ಸರ್ಕಾರಿ ಕಚೇರಿ, ಸಾರ್ವಜನಿಕ ಸೇವೆಗೆ ಗರಿಷ್ಠ ಲಂಚ ಪೀಕುವ ದೇಶ ಯಾವುದು?

First Published Dec 13, 2020, 5:33 PM IST

ಸರ್ಕಾರಿ ದಾಖಲೆ ಪತ್ರ, ಗುರುತಿನ ಚೀಟಿ, ವಾಸ ದೃಢೀಕರಣ ಪತ್ರ ಸೇರಿದಂತೆ ಒಂದಲ್ಲೂ ಒಂದು ಕಾರಣಕ್ಕೆ ಭಾರತದಲ್ಲಿ ಹುಟ್ಟಿದ ಎಲ್ಲರೂ ಸರ್ಕಾರಿ ಕಚೇರಿ ಮೆಟ್ಟಿಲು ಹತ್ತಲೇ ಬೇಕು. ಹಾಗಂತ ಲಂಚ ನೀಡದೇ ಒಂದು ಟೇಬಲ್‌ನಿಂದ ಮತ್ತೊಂದು ಟೇಬಲ್‌ಗೆ ದಾಖಲೆ ಪತ್ರಗಳು ರವಾನೆಯಾಗುವುದಿಲ್ಲ ಅನ್ನೋದು ಗೌಪ್ಯವಾಗಿ ಉಳಿದಿಲ್ಲ.  ಇದೀಗ  ಏಷ್ಯಾದಲ್ಲಿ ಸರ್ಕಾರಿ ಕೆಲಸಗಳಿಗೆ, ಸಾರ್ವಜನಿಕ ಸೇವೆಗಳಿಗೆ ಅತೀ ಹೆಚ್ಚು ಲಂಚ ಪೀಕುವ ದೇಶ ಯಾವುದು? ಇಲ್ಲಿದೆ ಪಟ್ಟಿ

ಸರ್ಕಾರಿ ಕಚೇರಿಗಳನಲ್ಲಿ ಕೆಲಸ, ಸಾರ್ವಜನಿಕ ಸೇವೆಗಳು ಹೋದ ತಕ್ಷಣ ಸಿಗುವುದಿಲ್ಲ ಅಥವಾ ಮುಗಿಯುವುದಿಲ್ಲ. ಒಂದು ದಾಖಲೆ ಪತ್ರ ಹಲವು ಅಧಿಕಾರಿಗಳ ಸಹಿಯೊಂದಿಗೆ ಅಂತಿಮ ಮುದ್ರೆ ಬೀಳಲು ಸರ್ಕಸ್ ಮಾಡಲೇಬೇಕು.
undefined
ಅಧಿಕಾರಿಗಳು ಕೈ ಬಿಸಿ ಮಾಡಿದರೆ ದಾಖಲೆ ಪತ್ರೆ ಯಾವುದೇ ಅಡೆ ತಡೆ ಇಲ್ಲದೆ ಅಥವಾ ಯಾವುದಾದರೊಂದು ದಾಖಲೆ ಲಗತ್ತಿಸಲು ಮರೆತು ಹೋಗಿದ್ದರೂ ನಿಮ್ಮ ಪತ್ರ ಕೈಸೇರಲಿದೆ. ಗ್ರಾಮ, ಪಟ್ಟಣ, ನಗರ ಸೇರಿದಂತೆ ದೇಶದ ಬಹುತೇಕ ಸಾರ್ವಜನಿಕ ಸೇವೆಗಳ ಅವಸ್ಥೆ ಇದು.
undefined
ಇದೀಗ ಈ ರೀತಿಯ ಸಾರ್ವಜನಿಕ ಸೇವೆಗಳಿಗೆ ಲಂಚ ಪೀಕುವ ಏಷ್ಯಾದ ದೇಶಗಳ ಪೈಕಿ ಭಾರತಕ್ಕೆ ಮೊದಲ ಸ್ಥಾನ. ಅಂತಾರಾಷ್ಟ್ರೀಯ ಏಜೆನ್ಸಿ ಗ್ಲೋಬಲ್ ಕರಪ್ಶನ್ ಬಾರೋಮೀಟರ್ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.
undefined
ಏಷ್ಯಾದ 17 ರಾಷ್ಟ್ರಗಳ ಆಡಳಿತ, ತಳಮಟ್ಟದ ಸರ್ಕಾರಿ ಕಚೇರಿ ಕೆಲಸ ಸೇರಿದಂತೆ ಹಲವು ಮಾನದಂಡಗಳನ್ನು ಹಿಡಿದು ಸಮೀಕ್ಷೆ ಮಾಡಲಾಗಿತ್ತು. ಇದರಲ್ಲಿ ಭಾರತದಲ್ಲಿ ಶೇಕಡಾ 39 ರಷ್ಟು ಸಾರ್ವಜನಿಕ ಸೇವೆಗಳು ಲಂಚವಿಲ್ಲದೆ ನಡೆಯುತ್ತಿಲ್ಲ ಅನ್ನೋದು ಬಹಿರಂಗವಾಗಿದೆ. ಇದು ಕೆಲ ಗ್ರಾಮ ಹಾಗೂ ಪಟ್ಟಣಗಳಲ್ಲಿ ಈ ಸಂಖ್ಯೆ ಶೇಕಡಾ 100.
undefined
ಕಳೆದ 12 ತಿಂಗಳ ಸಮೀಕ್ಷಾ ವರದಿಯಾಗಿದೆ. ಭಾರತ ನಂತರ ಎರಡನೇ ಸ್ಥಾನದಲ್ಲಿರುವ ಗರಿಷ್ಠ ಲಂಚಬಾಕ ದೇಶ ಕಾಂಬೋಡಿಯಾ(39%), 3ನೇ ಸ್ಥಾನದಲ್ಲಿ ಇಂಡೋನೇಷಿಯಾ(30%) ದೇಶವಿದೆ.
undefined
ಸಾರ್ವಜನಿಕ ಸೇವೆಗಳಿಗೆ ಹೆಚ್ಚಿನ ಸಮಸ್ಯೆ ಇಲ್ಲದೆ, ಕಡಿಮೆ ಲಂಚ ಪಡೆದುಕೊಳ್ಳದಿರುವ ದೇಶಗಳಲ್ಲಿ ಮಾಲ್ಡೀವ್ಸ್ ಮೊದಲ ಸ್ಥಾನದಲ್ಲಿದೆ. ಇಲ್ಲಿ ಭ್ರಷ್ಟಾಚಾರದ ಪ್ರಮಾಣ ಕೇವಲ 2%, ಇನ್ನು ಜಪಾನ್ ಶೇಕಡಾ 2 ಹಾಗೂ ಸೌತ್ ಕೊರಿಯಾ ಶೇಕಡಾ 10% ರಷ್ಟಿದೆ.
undefined
ಈ ಸಮೀಕ್ಷೆ ಮತ್ತೊಂದು ಅಂಶವನ್ನು ಬೆಳಕಿಗೆ ತಂದಿದೆ. ಈ ವರದಿ ಪ್ರಕಾರ ಗರಿಷ್ಠ ಪಡಯುವ ಸರ್ಕಾರಿ ಸೇವೆಗಳಲ್ಲಿ ಪೊಲೀಸ್ ಮೊದಲ ಸ್ಥಾನದಲ್ಲಿದೆ. ಪ್ರಮಾಣ ಶೇಕಡಾ 23.
undefined
ಪೊಲೀಸ್ ವಿಭಾಗದ ಬಳಿಕ ಗರಿಷ್ಠ ಲಂಚ ಕೇಳುವ ಇತರ ಸರ್ಕಾರಿ ಸೇವೆಗಳಲ್ಲಿ ಕೋರ್ಟ್ 17%, ಗುರುತಿನ ಚೀಟಿ ಸೇರಿದಂತೆ ಇತರ ದಾಖಲೆ ಪತ್ರ 17%, ಶಾಲೆ 14%, ಯುಟಿಲಿಟಿಸ್ 14%, ಸರ್ಕಾರಿ ಆಸ್ಪತ್ರೆ 10% ಸ್ಥಾನ ಪಡೆದಿದೆ.
undefined
ಮಾರ್ಚ್ 2019 ರಿಂದ ಸೆಪ್ಟೆಂಬರ್ 2020ರ ವರೆಗೆ 17 ದೇಶದ 20,00 ಮಂದಿಯನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಶೇಕಡಾ 38 ರಷ್ಟು ಮಂದಿ ಕಳೆದ 12 ತಿಂಗಳಲ್ಲಿ ಭ್ರಷ್ಟಚಾರ ಹೆಚ್ಚಾಗಿದೆ ಎಂದಿದ್ದಾರೆ. ಇನ್ನು ಶೇಕಡಾ 28 ರಷ್ಟು ಮಂದಿ ಕಡಿಮೆಯಾಗಿದ್ದಾರೆ ಎಂದಿದ್ದಾರೆ
undefined
ಶೇಕಡಾ 53 ರಷ್ಟು ಮಂದಿ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹಿಂಜರಿಯುತ್ತಾರೆ. ತಮ್ಮ ಕೆಲಸ, ದೈನಂದಿನ ಆದಾಯ, ಇತರ ಬೆದರಿಕೆ ಸೇರಿದಂತೆ ಹಲವು ಕಾರಣಗಳನ್ನು ನೀಡಿದ್ದಾರೆ
undefined
click me!