಡಿಸಿದ ಫೋಟೊ ಶೂಟ್ ವೈರಲ್ ಆಗ್ತಿದೆ.   

PREV
17
ಮೆಟರ್ನಿಟಿ ಫೋಟೊ ಶೂಟಲ್ಲಿ ಶಾಕುಂತಲೆಯಾದ ನೇಹಾ ಗೌಡ, ಹುಟ್ಟೋದು ಭರತನಾ? ಮುದ್ದು ಗೊಂಬೆನಾ?

ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನೇಹಾ ಗೌಡ, ಸೀರಿಯಲ್ ಮುಗಿದು ಹಲವು ವರ್ಷಗಳೇ ಕಳೆದರೂ ಇವತ್ತಿಗೂ ಕನ್ನಡಿಗರ ಪ್ರೀತಿಯ ಗೊಂಬೆ ಎಂದೇ ಖ್ಯಾತಿ ಪಡೆದಿದ್ದಾರೆ. ಸದ್ಯ ನಟಿ ಮನೆಯಲ್ಲಿ ಸಂಭ್ರಮದ ವಾತಾವರಣವಿದ್ದು, ಹೊಸ ಅತಿಥಿಯ ಆಗಮನಕ್ಕೆ ಕಾಯ್ತಿದ್ದಾರೆ. 
 

27

ನಟಿ ನೇಹಾ ಗೌಡ (Neha Gowda) ತುಂಬು ಗರ್ಭಿಣಿಯಾಗಿದ್ದು, ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಸಮಾರಂಭವನ್ನೂ ಸಹ ಮಾಡಲಾಗಿತ್ತು, ಚಂದನ್ ಗೌಡ ಮತ್ತು ನೇಹಾ ಗೌಡ ದಂಪತಿಗಳು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಶೇಷ ಫೋಟೊಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. 
 

37

ಇದೀಗ ಕಿರುತೆರೆಯ ಮುದ್ದಿನ ಗೊಂಬೆ ಹೊಸದಾಗಿ ಫೋಟೊ ಶೂಟ್ (Photoshoot) ಮಾಡಿಸಿಕೊಂಡಿದ್ದು, ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಬಿಳಿ ಸೀರೆಯುಟ್ಟು, ಕೆರೆಯ ಬಳಿ ಕುಳಿತು ಫೋಟೊ ತೆಗೆಸಿಕೊಂಡಿದ್ದು, ಶಾಕುಂತಲೆ ಮತ್ತೆ ಬಂದಂತೆ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ. 
 

47

ನೇಹಾ ಗೌಡ ಫೋಟೊ ಶೂಟ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಭಿಮಾನಿಗಳು ಹಾಗೂ ನೇಹಾ ಗೌಡ ಸ್ನೇಹಿತರು ತುಂಬು ಗರ್ಭಿಣಿಗೆ ಶುಭ ಹಾರೈಸಿದ್ದಾರೆ. ಕೆಲವರು ನಿಮಗೆ ಹೆಣ್ಣು ಮಗು ಆಗೋದು ಅಂದ್ರೆ, ಇನ್ನೂ ಕೆಲವರು ನಿಮಗೆ ದೇವರು ಉತ್ತಮ ಆರೋಗ್ಯ ನೀಡಲಿ, ಆರೋಗ್ಯಯುತ ಡೆಲಿವರಿ ಆಗಲಿ ಎಂದು ಹಾರೈಸಿದ್ದಾರೆ. 
 

57

ನೇಹಾ ಗೌಡ ಶಾಕುಂತಲೆ ಫೋಟೋ ಶೂಟ್ ಗೆ ಕಿರುತೆರೆಯ ನಟಿಯರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೀರ್ತಿ ಆಲಿಯಾಸ್ ತನ್ವಿರಾವ್ ಗಾಡೆಸ್ ಎಂದರೆ, ದಿವ್ಯಾ ಉರುಡುಗ (Divya Uruduga) ಎಕ್ಸ್ಟ್ರೀಮ್ಲಿ ಬ್ಯೂಟಿಫುಲ್ ಎಂದಿದ್ದಾರೆ, ಚಂದನ ಗಾರ್ಜಿಯಸ್ ಅಂದ್ರೆ, ಕೃಷಿ ತಾಪಂಡ ಕನಸಿನ ಲೋಕದಂತಿದೆ ಎಂದಿದ್ದಾರೆ. 
 

67

ಇನ್ನೂ ಕೆಲವರು ಫೋಟೊ ಶೂಟ್ ತುಂಬಾನೆ ಅದ್ಭುತವಾಗಿದೆ, ಇದನ್ನ ಕ್ರಿಯೇಟ್ ಮಾಡಿದವರಿಗೆ ಹ್ಯಾಟ್ಸಫ್, ಇದು ಪೈಂಟಿಂಗ್ ಅಥವಾ ಫೋಟೊನ ಅಂತಾನೆ ಗೊತ್ತಾಗ್ತಿಲ್ಲ ಎಂದಿದ್ದಾರೆ. ಗೊಂಬೆ, ಏಂಜಲ್ ಎಂದೆಲ್ಲಾ ಕರೆದಿದ್ದಾರೆ, ಹೆಚ್ಚಿನ ಜನರು ಮುದ್ದು ಗೊಂಬೆಗೆ ಮುದ್ದಾದ ಹೆಣ್ಣು ಗೊಂಬೆನೆ ಜನಿಸಲಿ ಎಂದು ಹಾರೈಸಿದ್ದಾರೆ. 
 

77

ಬಾಲ್ಯ ಸ್ನೇಹಿತರಾಗಿದ್ದ ನಟಿ ನೇಹಾ ಗೌಡ ಹಾಗೂ ಚಂದನ್​ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನೇಹಾ ಗೌಡ, ಕನ್ನಡ ಮತ್ತು ತಮಿಳು ಸೀರಿಯಲ್ ಗಳಲ್ಲಿ ನಟಿಸಿದ್ದರೆ, ಇವರ ಪತಿ ಚಂದನ್​ ಗೌಡ (Chandan Gowda) ಕಲರ್ಸ್​ ಕನ್ನಡದ ಅಂತರಪಟ ಸೀರಿಯಲ್​ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. 
 

Read more Photos on
click me!

Recommended Stories