
ತಮ್ಮ ಕುಟುಂಬಸ್ಥರೊಬ್ಬರ ಅನುಮಾನಾಸ್ಪದ ಸಾವಿನ ಕುರಿತು ದೂರು ದಾಖಲಿಸಲು ಹೋದರೆ, ಅದು ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ದೂರು ಸ್ವೀಕರಿಸಲು ಹಿಂದೇಟು ಹಾಕಿದ ಲೇಡಿ ಪೊಲೀಸ್ ಒಬ್ಬರಿಗೆ ಯುವಕನೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದ ಟಿಕಮ್‌ಗಢ್‌ನಲ್ಲಿ ನಡೆದಿದೆ. ರೈತರೊಬ್ಬರ ಸಾವಿನ ವಿರುದ್ಧದ ಪ್ರತಿಭಟನೆಯು ವಿಕೋಪಕ್ಕೆ ಹೋಗಿ ಈ ಘಟನೆ ಸಂಭವಿಸಿದೆ. ಅಷ್ಟಕ್ಕೂ ದೂರು ನೀಡಲು ಹೋದಾಗ ಯುವಕನ ಮೇಲೆ ಈ ಲೇಡಿ ಪೊಲೀಸ್ ಕೈ ಮಾಡಿದ್ದಾರೆ. ಆತನ ಕೆನ್ನೆಗೆ ಹೊಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರಲ್ಲಿ ಒಬ್ಬಾತ ಕಪಾಳಮೋಕ್ಷ ಮಾಡಿದರೆ ಇನ್ನೊಬ್ಬ ಪೊಲೀಸ್ ಬೆನ್ನಿಗೆ ಹೊಡದಿದ್ದಾನೆ. ಇದರ ವಿಡಿಯೋ ವೈರಲ್ ಆಗಿದೆ.
ಅಷ್ಟಕ್ಕೂ ಆಗಿದ್ದೇನೆಂದ್ರೆ, ಟಿಕಮ್‌ಗಢ ಜಿಲ್ಲೆಯ ಬಡಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಗುವಾ ಗ್ರಾಮದಲ್ಲಿ ರೈತನೊಬ್ಬನ ಶವ ಪತ್ತೆಯಾಗಿತ್ತು. ಹಿಂದಿನ ರಾತ್ರಿ ತಮ್ಮ ಜಮೀನಿಗೆ ಹೋಗಿದ್ದ ರೈತ ವಾಪಸ್ ಬಂದಿರಲಿಲ್ಲ. ಮಾರನೆಯ ದಿನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕುಟುಂಬಸ್ಥರು ಬಡಗಾಂವ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ಹೋಗಿದ್ದರು. ಆದರೆ ಬುಧೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವ ಹಿನ್ನೆಲೆಯಲ್ಲಿ, ತಮ್ಮ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ಆಗುವುದಿಲ್ಲ. ಅಲ್ಲಿಗೇ ಹೋಗಬೇಕು ಎಂದಿದ್ದಾರೆ ಪೊಲೀಸರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಬಡಗಾಂವ-ಖರ್ಗಾಪುರ ಹೆದ್ದಾರಿ ತಡೆ ನಡೆಸಿದರು. ಈ ಹಿನ್ನೆಲೆಯಲ್ಲಿ, ಸಂಚಾರ ಅಸ್ತವ್ಯಸ್ತಗೊಂಡು ಒಂದು ಗಂಟೆಗೂ ಹೆಚ್ಚು ಕಾಲ ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿ ಹತೋಟಿಗೆ ತರಲು ಬರಗಾಂವ ಪೊಲೀಸ್ ಠಾಣೆಯ ಪ್ರಭಾರಿ ಅನುಮೇಹ ಗುಪ್ತಾ ಸ್ಥಳಕ್ಕೆ ಆಗಮಿಸಿ ಸಮಾಧಾನಪಡಿಸಲು ಯತ್ನಿಸಿದರು.
ಎಂಟು ಮದುವೆಯಾದ ಕಿರುತೆರೆ ಅಣ್ಣಯ್ಯ ನಟಿ ನಿಶಾ ರವಿಕೃಷ್ಣನ್! ಈಕೆಯ ಸ್ಟೋರಿ ಕೇಳಿ...
ಮಾತಿಗೆ ಮಾತು ಬೆಳೆದಿದೆ. ವಿಷಯ ಉಲ್ಬಣಗೊಂಡಿದೆ. ಆಗ ಯುವಕನೊಬ್ಬ ಲೇಡಿ ಪೊಲೀಸ್ ಅನುಮೇಹ ಗುಪ್ತಾ ಅವರ ಬಳಿಗೆ ಬಂದು ಘಟನೆಯನ್ನು ವಿವರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಲೇಡಿ ಪೊಲೀಸ್ ಆತನ ಕೆನ್ನೆಗೆ ಬಾರಿಸಿದ್ದಾರೆ. ಅಷ್ಟಕ್ಕೂ ಪೊಲೀಸ್ಗೆ ಸಿಟ್ಟು ಬರಲು ಕಾರಣ, ಯುವಕ ಅವರ ಗಮನ ಸೆಳೆಯಲು ತೋಳಿಗೆ ಹೊಡೆದಿದ್ದಾನೆ. ಇದರಿಂದ ಅನುಮೇಹ ಗುಪ್ತಾ ಅವರಿಗೆ ಸಿಟ್ಟು ಬಂದು ಆತನಿಗೆ ಹೊಡೆದಿದ್ದಾರೆ. ಕೂಡಲೇ ಪ್ರತಿಭಟನೆ ಕಾವೇರಿದೆ. ಹಲ್ಲೆಯಿಂದ ಆಕ್ರೋಶಗೊಂಡ ಸ್ಥಳೀಯರು ಏಕಾಏಕಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. "ನೀವು ಯಾರನ್ನಾದರೂ ಹಾಗೆ ಹೊಡೆಯಲು ಸಾಧ್ಯವಿಲ್ಲ," ಅವರು ಹೇಳಿದರು. ಜಗಳ ವಿಕೋಪಕ್ಕೆ ಹೋದಾಗ ಅದೇ ಯುವಕ ತಿರುಗಿ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ.
ಈ ಮೊದಲು ತಮ್ಮ ದೂರನ್ನು ದಾಖಲಿಸಿಲ್ಲ ಎನ್ನುವ ಸಿಟ್ಟು ಕೂಡ ಈ ಗ್ರಾಮಸ್ಥರಿಗೆ ಇತ್ತು. ಇದೇ ಕಾರಣದಿಂದ, ಸ್ಥಳೀಯರು ಕೂಡ ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚುವರಿ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಅನುಮೇಹ ಗುಪ್ತಾ ಅವರನ್ನು ಸುತ್ತುವರೆದು ಸುರಕ್ಷಿತವಾಗಿ ಕರೆದುಕೊಂಡು ಹೋಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಿದ್ದಕ್ಕಾಗಿ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಮದುವೆ ಫಿಕ್ಸ್ ಆಗ್ತಿದ್ದಂಗೆ ವಧು ಸೇರಿ ಅಮ್ಮ- ಅಜ್ಜಿ ಒಂದು ತಿಂಗಳು ಅಳ್ಬೇಕು, ಅದೂ ಬೇರೆ ಬೇರೆ ರಾಗದಲ್ಲಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ