ಸತತ ಮಳೆಗೆ ಮಾರ್ಕೋನಹಳ್ಳಿ ಕಿರು ಜಲಾಶಯ ಭರ್ತಿಯಾಗಿದೆ. ಇದರ ಬೆನ್ನಲ್ಲಿಯೇ ಸ್ವಯಂ ಚಾಲಿತ ಸೈಫನ್ ಮೂಲಕ ನೀರು ಹೊರಹೋಗಲು ಅರಂಭಿಸಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಪ್ರಸಿದ್ದ ಮಾರ್ಕೋನಹಳ್ಳಿ ಜಲಾಶಯಕ್ಕೆ 1527 ಕ್ಯೂಸೆಕ್ ಒಳ ಹರಿವು ಬಂದಿವೆ.
ಜಲಾಶಯಕ್ಕೆ ಒಳಹರಿವು ಹೆಚ್ಚಳ ಹಿನ್ನೆಲೆ ಸ್ವಯಂ ಚಾಲಿತ ಸೈಫನ್ ಓಪನ್ ಓಪನ್ ಆಗಿದೆ. ಜಲಾಶಯದ ಎರಡು ಸ್ವಯಂ ಚಾಲಿತ ಸೈಫನ್ ಲಾಕ್ ಓಪನ್ ಆಗಿದೆ.ಒಟ್ಟು 2.4 ಟಿಎಮ್ ಸಿ ಸಾಮರ್ಥ್ಯದ ಜಲಾಶಯ ಇದಾಗಿದ್ದು, ಹೆಚ್ಚು ನೀರು ಜಲಾಶಯಕ್ಕೆ ಬಂದ ಹಿನ್ನಲೆಯಲ್ಲಿ ಸೈಫನ್ ಓಪನ್ ಆಗಿದೆ.
ಹಾಗಾಗಿ ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆಯನ್ನೂ ನೀಡಲಾಗಿದೆ. ಮಾರ್ಕೋನಹಳ್ಳಿ, ಕಾಡುಶೆಟ್ಟಿಹಳ್ಳಿ,ಬಿಸಿನೆಲೆ,ತೊರೆಹಳ್ಳಿ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಿಗೆ ಎಚ್ಚರಿಕೆಯಿಂದ ಇರುವಂತೆ ತಹಶಿಲ್ದಾರ್ ಸೂಚನೆ ನೀಡಿದ್ದಾರೆ.
ಜಲಾಶಯ ತುಂಬಿದ ಹಿನ್ನೆಲೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಕುಣಿಗಲ್ ಶಾಸಕ ಡಾ ರಂಗನಾಥ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ರಿಂದ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದ್ದಾರೆ. ಮಾರ್ಕೋನಹಳ್ಳಿ ಜಲಾಶಯಕ್ಕೆ ಹಾಗೂ ಕುಣಿಗಲ್ ದೊಡ್ಡಕೆರೆಗೆ ಬಾಗಿನ ಅರ್ಪಿಸಲಾಗಿದೆ.
ಮಾರ್ಕೋನಹಳ್ಳಿ ಅಣೆಕಟ್ಟು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಶಿಂಷಾ ನದಿಯ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ.ಈ ಅಣೆಕಟ್ಟೆಯನ್ನು 1942ರಲ್ಲಿ ಮೈಸೂರು ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ತನ್ನ ದಿವಾನರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯರವರ ಮಾರ್ಗದರ್ಶನದಲ್ಲಿ ಕಟ್ಟಿದ್ದರು.
ಅಣೆಕಟ್ಟು ಸುಮಾರು 4000 ಹಳ್ಳಿಗಳ ಕೃಷಿಗೆ ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಶಿಂಷಾ ನದಿ ಕಾವೇರಿ ನದಿಯ ಉಪನದಿ ಮತ್ತು ತುಮಕೂರು ಜಿಲ್ಲೆಯ ಮೂರು ನದಿಗಳಲ್ಲಿ ಒಂದು. ಇದು 6070 ಹೆಕ್ಟೇರ್ ಭೂಮಿಗೆ ನೀರಾವರಿ ಉಣಿಸುತ್ತದೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು?