ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್ಐ‌ಟಿ ದಿಢೀರ್ ದಾಳಿ: ಮಹತ್ವದ ದಾಖಲೆ ವಶಕ್ಕೆ

Published : Sep 28, 2024, 01:33 PM IST
ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್ಐ‌ಟಿ ದಿಢೀರ್ ದಾಳಿ: ಮಹತ್ವದ ದಾಖಲೆ ವಶಕ್ಕೆ

ಸಾರಾಂಶ

ಶಾಸಕ ಮುನಿರತ್ನ ವಿರುದ್ಧದ ಪ್ರಕರಣದ ತನಿಖೆಯನ್ನು ಎಸ್ ಐಟಿ ಚುರುಕುಗೊಳಿಸಿದ್ದು, ವೈಯಾಲಿಕಾವಲ್ ನಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಕಗ್ಗಲಿಪುರ ಆತ್ಯಾಚಾರ ಪ್ರಕರಣ, ಯಶವಂತಪುರ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆಯಲ್ಲಿ ಈ ದಾಳಿ ನಡೆದಿದೆ.

ಬೆಂಗಳೂರು (ಸೆ.28): ಶಾಸಕ ಮುನಿರತ್ನ ವಿರುದ್ಧದ ಪ್ರಕರಣದ ತನಿಖೆಯನ್ನು ಎಸ್ ಐಟಿ ಚುರುಕುಗೊಳಿಸಿದ್ದು, ತನಿಖಾಧಿಕಾರಿಗಳ ತಂಡ ವೈಯಾಲಿಕಾವಲ್ ನಲ್ಲಿರುವ ಮುನಿರತ್ನ ನಿವಾಸದ ಮೇಲೆ ದಿಢೀರ್‌ ದಾಳಿ  ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.

ಕಗ್ಗಲಿಪುರ ಆತ್ಯಾಚಾರ ಪ್ರಕರಣ, ಯಶವಂತಪುರ ಪ್ರಕರಣ ಹಾಗೂ ವೈಯಾಲಿಕಾವ್ ನಲ್ಲಿ ದಾಖಲಾಗಿದ್ದ ವಂಚನೆ ಹಾಗೂ ಅಟ್ರಾಸಿಟಿ ಕೇಸ್ ತನಿಖೆ ಕೈಗೊಂಡಿರೋ ಎಸ್ ಐಟಿ ತಂಡ ಎಫ್ ಎಸ್ ಎಲ್ ತಂಡಗಳ ಜೊತೆ ಬೆಳಗ್ಗೆ 7.30 ಕ್ಕೆ ಮನೆ ಮೇಲೆ ರೇಡ್ ಮಾಡಿದೆ. ಸದ್ಯ ಶಾಸಕ ಮುನಿರತ್ನ ಎಸ್ ಐಟಿ ಕಸ್ಟಡಿಯಲ್ಲಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್‌!

ಸೋಕೋ ಟೀಮ್ (FSL)ನಿಂದ ಮನೆ ಶೋಧ ಕಾರ್ಯ ನಡೆಯುತ್ತಿದ್ದು, ಎರಡು ಸೋಕಾ ಟೀಮ್ ಸೇರಿ ನಾಲ್ಕು ವಾಹನಗಳಲ್ಲಿ ಎಸ್ ಐಟಿ ತಂಡ ಬಂದಿದೆ. ಮುನಿರತ್ನ ಮನೆಯಲ್ಲಿ ದಾಖಲೆ ಹಾಗೂ ಸಾಕ್ಷ್ಯ ಸಂಗ್ರಹ ಮಾಡುತ್ತಿದೆ. ಹೊರ ಜಿಲ್ಲೆಗಳಿಂದ ಎಫ್ ಎಸ್ ಎಲ್ ತಂಡವನ್ನು ಕರೆಸಿಕೊಂಡು ಸರ್ಕಾರಿ ಪಂಚರ್ ಗಳೊಂದಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಪ್ರಕರಣಗಳ ಸಂಬಂಧ ದಾಖಲೆಗಳು, ಟೆಕ್ನಿಕಲ್ ಎವಿಡೆನ್ಸ್ ಗಳ ಶೋಧ ನಡೆಸಿ ಸಂಗ್ರಹ ಮಾಡಲಾಗುತ್ತಿದೆ. 

ಮುಖ್ಯವಾಗಿ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ  ನಡೆಯುತ್ತಿದೆ. ತನಿಖಾಧಿಕಾರಿ ಡಿವೈಎಸ್ಪಿ ಕವಿತಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮೂರು ಕೇಸ್ ಗಳ ಸಂಬಂಧ ಈ ದಾಳಿಯಾಗಿದೆ. ಮುನಿರತ್ನ ವೈಯಾಲಿ ಕಾವಲ್ ಮನೆ ಮೇಲೆ  SITಯ 15 ಪೊಲೀಸರಿಂದ ದಾಳಿಯಾಗಿದ್ದು, ಮನೆ ಮಾತ್ರವಲ್ಲದೆ ಏಕಕಾಲಕ್ಕೆ  ಮುನಿರತ್ನ ಆಪ್ತರು ಸೇರಿ 11 ಕಡೆ ಎಸ್ ಐಟಿ ತಂಡ ದಾಳಿ ನಡೆಸಿದೆ.

ಹೊಸೂರು ಟಾಟಾ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ, ಬೆಂಕಿ ನಂದಿಸಲು ಹರಸಾಹಸ!

ಯಶವಂತಪುರ ದಲ್ಲಿರುವ ಮುನಿರತ್ನ ಆಪ್ತ ಕಿರಣ್‌ ಕುಮಾರ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಎಸ್ ಐಟಿ ದಾಳಿ ಹಿನ್ನಲೆ ಭದ್ರತೆಗಾಗಿ ಸ್ಥಳೀಯ ಪೊಲೀಸರ ನಿಯೋಜನೆ ಮಾಡಲಾಗಿದೆ. ವೈಯಾಲಿಕಾವಲ್ ಠಾಣೆ ಇನ್ಸ್ ಪೆಕ್ಟರ್ ಶಂಕರಗೌಡ  ಕೂಡ ಮುನಿರತ್ನ ಮನೆಗೆ ಆಗಮಿಸಿದ್ದಾರೆ. ಮುನಿರತ್ನ ನಿವಾಸದ ಹಿಂದಿನ ಕಚೇರಿಗೆ ಕೂಡ ಎಸ್ಪಿ ಸೌಮ್ಯ ಲತಾ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮುನಿರತ್ನ ಕಚೇರಿಗೆ ಬಂದ ಮಹಜರ್ ಹಾಗೂ ಪಂಚನಾಮೆ ಜೊತೆಗೆ ಕಚೇರಿ ಪರಿಶೀಲನೆಗೆ  ಸರ್ಕಾರಿ ಪಂಚರ್ ಗಳ ಮತ್ತೊಂದು ತಂಡ ಆಗಮಿಸಿದೆ. 

ಡಾಲರ್ಸ್ ಕಾಲೋನಿಯ ಕೇಬಲ್ ಆಫೀಸ್ ,ಆರ್.ಆರ್.ನಗರ ಆಫೀಸ್, ಮಲೇಶ್ವರಂ ಬಳಿ ಹೊಸ ಮನೆ ,ಕಚೇರಿ ,ಜೆ.ಪಿ.ಪಾರ್ಕ್ ಬಳಿಯ ಕೇಬಲ್ ಕಚೇರಿ ಸೇರಿ 11 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.  ಮುನಿರತ್ನಗೆ ಸೇರಿದ ಕಚೇರಿ ಮೇಲೆ SIT ದಾಳಿ ಹಿನ್ನಲೆ ಜೆಪಿ ಪಾರ್ಕ್ ಬಳಿ  ಎಸ್ಪಿ ಸೌಮ್ಯಲತಾ ಆಗಮಿಸಿದ್ದಾರೆ. 

ಇನ್ನು ಇದೇ ವೇಳೆ ಎಸ್ ಐಟಿ ತಂಡ ತನಿಖೆ ಹಿನ್ನೆಲೆ ಮುನಿರತ್ನ ಮನೆಗೆ  ವಕೀಲರು ಆಗಮಿಸಿದ್ದು, ವಕೀಲರನ್ನು ವೈಯಾಲಿಕಾವಲ್  ಪೊಲೀಸರು ಒಳಗೆ ಬಿಡಲಿಲ್ಲ. ಯಾರನ್ನು ಕೂಡ ಒಳಗೆ ಬಿಡದೆ ಸೋಕೋ ಟೀಂ ಸ್ಥಳದಲ್ಲೇ ಬಿಡು ಬಿಟ್ಟಿದೆ.  ದಾಳಿ ವೇಳೆ ಸೋಕೋ ಟೀಂ ಪೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ