ಎಷ್ಟೇ ಕೆಲಸ ಮಾಡಿದ್ರೂ ನಗುತ್ತಲೇ ಇರಬೇಕಂತೆ, ಒಳ್ಳೆ ಪತ್ನಿ ಆಗುವುದು ಹೇಗೆ ಅಂತ ಪಟ್ಟಿ ಕೊಟ್ಟ ಅತ್ತೆಗೆ ನೆಟ್ಟಿಗರಿಂದ ತರಾಟೆ

By Mahmad RafikFirst Published Sep 28, 2024, 11:46 AM IST
Highlights

ಮನೆಗೆ ಬಂದ ಸೊಸೆಗೆ ಒಳ್ಳೆಯ ಪತ್ನಿ ಹೇಗಾಬೇಕು ಎಂಬುದರ ಬಗ್ಗೆ ಅತ್ತೆ ಸಲಹೆಯ ಪಟ್ಟಿಯನ್ನು ನೀಡಿದ್ದಾರೆ. ಈ ಪಟ್ಟಿ ನೋಡಿದ ನೆಟ್ಟಿಗರು ಇದು ಜೈಲಿಗಿಂತ ಕಠಿಣ ಜೀವನ ಎಂದು ಕಮೆಂಟ್  ಮಾಡಿದ್ದಾರೆ.

ಹೊಸದಾಗಿ ತಮ್ಮ ಮನೆಗೆ ಬಂದ ಸೊಸೆಗೆ ಬೀಗದ ಕೈ ಕೊಟ್ಟು ಮನೆಯ ಜವಾಬ್ದಾರಿ ನಿನ್ನದೇ ಎಂದು ಹೇಳುವ ಅತ್ತೆಯನ್ನು ನೋಡಿರ್ತೀರಾ. ಆದರೆ ಇಲ್ಲೊಬ್ಬ ಅತ್ತೆ ತನ್ನ ಸೊಸೆಗೆ ‘ಒಳ್ಳೆಯ ಪತ್ನಿ ಆಗುವುದು ಹೇಗೆ’ ಎಂಬುದರ ಬಗ್ಗೆ ದೊಡ್ಡದೊಂದು ಪಟ್ಟಿಯನ್ನೇ ಕೊಟ್ಟಿದ್ದಾರೆ. ಆ ಪಟ್ಟಿಯಲ್ಲಿ ಬೆಳಗ್ಗೆ 5 ಗಂಟೆಗೆ ಅಲಾರಂ ಆಫ್‌ ಮಾಡುವುದರಿಂದ ಸಂಜೆ ಊಟ ತಯಾರಿಸುವವರೆಗೂ ಏನೆಲ್ಲಾ ಮಾಡಬೇಕು ಎಂಬುದನ್ನು ಬರೆದಿದೆ ಎಂದು ಸೊಸೆ ಇನ್‌ಸ್ಟಾದಲ್ಲಿ ಆ ಪಟ್ಟಿಯ ಫೋಟೊಗಳನ್ನು ಶೇರ್‌ ಮಾಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ಫೋಟೋದಲ್ಲಿ ದಿನನಿತ್ಯದ ಕೆಲಸ ಹೇಗಿರಬೇಕೆಂದು ವಿವರಿಸಲಾಗಿದೆ. ದಿನಚರಿ ಬೆಳಗ್ಗೆ 5 ಗಂಟೆಯಿಂದ ಆರಂಭವಾಗಬೇಕು ಎಂದು ಸೊಸೆಗೆ ಅತ್ತೆ ಸಲಹೆ ನೀಡಿದ್ದಾರೆ. ಪ್ರತಿದಿನ ಬೆಳಗ್ಗೆಯ ತಿಂಡಿಯಲ್ಲಿ ಮೊಟ್ಟೆ, ಟೋಸ್ಟ್, ಬೇಕನ್ ಮತ್ತು ಫ್ರೆಶ್ ಕಾಫಿ ಇರಬೇಕು. ಈ ಎಲ್ಲಾ ತಿಂಡಿ ಬೆಳಗ್ಗೆ 5.30ರ ವೇಳೆಗೆ ಟೇಬಲ್ ಮೇಲಿರಬೇಕು. ಇದರ ನಂತರ ವ್ಯಾಯಾಮದ ಬಗ್ಗೆಯೂ ಪತ್ರದಲ್ಲಿ ಹೇಳಲಾಗಿದೆ. 

Latest Videos

ಪ್ರತಿದಿನ ಬೆಳಗ್ಗೆ 6 ರಿಂದ 7 ಗಂಟೆಯವರೆಗೆ ಫಿಟ್ ಆಗಿರಲು ಜಿಮ್ ಮಾಡಬೇಕು. ನಂತರ 7.30ರಿಂದ 9.30ರೊಳಗೆ ಮನೆಯ ಸ್ವಚ್ಛತಾ ಕೆಲಸಗಳನ್ನು ಮಾಡಿಕೊಳ್ಳಬೇಕು. ಇದರಲ್ಲಿ ಕಸ ಗುಡಿಸುವಿಕೆ, ಧೂಳು ತೆಗೆಯುವುದು, ನೆಲ ಒರಿಸೋದು ಸೇರಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆಳಗ್ಗೆ 10ರೊಳಗೆಯೇ ಬಟ್ಟೆಗಳನ್ನು ತೊಳೆಯಬೇಕು. ಆ ದಿನದ ಬಟ್ಟೆಯನನ್ನು ಆವತ್ತೆ ತೊಳೆಯಬೇಕು ಎಂದು ಅತ್ತೆ ಹೇಳಿದ್ದಾರೆ. 

ಮನೆಯ ಎಲ್ಲಾ ಸ್ವಚ್ಛತಾ ಕೆಲಸಗಳು ಮುಗಿದ ನಂತರ ಪ್ರೀತಿಯ ಗಂಡನಿಗೆ ಮಧ್ಯಾಹ್ನದ ಊಟವನ್ನು ಸಿದ್ಧಪಡಿಸಬೇಕು. ಗಂಡ ಮನೆಯಲ್ಲಿದ್ದರೆ ಮಧ್ಯಾಹ್ನದ ಊಟಕ್ಕೆ ರೆಡಿ ಮಾಡಬೇಕು. ಇಲ್ಲವಾದರೆ ರಾತ್ರಿಯ ಊಟಕ್ಕೆ ಸಿದ್ಧತೆ ಮಾಡಬೇಕು. ಕೆಲಸಕ್ಕೆ ಹೋಗುವಾಗ ಊಟ ತೆಗೆದುಕೊಂಡು ಹೋಗುವಂತೆಯೂ ಮುತುವರ್ಜಿ ತೆಗೆದುಕೊಳ್ಳಬೇಕು.  ರಾತ್ರಿಯ ಊಟ ಸಂಜೆ 6.30ರಷ್ಟರಲ್ಲಿ ಟೇಬಲ್ ಮೇಲಿರಬೇಕು. ಪ್ರತಿದಿನ ಪ್ರೆಶ್ ಅಡುಗೆಯನ್ನೇ ತಯಾರಿಸಬೇಕು. ಹೊರಗಿನ ಆಹಾರವನ್ನು ಮನೆಗೆ ತರಲು ಅನುಮತಿ ನೀಡಲ್ಲ. 

ಸುಧಾಮೂರ್ತಿ ಸೊಸೆ ಬಗ್ಗೆ ಹೇಳೋ ಮಾತು ಏನ್‌ ಗೊತ್ತಾ?

ಅತ್ತೆಯ ಸೂಚನೆ ಇಲ್ಲಿಗೆ ಮುಗಿದಿಲ್ಲ.  ಒಂದು ಪತಿ ಮನೆಗೆ ಅತಿಥಿಗಳನ್ನು ಕರೆದುಕೊಂಡು ಬಂದ್ರೆ ಅವರಿಗಾಗಿ ತಿಂಡಿ ಮತ್ತು ಪಾನೀಯದ ವ್ಯವಸ್ಥೆಯನ್ನು ಮಾಡಬೇಕು. ಬೆಳಗ್ಗೆ ಬೇಗ ಏಳಬೇಕಿರುವ ಕಾರಣ ರಾತ್ರಿ 10 ಗಂಟೆಗೆ ಮಲಗಬಹುದು. ಮನೆ ಸ್ವಚ್ಛವಾಗಿದ್ದು, ಮಧ್ಯಾಹ್ನ ಅಡುಗೆ ಮಾಡಿರಬೇಕು ಮತ್ತು ಗಂಡ ಸಂತುಷ್ಟನಾಗಿರಬೇಕು. ಪತ್ರದ ಕೊನೆಗೆ ನಿನಗೆ ಎಷ್ಟೇ ಧಣಿವು ಆಗಿದ್ದರೂ ನಗುತ್ತಿರಬೇಕು. ಒಳ್ಳೆಯ ಪತ್ನಿ ಮನೆಯನ್ನು ಒತ್ತಡದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. 

ಇನ್‌ಸ್ಟಾಗ್ರಾಮ್ ಮತ್ತು ಥ್ರೆಡ್‌ನಲ್ಲಿ ಅತ್ತೆಯ ಸಲಹೆ ನೋಡಿದ ನೆಟ್ಟಿಗರು, ಇದೊಂದು ಹುಚ್ಚುತನ, ಈ ರೀತಿಯಾದ್ರೆ ಉಸಿರಾಡಲೂ ಸಹ ಆಗಲ್ಲ. ಜೈಲಿನ ಜೀವನಕ್ಕಿಂತ ಇದು ಅತ್ಯಂತ ಕಠಿಣವಾದ ಬದುಕು ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಮಗನಿಗೆ ಮದ್ವೆ ಮಾಡ್ತಾ ಇದೀರಾ? ಹುಷಾರು, ಇಂಥಾ ಸೊಸೆ ಅತ್ತೆ-ಮಾವನ ಜೀವನ ನರಕ ಮಾಡಿಬಿಡ್ತಾಳೆ

click me!