Economic corridor:ದಿಲ್ಲಿಯಿಂದ ಡೆಹ್ರಡೂನ್‌ಗೆ ಕೇವಲ 2.5 ಗಂಟೆ ಪ್ರಯಾಣ, 18,000 ಕೋಟಿ ಯೋಜನೆಗೆ ಮೋದಿ ಶಂಕುಸ್ಥಾಪನೆ!

First Published Dec 1, 2021, 7:30 PM IST
  • ಡಿಸೆಂಬರ್ 4ಕ್ಕೆ ದೆಹಲಿ ಡೆಹ್ರಡೂನ್ ಕಾರಿಡಾರ್‌ಗೆ ಮೋದಿ ಶಿಲನ್ಯಾಸ
  • 6 ಗಂಟೆಗೂ ಹೆಚ್ಚು ಕಾಲ ಹಿಡಿಯುವ ಪ್ರಯಾಣ ಇನ್ನು ಸುಲಭ
  •  18,000 ಕೋಟಿ ರೂಪಾಯಿ ವೆಚ್ಚದ 11 ಯೋಜನೆಗೆ ಮೋದಿ ಶಂಕುಸ್ಥಾಪನೆ

ನವದೆಹಲಿ(ಡಿ.01): ಭಾರತದಲ್ಲಿ ವಿಶ್ವದ ದರ್ಜೆ ಮಟ್ಟದ ರಸ್ತೆ ನಿರ್ಮಾಣಗೊಳ್ಳುತ್ತಿದೆ. ಈಗಾಲೇ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಭರದಿಂದ ಸಾಗಿದೆ. ಅಸಾಧ್ಯವಾಗಿರುವ ಹಲವ ಯೋಜನೆಗಳನ್ನು ಕೇಂದ್ರ ಪೂರ್ಣಗೊಳಿಸಿದೆ. ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ವನ್ಯ ಮೃಗಳ ಕಾರಿಡಾರ್ ಸೇರಿದಂತೆ ಅಭಿವೃದ್ಧಿಶೀಲ ದೇಶದಲ್ಲಿರುವ ವ್ಯವಸ್ಥೆಗಳನ್ನು ಭಾರತದಲ್ಲೂ ನಿರ್ಮಾಣಮಾಡಲಾಗಿದೆ. ಇದಕ್ಕೆ ಮತ್ತೊಂದು ಯೋಜನೆ ಸೇರಿಕೊಳ್ಳುತ್ತಿದೆ. ಹೌದು ಡಿಸೆಂಬರ್ 4 ರಂದು ಪ್ರಧಾನಿ ನರೇಂದ್ರ ಮೋದಿ ದೆಹಲಿ ಹಾಗೂ ಡೆಹ್ರಡಾನ್ ನಡುವಿನ ಎಕಾನಾಮಿಕ್ ಕಾರಿಡಾರ್ ಯೋಜನೆ  ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಡಿಸೆಂಬರ್ 4 ರಂದು ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 18,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಜೊತೆಗೆ 11 ವಿವಿಧ ಮೂಲ ಸೌಕರ್ಯ ಅಭಿವೃದ್ಧಿಯೋಜನೆಗೆ ಮೋದಿ ಶಂಕುಸ್ಥಾನೆ ಮಾಡಲಿದ್ದಾರೆ. 

8,300 ಕೋಟಿ ರೂಪಾಯಿ ದಹೆಲಿ ಹಾಗೂ ಡೆಹ್ರಡೂನ್ ಎಕಾನಾಮಿಕ್ ಕಾರಿಡಾರ್‌ಗೆ ಮೀಸಲಿಡಲಾಗಿದೆ. ಸದ್ಯ ದಹಲಿಯಿಂದ ಡೆಹ್ರಡೂನ್ ಪ್ರಯಾಣಕ್ಕೆ 280 ಕಿಲೋಮೀಟರ್ ದೂರವಿದೆ. ತಗಲುವ ಸಮಯ  6 ಗಂಟೆ. ಆದರೆ ಹೊಸ ಎಕಾನಮಿಕ್ ಕಾರಿಡಾರ್‌ನಿಂದ ಈ ಪ್ರಯಾಣದ ಸಮಯ ಕೇವಲ 2.5 ಗಂಟೆಗ ಇಳಿಯಲಿದೆ. 

ದೆಹಲಿ ಡೆಹ್ರಡೂನ್ ಕಾರಿಡಾರ್ ಯೋಜನೆ ಹಲವು ವಿಶೇಷತೆ ಹೊಂದಿದೆ. ಈ ಕಾರಿಡಾರ್ ಏಷ್ಯಾದ ಅತೀ ದೊಡ್ಡ ವನ್ಯಜೀವಿ ಎಲಿವೇಟೆಡ್ ಕಾರಿಡಾರ್ ಹೊಂದಿರಲಿದೆ. 12 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ವನ್ಯಜೀವಿಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಮಾಡಲಾಗುತ್ತಿದೆ.

ದಾತ್ ಕಾಳಿ ಮಂದಿರದಿಂದ ಡೆಹ್ರಡೂನ್ ವರೆಗೆ 340 ಮೀಟರ್ ಉದ್ದರ ಸುರಂಗ ಕೊರೆಯಲಾಗುತ್ತದೆ.  ಇನ್ನು ಗಣೆೇಶಪುರದ ಬಳಿಯೂ ವನ್ಯಪ್ರಾಣಿಗಳ ಸಂಚಾರಕ್ಕೆ ಅನುವುಮಾಡಿಕೊಡಲು ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಅಪಘಾತದಲ್ಲಿ ವನ್ಯಪ್ರಾಣಿಗಳು ಸಾವನ್ನಪ್ಪುತ್ತಿರುವ ಪ್ರಕರಣಕ್ಕೆ ಕಡಿವಾಣ ಹಾಕಲು ದುಬಾರಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಈ ರಸ್ತೆಯಲ್ಲಿ ಮಳೆ ನೀರು ಕೊಯ್ಲು ಯೋಜನೆಯನ್ನು ಜಾರಿಗೊಳಿಸುವ ಮೂಲಕ ಅಂತರ್ಜಲ ಮಟ್ಟ ಏರಿಸುವ ಕಾರ್ಯವು ಆಗಲಿದೆ. ಈ ಕಾರಿಡಾನ್ ಯೋಜನೆಯಿಂದ ಸಹರಾನ್‌ಪುರದಿಂದ ಭದ್ರಾಬಾದ್, ಹರಿದ್ವಾರಕ್ಕೆ ಸಂಪರ್ಕಿಸುವ ಯೋಜನೆಯನ್ನು ಬರೋಬ್ಬರಿ 2,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ.
 

ಲಕ್ಷಂ ಜೂಲಾ ಬಳಿ ಗಂಗಾ ನದಿಗೆ ಅಡ್ಡಲಾಗಿ 1929ರಲ್ಲಿ ಸೇತುವೆ ಕಟ್ಟಲಾಗಿದೆ. ಹಳೆಯ ಸೇತುವೆ ಕುಸಿಯುವ ಅಪಾಯದಲ್ಲಿದೆ. ಹೀಗಾಗಿ ಸೇತುವೆ ಮುಚ್ಚಲಾಗಿದೆ. ಇದೀಗ ಮೋದಿ ಶಂಕುಸ್ಥಾಪನೆ ನೆರವೇರಿಸುತ್ತಿರುವ 11 ಯೋಜನೆಗಳಲ್ಲಿ ಈ ಸೇತುವೆಯೂ ನಿರ್ಮಾಣವಾಗಲಿದೆ. 
 

ದೆಹಲಿ ಹಾಗೂ ಡೆಹ್ರಡೂನ್ ಎಕನಾಮಿಕ್ ಯೋಜನೆ ಹರಿದ್ವಾರ, ಮುಜಾಫರ್‌ನಗರ, ಶಾಮ್ಲಿ, ಯಮುನಗರ, ಬಾಗ್‌ಪತ್, ಮೀರತ್ ಮತ್ತು ಬರೌತ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ 7 ಇಂಟರ್‌ಚೇಂಜ್ ಹೊಂದಿದೆ. ಈ  ಮೂಲಕ ದೇಶದ ಮೂಲೆ ಮೂಲೆಗೆ ಸಂಪರ್ಕ ಸುಲಭವಾಗಲಿದೆ.

click me!