ಜನವರಿ 16 ರಿಂದ ಕೊರೋನಾ ಲಸಿಕೆ ನೀಡವಿಕೆ ಆರಂಭಗೊಳ್ಳುತ್ತಿದೆ. ವಾಕ್ಸಿನೇಷನ್ ಬಳಿಕದ ಅಡ್ಡ ಪರಿಣಾಮ, ಗಮನ ಹರಿಸಬೇಕಾದ ಪ್ರಮುಖ ವಿಚಾರಗಳ ಕುರಿತು ಕೇಂದ್ರ ಆರೋಗ್ಯ ಇಲಾಖೆ ಗೈಡ್‌ಲೈನ್ಸ್ ಪ್ರಕಟಿಸಿದೆ.
undefined
18 ವರ್ಷದೊಳಗಿನವರಿಗೆ ಕೊರೋನಾ ಲಸಿಕೆ ನೀಡಬಾರದು ಎಂದಿದೆ. ಇಷ್ಟೇ ಅಲ್ಲ ಗರ್ಭಿಣಿಯರಿಗೆ, ಬಾಣಂತಿಯರಿಗೆ ಕೊರೋನಾ ವ್ಯಾಕ್ಸಿನ್ ಕೊಡುವಂತಿಲ್ಲ.
undefined
ಕೋವಿಡ್ ವ್ಯಾಕ್ಸಿನ್ ಕೊಟ್ಟ ಬಳಿಕ, ಇತರೆ ಯಾವುದೇ ಲಸಿಕೆ ಪಡೆಯುವವರಿದ್ದರೆ 14 ದಿನ ಅಂತರ ಇರಬೇಕು. ಇನ್ನು ಮೊದಲ ಡೋಸ್ ನಲ್ಲಿ ಯಾವ ಕೋವಿಶೀಲ್ಡ್ ಪಡದಿದ್ದರೆ ಎರಡನೇ ಡೋಸ್ ನಲ್ಲೂ ಕೋವಿಶೀಲ್ಡ್ ಪಡೆಯಬೇಕು. ಅನುಮತಿ ನೀಡಿದ ಎರಡೂ ಲಸಿಕೆಯನ್ನು ಬಳಸುವಂತಿಲ್ಲ.
undefined
ಹೊಸ ವೈರಸ್ ಅಥವಾ ಸೋಂಕು ಇರುವವರಿಗೆ ಲಸಿಕೆ ಕೊಡಬೇಕಾ ಬೇಡವಾ? ಅವರು ಯಾವ ನಿಯಮ ಅನುಸರಿಸಬೇಕು ಅನ್ನೋ ಕುರಿತು ಕೇಂದ್ರ ಸ್ಪಷ್ಟವಾಗಿ ಹೇಳಿದೆ. ಆರೋಗ್ಯ ಕಾರ್ಯಕರ್ತರಿಗೆ ಹೊಸ ವೈರಸ್ ತಗುಲಿದ್ದರೆ, ಚೇತರಿಸಿಕೊಂಡ ಬಳಿಕ ವ್ಯಾಕ್ಸಿನ್ ಕೊಡಬಹುದು
undefined
ಆರ್ ಟಿಪಿಸಿಆರ್ ನಲ್ಲಿ ಸೋಂಕು ದೃಢಪಟ್ಟು ಗುಣಮುಖರಾದ ಮೇಲೆ ಸುಸ್ತು, ಅನಾರೋಗ್ಯ ಇದ್ದರೂ ವ್ಯಾಕ್ಸಿನ್ ಕೊಡಬಹುದು. ಅಸ್ವಸ್ಥತೆ, ದೀರ್ಘಕಾಲದ ಖಾಯಿಲೆಯಿಂದ ಬಳಲುತ್ತಾ ಇದ್ದವರಿಗೆ ವ್ಯಾಕ್ಸಿನ್ ಕೊಡಬಹುದು.
undefined
ವ್ಯಾಕ್ಸಿನ್ ಕೊಟ್ಟಾಗ ಯಾರ ಮೇಲೆ ಹೆಚ್ಚು ನಿಗಾ ಇಡಬೇಕು ಅನ್ನೋ ಕುರಿತು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಇತರ ಆರೋಗ್ಯ ಸಮಸ್ಯೆ ಇರುವವರ ಬಗ್ಗೆ ಹೆಚ್ಚಿನ ನಿಗಾ ಇಡಬೇಕು ಎಂದಿದೆ.
undefined
ಹೈ ಬಿಪಿ, ಶುಗರ್ ಇರುವವರ ಮೇಲೆ ನಿಗಾ ವಹಿಸಲೇಬೇಕು. ಉಸಿರಾಟದ ಸಮಸ್ಯೆ ಇರುವವರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.
undefined
ಬ್ಲೀಡಿಂಗ್ ಸಮಸ್ಯೆ ಇರುವ ಇತಿಹಾಸ ಇದ್ದರೆ, ಪ್ಲೇಟ್ಲೆಟ್ಸ್ ಕಡಿಮೆ ಹೆಚ್ಚು ಕಂಡುಬಂದಿರುವ ಇತಿಹಾಸ ಇದ್ದವರ ಮೇಲೆ ಹೆಚ್ಚು ನಿಗಾ ಇಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.
undefined