ಮತ್ತೆ ಸಿನಿಮಾ ಮಾಡ್ತೀನಾ? ಗೊತ್ತಿಲ್ಲ. ಮತ್ತೆ ಸೀರಿಯಲ್? ಅದೂ ಗೊತ್ತಿಲ್ಲ. ಕಾರಣ, ನನಗೆ ಈಗ ರಿಯಾಲಿಟಿ ಶೋಗಳಲ್ಲಿ ಸಿಗುತ್ತಿರುವ ರೆಮ್ಯುನರೇಶನ್ ಅಲ್ಲಿ ಸಿಗುತ್ತಾ? ಖಂಡಿತ ಇಲ್ಲ ಅನ್ಸುತ್ತೆ.. ಅದಕ್ಕೇ ಸದ್ಯ ರಿಯಾಲಿಟಿ ಶೋಗಳಿಗೇ ಫಿಕ್ಸ್ ಆಗಿದೀನಿ.
ನಟಿ, ನಿರೂಪಕಿ ಅನುಪಮಾ ಗೌಡ ಅವರು ಸಂದರ್ಶನವೊಂದರಲ್ಲಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ನಿರೂಪಕಿ ಕೇಳಿದ 'ನಿಮ್ಮ ಜೀವನ ಹೇಗೆ ನಡಿತಾ ಇದೆ, ಸಿನಿಮಾ, ಸೀರಿಯಲ್, ನಿರೂಪಣೆ ಹೀಗೆ ಯಾವತ್ತೂ ಏನಾದ್ರೂ ಒಂದು ಮಾಡ್ತಾನೇ ಇರ್ತಿರಾ' ಪ್ರಶ್ನೆಗೆ ಅನುಪಮಾ ಗೌಡ ಉತ್ತರಿಸಿದ್ದಾರೆ. ನಾನು ಸುಮ್ಮನೇ ಕುಳಿತುಕೊಳ್ಳುವ ಜಾಯಮಾನದವಳಲ್ಲ. ಕೆಲಸವಿಲ್ಲದೇ ಕುಳಿತರೆ ನಾನು ಮೆಂಟಲ್ ಆಗಿಬಿಡ್ತೀನಿ. ನಮ್ಮ ಮನೆಯಲ್ಲಿ ದುಡಿಯುವ ವ್ಯಕ್ತಿ ನಾನೊಬ್ಬನೇ. ಹೀಗಾಗಿ ಏನಾದರೊಂದನ್ನು ಮಾಡುತ್ತಲೇ ಇರಬೇಕಾಗುತ್ತದೆ' ಎಂದಿದ್ದಾರೆ ಅನುಪಮಾ.
ಪ್ರಶ್ನೆಗೆ ಉತ್ತರಿಸುತ್ತ ಅನುಪಮಾ ಗೌಡ 'ಆ ಕರಾಳ ರಾತ್ರಿ' ಸಿನಿಮಾ ಮಾಡಿದ ಬಳಿಕ ನನಗೆ ಬಹಳಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದುಕೊಂಡಿದ್ದೆ. ಆದರೆ, ನಥಿಂಗ್ ಕೇಮ್, ಟೋಟಲಿ ಝೀರೋ.. ಒಂದೇ ಒಂದು ಸಿನಿಮಾ ಅವಕಾಶ ಬರಲಿಲ್ಲ ಎಂದಾಗ ನಿಜವಾಗಿಯು ನಾನು ಆತಂಕಗೊಂಡೆ. ಆದರೆ, ಕೋವಿಡ್ ಬೇರೆ ಇತ್ತು. ಬ್ಯಾಂಕಲ್ಲಿ ಇದ್ದ ಹಣ ಒಂದೇ ವರ್ಷಕ್ಕೆ ಖಾಲಿ ಆಗೋಯ್ತು. ಮುಂದೇನು ಅಂತ ಪ್ರಶ್ನೆ ಬಂದಾಗ ರಿಯಾಲಿಟಿ ಶೋಗಳು ನನ್ನ ಕೈ ಹಿಡಿತು. ಸದ್ಯಕ್ಕೆ ಆಂಕರಿಂಗ್ ಮಾಡ್ಕೊಂಡು ಹಾಯಾಗಿದೀನಿ.
ಹಲವು ವರ್ಷಗಳ ನಂತರ ಮತ್ತೆ ತೆರೆ ಮೇಲೆ ಬರಲಿರುವ ಪ್ರಣೀತಾ ಸುಭಾಷ್, ಇದ್ಯಾವ ಸಿನಿಮಾ?
ಮತ್ತೆ ಸಿನಿಮಾ ಮಾಡ್ತೀನಾ? ಗೊತ್ತಿಲ್ಲ. ಮತ್ತೆ ಸೀರಿಯಲ್? ಅದೂ ಗೊತ್ತಿಲ್ಲ. ಕಾರಣ, ನನಗೆ ಈಗ ರಿಯಾಲಿಟಿ ಶೋಗಳಲ್ಲಿ ಸಿಗುತ್ತಿರುವ ರೆಮ್ಯುನರೇಶನ್ ಅಲ್ಲಿ ಸಿಗುತ್ತಾ? ಖಂಡಿತ ಇಲ್ಲ ಅನ್ಸುತ್ತೆ.. ಅದಕ್ಕೇ ಸದ್ಯ ರಿಯಾಲಿಟಿ ಶೋಗಳಿಗೇ ಫಿಕ್ಸ್ ಆಗಿದೀನಿ. 2024 ಕಳೆದ ಮೇಲೆ ಏನು? ಮುಂದೆ ಲೈಫ್ ಹೇಗೆ ನಡ್ಯುತ್ತೆ? ಇಂತಹ ಪ್ರಶ್ನೆಗಳಿಗೆ ನನ್ ಬಳಿ ಉತ್ತರವಿಲ್ಲ. ಅಥವಾ, 'ನನಗೆ ಗೊತ್ತಿಲ್ಲ' ಎಂಬುವುದೇ ಉತ್ತರ' ಎಂದಿದ್ದಾರೆ ನಟಿ ಅನುಪಮಾ ಗೌಡ.
'ಪುಷ್ಪಾ' ಬಿಡುಗಡೆ ಟೈಂ ಟೆನ್‌ಷನ್ ಬಿಚ್ಚಿಟ್ಟ ಅಲ್ಲು ಅರ್ಜುನ್; ಥ್ಯಾಂಕ್ಯೂ ಅಂದ್ರಲ್ಲ, ಅದು ಯಾರಿಗೆ?
ಸದ್ಯ ನಟಿ, ನಿರೂಪಕಿ ಅನುಪಮಾ ಗೌಡ ಅವರು ಸ್ಟಾರ್ ಸುವರ್ಣ ವಾಹಿನಿಯ 'ಸುವರ್ಣ ಜಾಕ್‌ಪಟ್ (Suvarna Jackpot)ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 22 ವಾರಗಳು, 26 ಸಂಚಿಕೆಗಳು ಹಾಗೂ 160 ಸೆಲೆಬ್ರಿಟಿಗಳ ಮೂಲಕ ಸಾಗುತ್ತಿರುವ ಸುವರ್ಣ ಜಾಕ್‌ಪಟ್ ಶೋನಲ್ಲಿ ನಿರೂಪಕಿ ಅನುಪಮಾ ಗೌಡ ಅಕ್ಷರಶಃ ಮಿಂಚುತ್ತಿದ್ದಾರೆ. ಭವಿಷ್ಯದ ಅನಿಶ್ಚಿತತೆ ಬಗ್ಗೆ ಅರಿವಿರುವ ಅನುಪಮಾ, ಸದ್ಯ ಮಾಡುತ್ತಿರುವ ಕೆಲಸದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ನೀತೂ ಮನದಾಳದ ಮಾತು, ಏನ್ ಹೇಳಿದ್ರು ಅನ್ನೋದಕ್ಕಿಂತ ಯಾಕ್ ಹೇಳಿದ್ರು ಅಂತ ಯೋಚಿಸಿ!