ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಮಹಾಕಾಳೇಶ್ವರ ನಗರವಾದ ಉಜ್ಜಯಿನಿ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಇಲ್ಲಿನ ಪ್ರತಿಯೊಂದೂ ಮೂಲೆಯಲ್ಲೂ ಶಿವನೇ ವಾಸಿಸುತ್ತಿರುವಂತೆ ಕಾಣುತ್ತದೆ. ಇದೇ ಊರಲ್ಲಿ ಮತ್ತೊಬ್ಬ ಮಹಾದೇವ ಕುಳಿತಿದ್ದಾನೆ, ಅವನು ತನ್ನ ದರ್ಶನಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಸಾಲವನ್ನು ತೀರಿಸುತ್ತಾನಂತೆ. ಹೌದು, ಈ ದೇವಾಲಯವು ರಿನ್ಮುಕ್ತೇಶ್ವರ ಮಹಾದೇವ್ (Rin Mukteshwar Mahadev) ಎಂದು ಪ್ರಸಿದ್ಧವಾಗಿದೆ.
ಉಜ್ಜಯಿನಿಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಮೋಕ್ಷದಾಯಿನಿ ದೇವಾಲಯವು (Mokshadayini Temple) ಶಿಪ್ರಾ ನದಿಯ ಸುಂದರವಾದ ದಡದಲ್ಲಿದೆ. ಇಲ್ಲಿಗೆ ಬಂದು ಬೇಡಿಕೊಂಡರೆ ಸಾಲ ತೀರುತ್ತದೆ ಎನ್ನುವ ನಂಬಿಕೆ ಇದೆ. ನಿಮ್ಮ ಸಾಲವು ವರ್ಷಗಳಿಂದ ತೀರಿಸಲು ಸಾಧ್ಯವಾಗದಿದ್ದರೆ ಅಥವಾ ನೀವು ಬ್ಯಾಂಕ್ ಸಾಲಗಳಿಂದ ತೊಂದರೆಗೀಡಾಗಿದ್ದರೆ, ಒಮ್ಮೆ ನೀವು ಮಹಾದೇವನ ಈ ದೇವಾಲಯಕ್ಕೆ ಬಂದರೆ, ಸಾಲ ಬೇಗ ತೀರುತ್ತದೆ ಎನ್ನುವ ನಂಬಿಕೆ ಇದೆ. ದೇವಾಲಯದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ.
ಶನಿವಾರ ನಡೆಯುತ್ತೆ ವಿಶೇಷ ಪೂಜೆ
ಪ್ರತಿದಿನ ಇಲ್ಲಿ ಸಾಕಷ್ಟು ಭಕ್ತರು ಸೇರುತ್ತಾರೆ, ಆದರೆ ಶನಿವಾರ, ಪೂಜೆಗೆ ವಿಶೇಷ ಮಹತ್ವವಿದೆ. ಪ್ರಾಚೀನ ನಗರವಾದ ಉಜ್ಜಯಿನಿಯಲ್ಲಿ, ರಿನ್ಮುಕ್ತೇಶ್ವರ ಮಹಾದೇವನು ಭಕ್ತರ ಸಂಕಷ್ಟವನ್ನು ಪರಿಹರಿಸುತ್ತಾನೆ. ನೀವು ದೊಡ್ಡ ಸಾಲವನ್ನು ಹೊಂದಿದ್ದರೆ ಮತ್ತು ಎಲ್ಲಾ ರೀತಿಯ ಕ್ರಮಗಳ ನಂತರವೂ ಅದನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಶನಿವಾರ ಭಗವಾನ್ ರಿನ್ಮುಕ್ತೇಶ್ವರನ ಆಶ್ರಯಕ್ಕೆ ಹೋಗಿ ಭಕ್ತಿಯಿಂದ ಬೇಡಿಕೊಂಡರೆ ಸಾಲಮುಕ್ತಿಯಾಗುತ್ತದೆ.
ಹಳದಿ ಪೂಜೆ
ಇಲ್ಲಿ ಶನಿವಾರ, ಹಳದಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ, ಹಳದಿ ಪೂಜೆ ಎಂದರೆ ಕಡಲೆಬೇಳೆ, ಹಳದಿ ಹೂವುಗಳು, ಅರಿಶಿನ ಉಂಡೆಗಳು ಮತ್ತು ಸ್ವಲ್ಪ ಬೆಲ್ಲವನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ನೀರಿನ ಹೊಳೆಯಲ್ಲಿ ಬಿಡಬೇಕು ಮತ್ತು ಸಾಲವನ್ನು ನಿವಾರಿಸಲು ಶಿವನನ್ನು (Lord Shiv) ಪ್ರಾರ್ಥಿಸಬೇಕು. ಇದರಿಂದ ಸಾಲ ಆದಷ್ಟು ಬೇಗ ನಿವಾರಣೆಯಾಗುತ್ತದೆ. ಈ ದೇಗುಲಕ್ಕೆ ದೂರ ದೂರದ ಊರುಗಳಿಂದ ಭಕ್ತರು ಬಂದು ಸಮಸ್ಯೆಗೆ ಪರಿಹಾರ ಪಡೆಯುತ್ತಾರೆ.
ಕಥೆ ಏನು ಹೇಳುತ್ತೆ ಗೊತ್ತಾ?
ಸತ್ಯಯುಗದಲ್ಲಿ, ರಾಜ ಹರಿಶ್ಚಂದ್ರನು ರಿನ್ಮುಕ್ತೇಶ್ವರ ಮಹಾದೇವನನ್ನು ಪೂಜಿಸಿದನು, ನಂತರವೇ ಅವನು ಸಾಲದಿಂದ ಮುಕ್ತನಾದನು ಎಂದು ಹೇಳಲಾಗುತ್ತದೆ. ಹರಿಶ್ಚಂದ್ರರು ಖಡ್ಗಮೃಗದ ತೂಕಕ್ಕೆ ಸಮನಾದ ಚಿನ್ನವನ್ನು ಋಷಿ ವಿಶ್ವಾಮಿತ್ರನಿಗೆ (Vishwamitra) ದಾನ ಮಾಡಬೇಕಾಗಿತ್ತು, ಆದರೆ ಅದು ಸಾಧ್ಯವಾಗಿರಲಿಲ್ಲ, ನಂತರ ಅವರು ಶಿಪ್ರಾ ದಡದಲ್ಲಿ ರಿಮುಕ್ತೇಶ್ವರ ಮಹಾದೇವನನ್ನು ಪೂಜಿಸಿದರು. ಇದಾದ ನಂತರ ಅವರು ಸಾಲದಿಂದ ಮುಕ್ತಿ ಪಡೆದರು ಎಂದು ಐತಿಹಾಸಿಕ ಕಥೆಗಳು ಹೇಳುತ್ತವೆ.
ಈ ಮಂತ್ರವನ್ನು ಪಠಿಸಿ
ಭಕ್ತರು ಶಿಪ್ರಾ ನದಿ ದಡದಲ್ಲಿ ನಿಂತು, ಹಳದಿ ವಸ್ತುಗಳನ್ನೆಲ್ಲಾ ಕೈಯಲ್ಲಿ ಹಿಡಿದು, 'ಓಂ ರಿನ್ಮುಕ್ತೇಶ್ವರ ಮಹಾದೇವಾಯ ನಮಃ' ಮಂತ್ರವನ್ನು ಭಕ್ತಿಯಿಂದ ಪಠಿಸಿ ಆ ವಸ್ತುಗಳನ್ನು ನೀರಿನಲ್ಲಿ ಬಿಡಬೇಕು. ಇದರಿಂದ ಸಾಲದ ಋಣದಿಂದ ಮುಕ್ತಿ ಪಡೆಯುತ್ತಾರೆ.