ವೀಡಿಯೋ ಫಟೀಗ್‌ ನಿಮಗೂ ಇದೆಯಾ?

First Published Jun 11, 2020, 9:41 AM IST

ಇದು ಲಾಕ್‌ಡೌನ್‌ ಕಾಲದ ಸಮಸ್ಯೆ. ವರ್ಕಿಂಗ್‌ ಫ್ರಮ್‌ ಹೋಮ್‌ ಅವಧಿಯಲ್ಲಿ ಹೆಚ್ಚೆಚ್ಚು ವಚ್ರ್ಯುವಲ್‌ ಮೀಟಿಂಗ್‌ಗಳು, ವೀಡಿಯೋ ಚಾಟ್‌ಗಳಿಂದ ಒತ್ತಡ ಹೆಚ್ಚಾಗುತ್ತೆ. ಇದರ ಜೊತೆಗೆ ಮನೆ ಕೆಲಸ, ಮಕ್ಕಳ ಕಿರಿಕಿರಿಯೂ ಸೇರಿದರೆ ತಲೆ ಚಿತ್ರಾನ್ನ. ಜೊತೆಗೆ ನಾವು ಬಳಸುವ ಗ್ಯಾಜೆಟ್‌ಗಳಲ್ಲಿನ ನೀಲ ಕಿರಣಗಳು ಮಿದುಳಿನಲ್ಲಿರುವ ನಿದ್ರೆಗೆ ಕಾರಣವಾಗುವ ಭಾಗಕ್ಕೇ ನೇರವಾಗಿ ಹಾನಿ ಮಾಡುತ್ತದೆ. ಇದರಿಂದ ನಿದ್ರಾಹೀನತೆ ಬರುತ್ತೆ. ಈ ಎಲ್ಲ ಕಾರಣಕ್ಕೆ ಕಣ್ಣು, ಮಿದುಳಿಗೆ ಆಗುವ ಬಳಲಿಕೆಯ ಪರಿಣಾಮ ‘ವೀಡಿಯೋ ಫಟೀಗ್‌’.

ಒಂದಿಷ್ಟುಟ್ರಿಕ್‌ಗಳ ಮೂಲಕ ಇದನ್ನು ನಿಯಂತ್ರಿಸಬಹುದು.

ರೂಮ್‌ನಲ್ಲಿ ಸಾಕಷ್ಟುಬೆಳಕು ಇರುವ ಹಾಗೆ ನೋಡಿಕೊಳ್ಳಿ. ಕತ್ತಲಿದ್ದರೆ ಕಣ್ಣಿಗೆ ಆಯಾಸವಾಗುತ್ತೆ.
undefined
ಕೂತಾಗ ಬೆನ್ನು ನೆಟ್ಟಗಿರಲಿ. ಆಫೀಸ್‌ನಲ್ಲಿ ಕೂತಷ್ಟೇ ಸಾವಕಾಶವಾಗಿ ಕುಳಿತುಕೊಳ್ಳಿ.
undefined
ಗಂಟೆಗೊಮ್ಮೆ ಬ್ರೇಕ್‌ ತಗೊಳ್ಳಿ. ಮನೆಯೊಳಗೇ ಐದಾರು ರೌಂಡ್‌ ಬನ್ನಿ. ಟೆರೇಸ್‌ನಲ್ಲಿ ಅಡ್ಡಾಡಿ.
undefined
ವೀಡಿಯೋ ಚಾಟ್‌ ಬದಲಿಗೆ ಇಮೇಲ್‌ ಮೂಲಕ ಸಂವಹನ ಮಾಡಲಾಗುತ್ತಾ ನೋಡಿ.
undefined
ಪರ್ಸನಲ್‌ ವೀಡಿಯೋ ಚಾಟ್‌ ಅನಿವಾರ್ಯವಾಗಿದ್ದರೆ ಮಾತ್ರ ಮಾಡಿ.
undefined
ಒಂದು ಕೆಲಸದ ನಡುವೆ ಇನ್ನೊಂದು ಕೆಲಸ ಓವರ್‌ಲ್ಯಾಪ್‌ ಮಾಡಬೇಡಿ.
undefined
ಬೆಳಗ್ಗೆ ಎದ್ದ ತಕ್ಷಣ ಸ್ಕ್ರೀನ್‌ ಮುಂದೆ ಕೂರಬೇಡಿ. ಎಕ್ಸರ್‌ಸೈಸ್‌, ಯೋಗ, ಪ್ರಾಣಾಯಾಮ ತಪ್ಪಿಸಬೇಡಿ.
undefined
ಚೆನ್ನಾಗಿ ನೀರು ಕುಡಿಯಿರಿ. ಕರೆಕ್ಟಾಗಿ ನಿದ್ದೆ ಮಾಡಿ. ನಿದ್ದೆಗೂ ಮೊದಲೇ ಒಂದಿಷ್ಟುಪುಟ ಓದಲು ಮರೆಯಬೇಡಿ.
undefined
click me!