ಪ್ರತಿ ಮತವೂ ಅಮೂಲ್ಯ: ಕೇವಲ 1 ಕುಟುಂಬದ 5 ಸದಸ್ಯರಿಗಾಗಿ ಲಡಾಕ್‌ನಲ್ಲಿ ಮತಗಟ್ಟೆ ಸ್ಥಾಪಿಸಿದ ಚು.ಆಯೋಗ

By Kannadaprabha News  |  First Published Apr 30, 2024, 11:05 AM IST

ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಲೇಹ್‌ ಜಿಲ್ಲೆಯ ವಾಶಿ ಎಂಬ ಕುಗ್ರಾಮದಲ್ಲಿ ವಾಸವಿರುವ ಒಂದೇ ಕುಟುಂಬದ 5 ಮಂದಿ ಸದಸ್ಯರಿಗಾಗಿ ಚುನಾವಣಾಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ.


ಶ್ರೀನಗರ: ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಲೇಹ್‌ ಜಿಲ್ಲೆಯ ವಾಶಿ ಎಂಬ ಕುಗ್ರಾಮದಲ್ಲಿ ವಾಸವಿರುವ ಒಂದೇ ಕುಟುಂಬದ 5 ಮಂದಿ ಸದಸ್ಯರಿಗಾಗಿ ಚುನಾವಣಾಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಯತೀಂಧ್ರ ಎಂ ಮಾರಲ್ಕರ್‌, ವಾಶಿ ಕುಗ್ರಾಮವು ಲೇಹ್‌ನಿಂದ 170 ಕಿಲೋಮೀಟರ್‌ ದೂರದಲ್ಲಿದೆ. ಅಲ್ಲಿ ರೈತರೊಬ್ಬರ ಕುಟುಂಬ ವಾಸವಿದ್ದು, ಅದರಲ್ಲಿ ಇಬ್ಬರು ಪುರುಷ ಮತದಾರರು ಮತ್ತು ಮೂವರು ಮಹಿಳಾ ಮತದಾರರಿದ್ದಾರೆ. ಶೇ.100 ರಷ್ಟು ಮತದಾನ ಮಾಡಿಸುವ ನಿಟ್ಟಿನಲ್ಲಿ ಕುಗ್ರಾಮದಲ್ಲಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು. ಲಡಾಖ್‌ನಲ್ಲಿ ಐದನೇ ಹಂತದಲ್ಲಿ ಮೇ.20ರಂದು ಮತದಾನ ನಡೆಯಲಿದೆ.

ಕಳಂಕಿತ ಕಾಂಗ್ರೆಸ್‌ 2ನೇ ಹಂತದಲ್ಲೇ ಸೋಲು: ಮೋದಿ

Tap to resize

Latest Videos

ಸೊಲ್ಲಾಪುರ: ಕಳಂಕಿತ ಕಾಂಗ್ರೆಸ್‌ ಹಾಗೂ ಇಂಡಿಯಾ ಕೂಟ ಮೊದಲ ಎರಡು ಹಂತದಲ್ಲಿಯೇ ನಿರ್ನಾಮಗೊಂಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಇಂಡಿಯಾ ಕೂಟದಲ್ಲಿ ನಾಯಕತ್ವಕ್ಕಾಗಿ ಮಹಾಯುದ್ಧವೇ ನಡೆಯುತ್ತಿದೆ ಎಂದು ಪ್ರಧಾನಿ ಕುಹಕವಾಡಿದ್ದಾರೆ.

ಪ್ರಜ್ವಲ್ ಪ್ರಕರಣವನ್ನು ಪ್ರಧಾನಿ ಮೋದಿ, ಬಿಜೆಪಿ ಹೊಣೆ ಹೊರಬೇಕೆಂಬುದು ಹಾಸ್ಯಾಸ್ಪದ: ಚೇತನ್ ಅಹಿಂಸಾ

ಚುನಾವಣೆ ಪ್ರಚಾರದ ಅಂಗವಾಗಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಾತನಾಡಿದ ಅವರು,‘ಇಂಡಿಯಾ ಕೂಟದಲ್ಲಿ ನಾಯಕತ್ವಕ್ಕಾಗಿ ಮಹಾಯುದ್ಧವೇ ನಡೆಯುತ್ತಿದೆ. ಆದರೆ ನೀವು 10 ವರ್ಷದ ನನ್ನ ಆಡಳಿತವನ್ನು ನೋಡಿದ್ದೀರಿ, ಪರೀಕ್ಷಿಸಿದ್ದೀರಿ. ಮತ್ತೊಂದೆಡೆ, ಕಾಂಗ್ರೆಸ್‌ ತನ್ನ 60 ವರ್ಷದ ಆಡಳಿತದಲ್ಲಿ ದೇಶಕ್ಕೆ ಭಯೋತ್ಪಾದನೆ, ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ನೀಡಿದೆ. ಈ ಕಳಂಕಗಳನ್ನು ಹೊತ್ತಿರುವ ಕಾಂಗ್ರೆಸ್‌ ಮತ್ತೆ ಚುಕ್ಕಾಣಿ ಹಿಡಿಯುವ ಹಂಬಲದಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಇಂಡಿಯಾ ಕೂಟದ ನಾಯಕತ್ವದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ,‘ಇಂಡಿಯಾ ಕೂಟದಲ್ಲಿ ನಾಯಕತ್ವಕ್ಕೆ ಮಹಾಯುದ್ಧವೇ ನಡೆಯುತ್ತಿದೆ. ಅಲ್ಲಿ ಐದು ವರ್ಷ ಒಬ್ಬಬ್ಬರು ಪ್ರಧಾನಿಯಾಗುವ ಹಂಬಲದಲ್ಲಿದ್ದಾರೆ. ಈ ಮೂಲಕ ದೇಶದ ಅಭಿವೃದ್ಧಿಯನ್ನು ಬದಿಗೊತ್ತಿ, ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ ಜೇಬು ತುಂಬಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಜನರೇ ನೀವು ಹೇಳಿ, ದೇಶದ ಚುಕ್ಕಾಣಿಯನ್ನು ಇನ್ನು ಪ್ರಧಾನಿ ಅಭ್ಯರ್ಥಿಯನ್ನೇ ಆಯ್ಕೆ ಮಾಡದವರಿಗೆ ಕೊಡುವಿರಾ? ಇಂಥಹ ತಪ್ಪನ್ನು ಮಾಡುವಿರಾ? ಎಂದು ಪ್ರಶ್ನಿಸಿದರು.

ಮೀಸಲಾತಿ ಬಗ್ಗೆ ತಿರುಚಲಾದ ಅಮಿತ್‌ ಶಾ ವಿಡಿಯೋ ಶೇರ್ ಮಾಡಿದ ತೆಲಂಗಾಣ ಸಿಎಂಗೆ ಸಂಕಷ್ಟ

click me!